Advertisement

UV Fusion: ನೋವಿನಲ್ಲೂ ನಗುವಿರಲಿ

12:17 PM Feb 08, 2024 | Team Udayavani |

ವ್ಯಕ್ತಿತ್ವ ಹಾಗೂ ಸಂದರ್ಭ ನೋಡಿ ಸುಮ್ಮನೆ ಒಂದು ಸೆ¾„ಲ್‌ ಕೊಡೋಣ. ಮುಂದೆ ಇರುವ ವ್ಯಕ್ತಿ ಮನೋಭಾವ ಅಳೆಯುವ  ಮನೋವೈದ್ಯರು ನಾವುಗಳಲ್ಲ. ಒಂದು ಪುಟ್ಟ ಮನಸ್ಸಿನ ಭಾವನೆಗಳ ಗಾತ್ರ ಅಳೆಯಲು ನಮ್ಮಿಂದ ಅಸಾಧ್ಯ ಆದರೂ ನಮ್ಮ ಮುಂದೆ ಇರುವ ಮನುಷ್ಯ ನಮಗೆ ಪರಿಚಯ ಎಂದು ಖಾತ್ರಿಯಾದ ಕೂಡಲೇ ಒಂದು ಸಣ್ಣ ಮುಗುಳುನಗೆ ಕೊಟ್ಟರೆ ನಮ್ಮ ಅಕೌಂಟ್‌ ಇಂದ ಹಣ ಕಡಿತಗೊಳ್ಳುವುದಿಲ್ಲ. ನಮ್ಮನ್ನು ನೋಡಲಿ ಒಂದು ಬಾರಿ ಅವರೇ ನಗಲಿ ಬಳಿಕ ನಾವು ಸಣ್ಣಕ್ಕೆ ನಕ್ಕು ವಿಷಯ ಮುಗಿಸೋಣ ಎಂದು ಎಂದಿಗೂ ಭಾವಿಸಬೇಡಿ. ಯಾಕೆಂದರೆ, ನಗುವುದರಲ್ಲಿ ನಮ್ಮ ಅಹಂಕಾರದ ಆವಶ್ಯಕತೆ ಇಲ್ಲ. ನಗುವಿನಲ್ಲಿ ನೈಜತೆ ಬೇಕೆ ಹೊರತು ಸ್ವಾರ್ಥತೆ ಅಲ್ಲ !

Advertisement

ನಾವು ದಿನ ನಿತ್ಯದ ಕೆಲಸದ ಮಧ್ಯದಲ್ಲಿ ನಗು ಎಂಬ ಪದದ ಅರ್ಥವನ್ನೇ ಮರೆತು ಬಾಳುವುದನ್ನು ರೂಢಿಸಿಕೊಂಡಿದ್ದೇವೆ.ಇದು ನಿಜವಾಗಲು ಆರೋಗ್ಯಕ್ಕೆ ಹಾನಿಕಾರಕವೂ ಹೌದು. ನಗು ಇಲ್ಲದ ದಿನ ಸಂಪೂರ್ಣವಾಗಿ ವ್ಯರ್ಥ. ಒಂದು ಬಾರಿ ನಗುವುದರಿಂದ ನಮ್ಮ ದೈನಂದಿನ ಚಟುವಟಿಕೆಯಲ್ಲಿ ಬಹಳ ಚುರುಕುತನ ಕಾಣಬಹುದು. ಇನ್ನು ನಗುವುದರಿಂದ ನಮಗೆ ಏನು ಪ್ರಯೋಜನ ?

ನಾವು ನಗೋದೆ ಇಲ್ಲ, ನಮ್ಮ ಕಷ್ಟಗಳ ಮಧ್ಯದಲ್ಲಿ ನಗುವಿಗೆ ಜಾಗವಿಲ್ಲ, ನಾವು ಇರೋದೇ ಹೀಗೆ  !  ಇಂತಹ ಮಾತಿನಲ್ಲೂ ಅರ್ಥವಿದೆ. ಆದರೂ ನಿಮ್ಮ ಬದುಕಿನಲ್ಲಿ ನಡೆದಿರುವ ಕಹಿ ಘಟನೆಗಳಿಗೆ ತಡೆಯೊಡ್ಡಲು ನೀವು ನಗದೆ ಇರಬಹುದು, ಆದರೆ ನಗುವಿನಿಂದ ಬಹಳಷ್ಟು ಆರೋಗ್ಯಕರ ಪ್ರಯೋಜನಗಳು ಇವೆ.

ಅವುಗಳೆಂದರೆ : ಕಡಿಮೆ ರಕ್ತದೊತ್ತಡ. ಹೆಚ್ಚಿದ ಸಹಿಷ್ಣುತೆ ಸರಿಸಮವಾಗಿ ನೋಡಿಕೊಳ್ಳುತ್ತದೆ.ಸಾಮಾನ್ಯವಾಗಿ ಚಾರ್ಲಿ ಚಾಪ್ಲಿನ್‌ ಬಗ್ಗೆ ಎಲ್ಲರಿಗೂ ತಿಳಿದಿದೆ. ಎಲ್ಲರಂತೆ ಇವರಲ್ಲ ಇವರ ಆರಂಭಿಕ ಕಥಾಘಟನೆ ಓದಿದರೆ ಎಷ್ಟೋ ಸಾಲು ಸಾಲು ನೋವನ್ನು ದಾಟಿ ಬಂದ ಪ್ರಸಿದ್ಧ ಹಾಸ್ಯ ನಟ.

ಇವರು ಜೀವನದಲ್ಲಿ ಪಟ್ಟಂತ ಕಷ್ಟ ,ಸಂಕಟ, ದುಃಖ, ನೋವು, ಅಳಲು, ಓದಿದಷ್ಟು  ಮುಗಿಯದು. ಇವರಿಂದ ಕಲಿತಷ್ಟು ತೀರದು. ಎಷ್ಟೇ ಇದ್ದರೂ ಎಲ್ಲವನ್ನು ಮರೆತು ತನ್ನ ಬಾಡಿದ ಮುಖ, ಮುರಿದ ಹೃದಯಕ್ಕೆ ಬಣ್ಣ ಬಳಿದು ಪೂರ್ತಿ ಜಗತ್ತೇ ನಗುವಂತೆ ಮಾಡಲಿಲ್ಲವೇ…!ಎಲ್ಲದಕ್ಕೂ ಒಂದು ಕೊನೆಯ ಘಟ್ಟ ಇದ್ದೆ ಇರುತ್ತದೆ. ಆದರೆ ನಮಗೆ ಕೊನೆಯೇ ಸಿಲುಕದ ಒಂದು ಮಾಯೆ ಎಂದರೆ ನಗುವಿಕೆ.

Advertisement

ನಗು ನಗುತ ನಲಿ ನಲಿ ಏನೇ ಆಗಲಿ ಎಲ್ಲ ದೇವನ ಕಲೆ ಎಂದೇ ನೀ ತಿಳಿ.  ಬಂಗಾರದ ಮನುಷ್ಯ ಚಿತ್ರದ ಹಾಡಿನಲ್ಲೂ ಹೇಳಿರುವುದು ಒಂದೇ ಎಷ್ಟೇ ಕಷ್ಟ ಬಂದರು ನಗುವೊಂದು ಜತೆಗಿರಲಿ ಎಂದು. “ಬರಲಿ ನೋವು ನೂರು ಬಗೆ ಇರಲಿ ಒಂದು ಮುಗುಳುನಗೆ’ ಈ ಮಾತಿನಂತೆ ನೀವು ಎಷ್ಟೇ ಹತಾಶರದರು ಒಮ್ಮೆ ಆದರೂ ನಕ್ಕು ಬಿಡಿ, ಯಾಕೆಂದರೆ ನಮ್ಮ ಒಂದು ಸಣ್ಣ ಕಿರುನಗು ಮುಂದೆ ಇರುವಂತಹ ಮನುಷ್ಯನ ಜೀವನವನ್ನೇ ಬದಲಾಯಿಸುವಂತ ಶಕ್ತಿ ಸಾಮರ್ಥ್ಯ ಹೊಂದಿರುತ್ತದೆ. ನಮ್ಮ ಮುಂದೆ ಶತ್ರುವೇ ಬರಲಿ ಮಿತ್ರನೇ ಬರಲಿ ಮುಖದಲ್ಲಿ ಒಂದು ಹುಸಿನಗು ಸದಾ ಇರಲಿ.

ನಗುವೊಂದೆ ಮೂಲ ಸೂತ್ರ, ನೋವು ಕೂಡ ಬರದು ಹತ್ರ.

-ರಕ್ಷಿತ್‌ ಆರ್‌.ಪಿ.

ಎಂಜಿಎಂ ಕಾಲೇಜು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next