Advertisement

UV Fusion: ಉಪಗ್ರಹಗಳ ಸ್ಮಶಾನ ಪಾಯಿಂಟ್‌ ನಮೋ

11:13 AM Sep 03, 2023 | Team Udayavani |

ಮನುಷ್ಯನ ಜೀವನ ನಶ್ವರ. ಹುಟ್ಟಿದ ಪ್ರತಿಯೊಬ್ಬರೂ ಒಂದು ದಿನ ಸಾಯಲೇಬೇಕು. ಸಾವಿನ ಸುಂದರ ಮನೆಯೇ ಸ್ಮಶಾನ. ಇದೇ ರೀತಿ ಭೂಮಿಯಿಂದ ಕಳುಹಿಸಿದ ಉಪಗ್ರಹ ಕಾಲಾನಂತರ ಪತನವಾಗುತ್ತವೆ. ಅವು ಪತನವಾಗುವ ಸ್ಥಳವೇ ಪಾಯಿಂಟ್‌ ನೆಮೋ.

Advertisement

ಲ್ಯಾಟೀನ್‌ ಭಾಷೆಯಲ್ಲಿ ಪಾಯಿಂಟ್‌ ನೆಮೋ ಎಂದರೆ ಯಾರು ಇಲ್ಲದ ಸ್ಥಳ ಎಂದರ್ಥ. ಇದು ಜಗತ್ತಿನ ಅತ್ಯಂತ ನಿರ್ಜನ ಪ್ರದೇಶವಾಗಿದ್ದು, ಈ ಪ್ರದೇಶ ದಕ್ಷಿಣ ಪೆಸಿಫಿಕ್‌ ಸಮುದ್ರದ ಭಾಗವಾಗಿದೆ. ಭೂಮಿಯ ಮೇಲಿನ ಉಪಗ್ರಹಗಳ ಸ್ಮಶಾನವೆಂದು ಈ ಪಾಯಿಂಟ್‌ ನೆಮೋವನ್ನು ಕರೆಯಲಾಗುತ್ತದೆ.

ಮಾಹಿತಿಯ ಪ್ರಕಾರ ಈ ವರೆಗೆ ಸುಮಾರು 400 ಉಪಗ್ರಹಗಳು ಈ ಪಾಯಿಂಟ್‌ ನೆಮೋ ಸಮುದ್ರ ಭಾಗದಲ್ಲಿ ಬಿದ್ದಿವೆ. ಇದು ಎಷ್ಟು ನಿರ್ಜನ ಪ್ರದೇಶವೆಂದರೆ ಇಲ್ಲಿಂದ ಸುಮಾರು 22 ಮಿಲಿಯನ್‌ ಕಿ.ಮೀ. ಸುತ್ತಳತೆಯಲ್ಲಿ ಯಾವುದೇ ಭೂಭಾಗವಿಲ್ಲ. ಬರೀ ಸಮುದ್ರದ ನೀರಿನಿಂದ ಕೂಡಿದ ಜಗತ್ತಿನಿಂದ ಬೇರೆಯಾದ ಮತ್ತು ಇದೇ ಒಂದು ಜಗತ್ತಿನಂತೆ ಭಾಸವಾಗುವ ಪ್ರದೇಶವಾಗಿದೆ.

ಪಾಯಿಂಟ್‌ ನೆಮೋ ಪ್ರದೇಶಕ್ಕೆ ಅತ್ಯಂತ ಹತ್ತಿರ ಮನುಷ್ಯರಿರುವ ಸ್ಥಳವೆಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ. ಏಕೆಂದರೆ ಈ ಪ್ರದೇಶದದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಕೇವಲ 400 ಕಿ.ಮೀ. ದೂರದಲ್ಲಿದೆ. ಇದಕ್ಕೆ ಹತ್ತಿರವಿರುವ ಭೂಭಾಗವೆಂದರೆ ಚಿಲಿ. ಇದು 2,642 ಕಿ.ಮೀ. ದೂರದಲ್ಲಿದೆ. ಇಲ್ಲಿಂದ ಇತರೆ ಭೂಭಾಗಗಳ ದೂರ: ನ್ಯೂಜಿಲೆಂಡ್‌ 4,796 ಕಿ.ಮೀ., ಡ್ನೂಸ್‌ ದ್ವೀಪ 2,681 ಕಿ.ಮೀ.

ಈ ಪಾಯಿಂಟ್‌ ನೆಮೋ ಪ್ರದೇಶದಲ್ಲಿ ಸಮುದ್ರ ಜೀವಗಳ ಸಂಖ್ಯೆಯೂ ಕಡಿಮೆ. ಈ ಎಲ್ಲ ಕಾರಣದಿಂದಾಗಿ ವಿಜ್ಞಾನಿಗಳು ನಿಷ್ಕ್ರಿಯಗೊಂಡ ಉಪಗ್ರಹಗಳ ಅವಷೇಶಗಳನ್ನು ಇಲ್ಲಿ ಸೇರುವಂತೆ ಮಾಡುತ್ತಾರೆ. ಆದ್ದರಿಂದಲೇ ಈ ಪ್ರದೇಶವನ್ನು ಉಪಗ್ರಹಗಳ ಸ್ಮಶಾನವೆಂದು ಕರೆಯಲಾಗುತ್ತದೆ.

  • ರಾಸುಮ ಭಟ್‌, ಶಿವಮೊಗ್ಗ
Advertisement
Advertisement

Udayavani is now on Telegram. Click here to join our channel and stay updated with the latest news.

Next