Advertisement

UWW: ಭಾರತೀಯ ಕುಸ್ತಿ ಅಮಾನತು ಹಿಂದಕ್ಕೆ

11:15 PM Feb 13, 2024 | Team Udayavani |

ಹೊಸದಿಲ್ಲಿ: ಭಾರತೀಯ ಕುಸ್ತಿಪಟುಗಳ ಪಾಲಿಗೆ ಸಂತಸದ ಸುದ್ದಿಯೊಂದು ಬಿತ್ತರಗೊಂಡಿದೆ. ಯುನೈಟೆಡ್‌ ವರ್ಲ್ಡ್ ರೆಸ್ಲಿಂಗ್‌ (ಯು ಡಬ್ಲ್ಯು ಡಬ್ಲ್ಯು) ಭಾರತೀಯ ಕುಸ್ತಿ ಫೆಡರೇಶನ್‌ ಮೇಲಿನ ತಾತ್ಕಾಲಿಕ ಅಮಾನತನ್ನು ಮಂಗಳವಾರ ಹಿಂಪಡೆದಿದೆ.

Advertisement

ಜತೆಗೆ ಒಂದು ಷರತ್ತನ್ನೂ ವಿಧಿಸಿದೆ. ಕುಸ್ತಿಪಟುಗಳಾದ ಬಜರಂಗ್‌ ಪೂನಿಯ, ವಿನೇಶ್‌ ಫೋಗಟ್‌ ಮತ್ತು ಸಾಕ್ಷಿ ಮಲಿಕ್‌ ವಿರುದ್ಧ ಯಾವುದೇ ಕಠಿನ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಲಿಖೀತ ಭರವಸೆ ನೀಡಬೇಕೆಂದು ಸೂಚಿಸಿದೆ. ಮಾಜಿ ಅಧ್ಯಕ್ಷ ಬೃಜ್‌ ಭೂಷಣ್‌ ಸಿಂಗ್‌ ಕುಸ್ತಿಪಟುಗಳ ವಿರುದ್ಧ ಲೈಂಗಿಕ ಕಿರುಕುಳ ನೀಡಿದ್ದಾರೆಂದು ತೀವ್ರ ಪ್ರತಿಭಟನೆ ನಡೆಸಿದ್ದರು.
ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸದ ಕಾರಣ ವಿಶ್ವ ಕುಸ್ತಿ ಆಡಳಿತ ಸಂಸ್ಥೆ ಕಳೆದ ಆ. 23ರಂದು ಭಾರತೀಯ ಕುಸ್ತಿ ಫೆಡರೇಶನನ್ನು ಅಮಾನತುಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next