Advertisement
ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳಲು ಚಾಮರಾಜನಗರಕ್ಕೆ ಆಗಮಿಸಿದ ಸಚಿವರು ಮಾತನಾಡಿ, ವರುಣದಲ್ಲಿ ಸ್ಪರ್ಧೆ ವಿಚಾರ ಚರ್ಚೆ ಆಗಿರುವುದು ನಿಜ. ಆದರೆ ನಾನು ವರುಣದಿಂದ ಸ್ಪರ್ಧೆ ಮಾಡಲ್ಲ ಎಂದು ಹೈಕಮಾಂಡ್ ಗೆ ಅಭಿಪ್ರಾಯ ತಿಳಿಸಿದ್ದೇನೆ ಇದು ನನ್ನ ವಯಕ್ತಿಕ ಅಭಿಪ್ರಾಯ. ಪಕ್ಷದ ಅಭಿಪ್ರಾಯ ಏನಿದೆಯೋ ಅದನ್ನ ವರಿಷ್ಠರು ತೀರ್ಮಾನ ಮಾಡುತ್ತಾರೆ. ನನ್ನ ಅಭಿಪ್ರಾಯವನ್ನು ಹೈ ಕಮಾಂಡ್ ಗೆ ತಿಳಿಸಿದ್ದೇನೆ, ಬೆಂಗಳೂರಿನಲ್ಲಿ ಯಾರೂ ಸ್ವತಂತ್ರವಾಗಿ ನಿಂತು ಗೆದ್ದಿಲ್ಲ. ಕಾಂಗ್ರೆಸ್ ನಲ್ಲಿ ಎಸ್.ಎಂ. ಕೃಷ್ಣ ಬಿರುಗಾಳಿ ಇದ್ದಾಗಲೇ ನಾನು ಸ್ವತಂತ್ರವಾಗಿ ಗೆದ್ದಿದ್ದೇನೆ ಎಂದು ಹೇಳಿದರು.
ಚಾಮರಾಜನಗರಕ್ಕೆ ಬೇಟಿ ನೀಡಿದ ಅವರು ಚಾಮರಾಜನಗರದ ಅಭಿವೃದ್ಧಿಯ ಬಗ್ಗೆ ಮಾತನಾಡಿ ಅಲ್ಲೇ ಸ್ಫರ್ದಿಸುವ ಸುಳಿವನ್ನು ಕೊಟ್ಟಿದ್ದಾರೆ ಅದರಂತೆ ಮಲೈ ಮಹದೇಶ್ವರ ಆಶಿರ್ವಾದ ಪಡೆದ ಸಚಿವರು ಚಾಮರಾಜನಗರವನ್ನು ಮಾದರಿ ಜಿಲ್ಲೆ ಮಾಡಬೇಕು ಎಂಬುದು ನನ್ನ ಆಸೆ. ಚುನಾವಣೆ ಗಿಮಿಕ್ ಗಾಗಿ ನಾನು ಈ ಮಾತನ್ನು ಹೇಳುತ್ತಿಲ್ಲ, ಚಾಮರಾಜನಗರ ಕೇಂದ್ರವು ಅಲ್ಲ ತಾಲೂಕು ಅಲ್ಲದ ಸ್ಥಿತಿಯಲ್ಲಿದೆ. ಹಾಗಾಗಿ ಚಾಮರಾಜನಗರ ಅಭಿವೃದ್ಧಿ ಮಾಡಬೇಕು. ಭಗವಂತನ ಅಶಿರ್ವಾದದಿಂದ ಒಳ್ಳೆ ಕಾಲ ಬರ್ತಿದೆ. ಒಳ್ಳೆ ಕಾಲ ಬರ್ತಿದೆ ಅಂತ ಕೈ ಕಟ್ಟಿ ಕುಳಿತುಕೊಳ್ಳಬಾರದು ಎಂದು ಹೇಳಿದರು. ಇದನ್ನೂ ಓದಿ: ಸ್ವ ಇಚ್ಛೆಯಿಂದಲೇ ನಿವೃತ್ತಿ ಘೋಷಿಸಿದ್ದೇನೆ: Eshwarappa ಮೊದಲ ಪ್ರತಿಕ್ರಿಯೆ