Advertisement
ಭೂಮಿಯಾಚೆಗಿನ ಪ್ರಪಂಚದ ಬಗ್ಗೆ ತಿಳಿಯುವ ಬಯಕೆ. ಇದು ಒಮ್ಮೆ ಮಾತ್ರ. ಯಾಕೆಂದರೆ ಕಾಲಕ್ಕೆ ತಕ್ಕಂತೆ ಕನಸೂ ಬದಲಾಗುತ್ತಲೇ ಇತ್ತು. ಕವಿ, ಬರಹಗಾರ್ತಿ, ಶಿಕ್ಷಕಿ, ನರ್ತಕಿ… ಹೀಗೆ ಏನೇನೋ ಆಗಬೇಕೆಂದು ಕಲ್ಪಿಸುತ್ತಿದ್ದೆ.
Related Articles
Advertisement
ಹೀಗಿರುವಾಗ 2018ರಲ್ಲಿ ಕೊರಿಯಾದ ಪಾಪ್ ಗಾಯನ ತಂಡ ಬಿ.ಟಿ.ಎಸ್.(ಆಖಖ)ಬಗ್ಗೆ ತಿಳಿದುಕೊಂಡೆ. ಇದು ಏಳು ಜನರ ತಂಡವಾಗಿತ್ತು. ಮೂರು ಜನ ರಾಪರ್ ಹಾಗೂ ನಾಲ್ಕು ಮಂದಿ ಗಾಯಕರು. ಅದರಲ್ಲಿ ಒಬ್ಬ ಗಾಯಕನಂತೂ ನನ್ನನ್ನು ತುಂಬಾ ಆಕರ್ಷಿಸಿದ್ದ. ಅವನೇ ಮಿನ್ ಯೂಂಗಿ. ಅವನು ಸಾಲುಗಳನ್ನು ಗೀಚುತ್ತಾ ಸಂಗೀತ ಲೋಕವನ್ನೇ ಸೃಷ್ಟಿಸಿದ್ದ. ಮಿನ್ ಯೂಂಗಿ ಬಡ ಕುಟುಂಬದಿಂದ ಬಂದವನು. ಆತನ ಹೆತ್ತವರು ಅವನ ಆಸಕ್ತಿಗೆ ಪ್ರೋತ್ಸಾಹ ನೀಡುವ ಬದಲಾಗಿ ಅವನ ಬರಹಗಳನ್ನೇ ಹರಿದು ಎಸೆಯುತ್ತಿದ್ದರು.
ಆತನ ಬರಹಗಳು ಮಾನಸಿಕ ಆರೋಗ್ಯ, ಜೀವನದ ಗುರಿ, ಸಮಾಜ.. ಹೀಗೆ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಿದ್ದವು. ಇದೇ ಕಾರಣಕ್ಕೆಇರಬೇಕು ಅವನ ಹಾಡು, ಬರಹಗಳು ನನಗೆ ಇಷ್ಟವಾಗುತ್ತಿ ದ್ದುದು. ಇವನ ಬಗ್ಗೆ ಯಾಕಿಷ್ಟು ಹೇಳಿದೆ ಅಂದರೆ ನನ್ನಲ್ಲೀಗ ಹೊಸ ಕನಸು ಮೂಡಿದೆ. ನನ್ನ ಕನಸು, ಬದುಕು ಏನಿದ್ದರೂ ಸಂಗೀತ ಎಂದೇ ಅನಿಸಿಬಿಟ್ಟಿದೆ. ಮಿನ್ ಯೂಂಗಿ ಸಾಧನೆ ನನ್ನ ಕನಸಿನ ದೀಪಕ್ಕೆ ತೈಲವಿದ್ದಂತೆ.ಎಲ್ಲರ ಮನಮುಟ್ಟುವಂತೆ ಹಾಡುವ ಬಯಕೆ ಒಂದೆಡೆಯಾದರೆ ಎಲ್ಲರನ್ನೂ ತಲುಪುವಂಥ ಹಾಡು ಬರೆಯುವ ಬಯಕೆ ಮತ್ತೂಂದೆಡೆ. ಹಾಡಿನ ಸಾಲುಗಳನ್ನೇ ಜನರೊಂದಿಗೆ ಮಾತ ನಾಡುವ ಆಸೆ. ಸದ್ಯಕ್ಕೆ ಇದು ನನ್ನ ಕನಸು. ನನ್ನ ಕನಸನ್ನು ನನಸಾಗಿಸಲೇ ಬೇಕೆಂಬ ಛಲ, ಹುಮ್ಮಸ್ಸು ಈಗ ಮೂಡಿದೆ.
- ಅಶ್ವಿನಿ ರಾವ್, ಗೋವಿಂದ ದಾಸ ಕಾಲೇಜು, ಸುರತ್ಕಲ್