Advertisement

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

11:36 AM Apr 25, 2024 | Team Udayavani |

ನಗು ಮಾನವನ ಸಹಜ ಪ್ರಕ್ರಿಯೆ.ನಗುವುದರಿಂದ ಆರೋಗ್ಯವು ವೃದ್ಧಿಸುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.ಇತ್ತೀಚಿನ ದಿನಗಳಲ್ಲಿ ಮನಸ್ಸು ಬಿಚ್ಚಿ ನಗುವವರನ್ನು ಕಾಣುವುದೇ ಅಪರೂಪವಾಗಿದೆ. ಯಾಕೆಂದರೆ ಜೀವನವೆಂಬ ಸಾಗರದಲ್ಲಿ ಮುಳುಗಿ ಏಳುವಷ್ಟರಲ್ಲಿ ನಗುವೆಂಬುದೇ ಮಾಸಿ ಹೋಗಿರುತ್ತದೆ. ನಗುವನ್ನು ಕಲಿಸಿದ ಜೀವನ ಅಳುವುದನ್ನು ಕಲಿಸುತ್ತದೆ. ಈಗಿನ ಸಮಾಜದಲ್ಲಿ ಧನ ಸಂಪಾದಿಸುದಕ್ಕಿಂತ ಸಂತೋಷವನ್ನು ಹುಡುಕುವುದರಲ್ಲೇ ತಮ್ಮ ಅರ್ಧ ಜೀವನವನ್ನು ಕಳೆದಿರುತ್ತಾರೆ.

Advertisement

ಒಂದಷ್ಟು ಜನರೊಂದಿಗೆ ಬೆರೆಯಲು ಸಹಕಾರಿಯಾಗುವ ಸಾಧನವೆಂದರೆ ಅದು ನಗು. ಒಮ್ಮೊಮ್ಮೆ ಅನಿಸುವುದು ಬಾಲ್ಯದ ಜೀವನವೇ ಚಂದವೆಂದು ಅಲ್ಲಿ ಯಾವುದೇ ರೀತಿಯ ಮನಸ್ತಾಪಗಳು,ಚಿಂತೆಗಳು ಇರುತ್ತಿರಲಿಲ್ಲ ಹಸನ್ಮುಖದಿಂದ ಎಲ್ಲವನ್ನೂ ನಿಭಾಯಿಸುತ್ತಿದ್ದೆವು ಆದರೆ ಈಗ ಆ ರೀತಿ ಇರಲು ಸಾಧ್ಯವಿಲ್ಲ.ಜೀವನ ಎಂಬ ಸಂತೆಯಲ್ಲಿ ನೋವು ನಲಿವು ಸಹಜ ಅದನ್ನಾವುದನ್ನು ತಲೆಗೆ ಹಚ್ಚಿಕೊಳ್ಳದೆ ಯಾವಾಗಲೂ ನಗುತ್ತಲೇ ಇರಬೇಕು ಯಾಕೆಂದರೆ ನಮ್ಮ ಖುಷಿ ನೋಡಿ ಸಂತೋಷ ಪಡುವ ಮನಸ್ಸುಗಳು ಇದ್ದೆ ಇರುತ್ತದೆ.ಹಾಗೆಂದ ಮಾತ್ರಕ್ಕೆ ನಮ್ಮ ನಗು ಇನ್ನೊಬ್ಬರ ದುಃಖವನ್ನು ಕಡಿಮೆ ಮಾಡುವಂತಿರಬೇಕೆ ಹೊರತು ಜಾಸ್ತಿ ಮಾಡುವಂತಿರಬಾರದು.

ಒಬ್ಬ ವ್ಯಕ್ತಿ ಯಾವಾಗಲೂ ನಗುತ್ತಲೇ ಇರುತ್ತಾನೆ ಎಂದ ಮಾತ್ರಕ್ಕೆ ಅವನಿಗೆ ಯಾವುದೇ ನೋವು ಇಲ್ಲ ಎಂದರ್ಥವಲ್ಲ ತನ್ನ ಬೇಸರವನ್ನು ಯಾರೊಂದಿಗೂ ತೋರಿಸಬಾರದು ಹಾಗೇ ದುಃಖವನ್ನು ಮರೆ ಮಾಚುವು ದಕ್ಕೊಸ್ಕರ ಎಂದಿಗೂ ನಗೆಬೀರುತ್ತಾನೆ.ನಗುವೆಂಬ ಆಭರಣವು ಜೊತೆ ಇದ್ದಾಗ ಬೇರೆಯಾವುದೇ ಆಡಂಬರದ ಒಡವೆಗಳ ಅವಶ್ಯಕತೆ ಇರುವುದಿಲ್ಲ,ನಗು ನಮ್ಮ ಮುಖದ ಕಾಂತಿಯನ್ನು ಹೆಚ್ಚಿಸುವಂತೆ ಮಾಡುತ್ತದೆ.

ಹಾಸ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿ ತಮ್ಮ ಜೀವನವನ್ನು ಕಟ್ಟಿಕೊಂಡ ಹಾಸ್ಯ ಕಲಾವಿದರು, ತಮ್ಮೆಲ್ಲ ನೋವನ್ನು ಬದಿಗಿಟ್ಟು ಲೋಕದ ಜನರನ್ನು ನಗಿಸುವುದಕ್ಕಾಗಿ ಈಗಲೂ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಮನಸ್ಸು ಬಿಚ್ಚಿ ನಕ್ಕಾಗ ನಮ್ಮ ನೋವು ಮರೆ ಯಾಗುವುದರೊಂದಿಗೆ,ಇಡೀ ಜಗತ್ತು ನಮ್ಮ ಕಣ್ಣಿಗೆ ಸುಂದರವಾಗಿ ಕಾಣಿಸಲು ಪ್ರಾರಂಭವಾಗುತ್ತದೆ. ಓ ಮನವೇ ಒಮ್ಮೆಯಾದರೂ ನಕ್ಕು ಬಿಡು ತನಗಾಗಿ ಅಲ್ಲದಿದ್ದರೂ ತನ್ನವರಿಗಾಗಿ.

-ಲಾವಣ್ಯ ನಾಗತೀರ್ಥ

Advertisement

 ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next