Advertisement
ನಗರದ ಗೋವಿಂದ ರಾಜನಗರ ವಿಧಾನಸಭಾ ಕ್ಷೇತ್ರದ ನಾಗರಭಾವಿ ವಾರ್ಡ್ ನಲ್ಲಿ ಈದ್ಗಾ ಮೈದಾನ ಕಾಂಪೌಂಡ್ ಪೂಜೆ ನೆರವೇರಿಸಿ ಮಾತನಾಡಿದ ಸೋಮಣ್ಣ, ಈ ಕೆಲಸಕ್ಕೂ ಜಾತಿ ಧರ್ಮಕ್ಕೂ ಸಂಬಂಧವಿಲ್ಲ. ಇದು ನನ್ನ ಕರ್ತವ್ಯ. ಒಬ್ಬ ಜನಪ್ರತಿನಿಯಾಗಿ ನಾನು ನನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದೇನೆ. ನಾವು ಭಾರತೀಯರು, ಹಿಂದೂ-ಮುಸ್ಲಿಮರು ಒಂದೇ ಮನೆಯವರು. ನೀವೂ ಅಲ್ಲಾ ಅಂತೀರಾ ನಾವು ಶಿವ ಅಂತೀವಿ, ಎಲ್ಲರಿಗೂ ದೇವರೊಬ್ಬನೇ ಎಂದರು.
Related Articles
Advertisement
ಈ ಕಾರ್ಯಕ್ರಮಕ್ಕೆ ನಾನು ಜಮೀರ್ ನ ಕರೆದುಕೊಂಡು ಬರಬೇಕು ಎಂದುಕೊಂಡಿದ್ದೆ. ಆದ್ರೆ ಅವನು ಬರಲಿಲ್ಲ. ಅವನು ನನ್ನ ಆತ್ಮೀಯ, ಅವನು ದಡ್ಡ ಅಲ್ಲ, ಕಿಲಾಡಿ. ಜಮೀರ್ ಕೇವಲ ಮುಸಲ್ಮಾರ ಎಂಎಲ್ ಎ ಅಲ್ಲ, ಎಲ್ಲಾ ವರ್ಗದವರ ಎಂಎಲ್ ಎ ಎಂದು ಹೇಳಿದರು.
ಇದನ್ನೂ ಓದಿ : ಲಡಾಖ್-ಫಿಂಗರ್ 4; ತಂತ್ರಗಾರಿಕೆಯಿಂದಲೇ ಚೀನಾ ಸೇನೆಯನ್ನು ಕಟ್ಟಿ ಹಾಕಿದ ಭಾರತೀಯ ಸೇನಾಪಡೆ!
ನಿಮಗೆ ನೂರು ಕೋಟಿ ರೂಪಾಯಿ ಕೆಲಸ ಇದ್ದರೂ ಪರವಾಗಿಲ್ಲ ನಾನು ಮಾಡಿಕೊಡುತ್ತೇನೆ. ಬೆಂಗಳೂರಿನಲ್ಲಿ ಒಂದು ಲಕ್ಷ ಮನೆ ಕೊಟ್ಟಿಕೊಡುತ್ತಿದ್ದೇನೆ. ಈ ವರೆಗೂ ಯಾರು ಚಾಲೆಂಜ್ ಹಾಕಿಲ್ಲ, ಜೂನ್ ಒಳಗೆ ಮನೆ ಕಟ್ಟಿಕೊಡುತ್ತೇನೆ. ಇದು ಆಗಿಲ್ಲ ಎಂದ್ರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದು ನಾನು ಮಾತ್ರ. ನಾನು ಕೆಲಸ ಮಾಡಿ ತೋರಿಸುತ್ತೇನೆ. ಯಾಕೆ ಈ ಹಿಂದೆ ಇದ್ದವರು ಮಾಡಲ್ಲಿಲ್ಲ..? ಎಂದು ಪ್ರಶ್ನಿಸಿದರು.
ನಾವ್ಯಾರು ನಿಮ್ಮ ಶತ್ರುಗಳಲ್ಲ, ನಾವು ಯಾರಿಗೂ ಅನ್ಯಾಯ ಮಾಡುವವರಲ್ಲ. ಇನ್ನೂ ಎರಡು ಮುಕ್ಕಾಲು ವರ್ಷ ನನಗೆ ಅಧಿಕಾರ ಇದೆ. ಅದನ್ನು ನೀವು ಉಪಯೋಗಿಸಿಕೊಳ್ಳಿ ಎಂದ ಸೋಮಣ್ಣ, ನನಗೆ ಬೆಂಬಲಿಸದಿದ್ದರೂ ಪರವಾಗಿಲ್ಲ, ಆದ್ರೆ ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.
ಕೆಲಸ ಮಾಡುವವರಿಗೆ ಅವಕಾಶ ಮಾಡಿಕೊಡಿ. ನಿಮ್ಮಲ್ಲಿರುವ ಬಡವರ ಲೀಸ್ಟ್ ಕೊಡಿ, ಅವರಿಗೆ ಮನೆ ಕೊಟ್ಟಿಕೊಡಲು ಮೂರುವರೆ ಲಕ್ಷ ರೂಪಾಯಿ ದುಡ್ಡು ಕೊಡುತ್ತೇವೆ ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಸಚಿವರು, ನಾಯಂಡ ಹಳ್ಳಿ ವಾರ್ಡ್ ಸಂಖ್ಯೆ – 131ರಲ್ಲಿ ಕಳೆದ 15 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರೈಲ್ವೆ ಅಂಡರ್ ಪಾಸ್ ಅನ್ನು ಅಭಿವೃದ್ದಿ ಪಡಿಸಿ ಲೋಕಾರ್ಪಣೆ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಅಭಿವೃದ್ಧಿಯೇ ನನ್ನ ಧ್ಯೇಯ, ತಾಂತ್ರಿಕವಾಗಿ ಸರ್ವೆ ಮಾಡಿಸಿ ಯಾರಿಗೂ ತೊಂದರೆ ಆಗದಂತೆ ಈ ಅಂಡರ್ ಪಾಸ್ ನಿರ್ಮಾಣ ಮಾಡಲಾಗಿದೆ. ಜನರ ಪ್ರತಿನಿಧಿಗಳು ಚುನಾವಣೆ ವೇಳೆ ನೀಡಿದ ಭರವಸೆಗಳನ್ನು ಈಡೇರಿಸಬೇಕೆನ್ನುವುದು ನನ್ನ ಸಂಕಲ್ಪವಾಗಿದೆ. ಈ ಅಂಡರ್ ಪಾಸ್ ಯೋಜನೆಯನ್ನು ಸುಮಾರು 8.30 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.