Advertisement
ತತ್‌ಕ್ಷಣದ ಉತ್ತರವೆಂದರೆ ಕೃಷ್ಣನು ದೇವೋತ್ತಮ. ಬೇರೆ ಮಾತಿನಲ್ಲಿ ಹೇಳುವುದಾದರೆ ಕೃಷ್ಣ ಎಲ್ಲ ರೀತಿಗಳಲ್ಲಿ ಆಕರ್ಷಕ ಆದುದರಿಂದ ಅವನು ದೇವೋತ್ತಮನು. ಸರ್ವಾಕರ್ಷಣೆಯ ತತ್ವದ ಆಚೆ ದೇವೋತ್ತಮ ಎನ್ನುವುದಕ್ಕೆ ಅರ್ಥವಿಲ್ಲ. ಒಬ್ಬ ವ್ಯಕ್ತಿಯು ಬಹಳ ಶ್ರೀಮಂತನಾಗಿದ್ದರೆ, ಬಹು ಐಶ್ವರ್ಯವಂತವನಾಗಿದ್ದರೆ ಅವನು ಜನಸಾಮಾನ್ಯರನ್ನು ಆಕರ್ಷಿಸುತ್ತಾನೆ.
Related Articles
Advertisement
ದೇವೋತ್ತಮ ಪರಮ ಪುರುಷನಾದ ಕೃಷ್ಣನು ಚಾರಿತ್ರಿಕ ವ್ಯಕ್ತಿ. ಈ ಜಗತ್ತಿನಲ್ಲಿ ಐದು ಸಾವಿರ ವರ್ಷಗಳ ಹಿಂದೆ ಕಾಣಿಸಿಕೊಂಡವನು. ಅವನು ಭೂಮಿಯ ಮೇಲೆ 125 ವರ್ಷಗಳ ಕಾಲ ಇದ್ದನು ಮತ್ತು ಮನುಷ್ಯನಂತೆ ನಡೆದುಕೊಂಡನು. ಆದರೆ ಅವನ ಚಟುವಟಿಕೆಗಳು ಅಸದೃಶ್ಯವಾದವು. ಅವನು ಕಾಣಿಸಿಕೊಂಡ ಕ್ಷಣದಿಂದ ನಿರ್ಗಮಿಸಿದ ಕ್ಷಣದವರೆಗೂ ಅವನ ಯಾವ ಚಟುವಟಿಕೆಗೂ ಜಗತ್ತಿನ ಚರಿತ್ರೆಯಲ್ಲಿ ಸದಸ್ಯವಿಲ್ಲ.
ಆದುದರಿಂದ ದೇವೋತ್ತಮ ಎಂದರೆ ನಮ್ಮ ಅರ್ಥವೇನು ಎಂದು ತಿಳಿದ ಯಾರೇ ಆಗಲಿ ಕೃಷ್ಣನು ದೇವೋತ್ತಮ ಪರಮ ಪುರುಷ ಎಂದು ಒಪ್ಪಿಕೊಳ್ಳುತ್ತಾರೆ.
ದೇವರನ್ನು ಕುರಿತು ಬೇರೆ ಬೇರೆ ರೀತಿಗಳಲ್ಲಿ ಮಾತನಾಡುವ, ಬೇರೆ ಬೇರೆ ವರ್ಗದ ಜನರು ಜಗತ್ತಿನಲ್ಲಿ ಇದ್ದಾರೆ. ಆದರೆ ವೈದ್ಯಕ ಸಾಹಿತ್ಯದ ಅಭಿಪ್ರಾಯದಲ್ಲಿ ಮತ್ತು ಶಂಕರ ರಾಮಾನುಜ ಮಧ್ವ ವಿಷ್ಣು ಸ್ವಾಮಿ ಚೈತನ್ಯ ಮಹಾಪ್ರಭು ಮೊದಲಾದ ಆಚಾರ್ಯರು ಮತ್ತು ಗುರು ಶಿಷ್ಯ ಪರಂಪರೆಯಲ್ಲಿ ಅವರ ಎಲ್ಲ ಅನುಯಾಯಿಗಳು ಕೃಷ್ಣನು ದೇವೋತ್ತಮ ಪರಮಪುರುಷ ಎಂದು ಒಮ್ಮತದಿಂದ ಒಪ್ಪಿಕೊಳ್ಳುತ್ತಾರೆ.
ವೈದ್ಯಕ ಸಂಸ್ಕೃತಿಯ ಅನುಯಾಯಿಗಳಾದ ನಮ್ಮ ಮಟ್ಟಿಗೆ ನಾವು ಇಡೀ ವಿಶ್ವದ ವೈದಿಕ ಇತಿಹಾಸವನ್ನು ಒಪ್ಪಿಕೊಳ್ಳುತ್ತೇವೆ. ವಿಶ್ವದಲ್ಲಿ ಬೇರೆ ಬೇರೆ ಲೋಕಗಳಿವೆ ಇವಕ್ಕೆ ಸ್ವರ್ಗ ಲೋಕಗಳು ಎಂದು ಹೆಸರು. ಹೀಗೆಂದರೆ ಉನ್ನತ ಲೋಕಗಳ ವ್ಯವಸ್ಥೆ ಮರ್ತ ಲೋಕ ಅಥವಾ ಮಧ್ಯದಲ್ಲಿರುವ ದುಃಖ ಮತ್ತು ಪಾತಾಳ ಲೋಕ ಭೂಮಿಯ ಆಧುನಿಕ ಇತಿಹಾಸಕಾರರು 5,000 ವರ್ಷಗಳಿಗೆ ಮೊದಲು ನಡೆದ ಚಾರಿತ್ರಿಕ ಘಟನೆಗಳ ಸಾಕ್ಷವನ್ನು ಕೊಡಲಾರರು.
40,000 ವರ್ಷಗಳ ಹಿಂದೆ ಹೋಮೋ ಸೇಪಿಯನ್ನರು ಎಂದರೆ ಯೋಚಿಸುವ ಶಕ್ತಿ ಇದ್ದ ಮನುಷ್ಯರು ಈ ಗ್ರಹದಲ್ಲಿ ಕಾಣಿಸಿಕೊಂಡಿರಲಿಲ್ಲ. ಏಕೆಂದರೆ ವಿಕಾಸವು ಆ ಬಿಂದುವನ್ನು ಮುಟ್ಟಿರಲಿಲ್ಲ ಎಂದು ಮಾನವ ವಿಜ್ಞಾನಿಗಳು ಹೇಳುತ್ತಾರೆ. ಆದರೆ ವೈಯಕ್ತಿಕ ಇತಿಹಾಸಗಳಾದ ಪುರಾಣಗಳು ಮತ್ತು ಮಹಾಭಾರತವೂ ಕೋಟ್ಯಂತರ ವರ್ಷಗಳ ಹಿಂದೆ ನಡೆದ ಮಾನವ ಚರಿತ್ರೆಗಳನ್ನು ಬಿತ್ತರಿಸುತ್ತದೆ.
ಕೃಷ್ಣನು ಸರ್ವಾಕರ್ಷಕನಾದ್ದರಿಂದ ಮನುಷ್ಯನು ತನ್ನ ಎಲ್ಲ ಬಯಕೆಗಳನ್ನು ಅವನಲ್ಲಿ ಕೇಂದ್ರೀಕರಿಸಬೇಕೆಂದು ತಿಳಿದುಕೊಳ್ಳಬೇಕು. ಒಂದು ದೇಹಕ್ಕೆ ಒಬ್ಬ ವ್ಯಕ್ತಿಯು ಯಜಮಾನ. ಆದರೆ ಪ್ರತಿಯೊಬ್ಬರ ಹೃದಯದಲ್ಲಿ ಪರಮಾತ್ಮನಾಗಿ ಇರುವ ಕೃಷ್ಣನು ಪ್ರತಿಯೊಂದು ದೇಹದ ಒಡೆಯ ಹೀಗಿರುವುದರಿಂದ ನಮ್ಮ ಒಲವಿನ ಪ್ರವೃತ್ತಿಗಳನ್ನು ಕೃಷ್ಣ ನಲ್ಲಿ ಮಾತ್ರ ಕೇಂದ್ರೀಕರಿಸಿದರೆ ಕೂಡಲೇ ವಿಶ್ವಪ್ರಿಯ ಏಕತೆ ಮತ್ತು ಮನ ಶಾಂತಿಗಳ ಸಾಕ್ಷಾತ್ಕಾರವಾಗುತ್ತದೆ. ಆದ್ದರಿಂದ ನಾವು ಮಾಡುವ ಪ್ರತಿಯೊಂದು ಕಾರ್ಯಗಳು ಒಳ್ಳೆಯದಾಗಿರಬೇಕು ಆಗ ಮಾತ್ರ ದೇವರು ನಮ್ಮ ಆಂತರ್ಯದಲ್ಲಿ ವಾಸಿಸುವ.
-ಕಾರ್ತಿಕ್ ಹಳಿಜೋಳ
ಎಂ.ಎಂ. ವಿದ್ಯಾಲಯ ಶಿರಸಿ