Advertisement
ಆದರೆ ಆ ಹೆಣ್ಣಿನ ಮನಸ್ಸನ್ನು ಅರಿತವರ್ಯಾರು? ಅವಳ ಅಂತರಂಗವನ್ನು ಅರಿಯದೆ ಅವಳ ಬಹಿರಂಗ ಸೌಂದರ್ಯವನ್ನು ವರ್ಣಿಸುವ ಸಮಾಜದ ಮನಸ್ಥಿತಿ ಬದಲಾಗಬೇಕಿದೆ. ಒಂದು ಹೆಣ್ಣಿನ ಮೇಲೆ ಗಂಡಿಗಿರುವ ಮನಸ್ಥಿತಿ ಬದಲಾಗದ ಹೊರತು ನಮ್ಮ ಸಮಾಜದ ಪರಿಸ್ಥಿತಿ ಬದಲಾಗದು.
Related Articles
Advertisement
ಮಹಿಳಾ ದಿನಾಚರಣೆ ಕಾರ್ಯಕ್ರಮ ಎಂದರೆ ಕೇವಲ ಮಾತಿಗೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿಯೂ ಒಂದು ಭಿನ್ನತೆ ಇದೆ. ಒಂದಿಷ್ಟು ಸ್ಪರ್ಧೆಗಳ ಮೂಲಕ ಮಹಿಳಾ ದಿನಾಚರಣೆ ವಿಶೇಷವಾಗಿ ಇತ್ತು. ಮಹಿಳಾ ದಿನಾಚರಣೆ ಅಂಗವಾಗಿ ಅವಳು ಎನ್ನುವ ವಿಷಯದ ಭಾಷಣ ಸ್ಪರ್ಧೆಯನ್ನು ಕೇವಲ ಗಂಡು ಮಕ್ಕಳಿಗೆ ಮಾತ್ರ ಏರ್ಪಡಿಸಲಾಗಿತ್ತು. ಕಾರಣವೇನೆಂದರೆ ಸಮಾಜದಲ್ಲಿ ಹೆಣ್ಣಿನ ಸಮಸ್ಯೆ ಹೆಣ್ಣಿಗೆ ಅರಿವಿದೆ. ಆದರೆ ಗಂಡಿಗೂ ಹೆಣ್ಣಿನ ಮನಸ್ಥಿತಿ ಅರಿಯಬೇಕು ಎನ್ನುವ ಉದ್ದೇಶವಿತ್ತು. ಇನ್ನು ಅವಳು ವಿಷಯದ ಕುರಿತು ರಂಗೋಲಿ ಸ್ಪರ್ಧೆಯು ಬಹಳ ಉತ್ತಮವಾಗಿ ಮೂಡಿ ಬಂದಿದೆ. ಅವಳು ಬಿಂದುವಿನ ಮೂಲಕ ಬಣ್ಣ ಬಣ್ಣಗಳ ಚಿತ್ರಗಳ ರಂಗೋಲಿ ಅಲ್ಲಿ ಮೂಡಿ ಬಂದಿದ್ದಾಳೆ. ಇನ್ನೊಂದು ವಿಶೇಷ ಸ್ಪರ್ಧೆ ನೀ ನಾಯಕಿ ಎನ್ನುವ ಕುರಿತು ವಿಡಿಯೋ ಮೇಕಿಂಗ್ ಸ್ಪರ್ಧೆ.
ಸುಮಾರು 20 ತಂಡಗಳು ಭಾಗವಹಿಸಿದ್ದವು. ದೃಶ್ಯಗಳಲ್ಲಿ ಸೆರೆಹಿಡಿದ ತುಣುಕು ನೀ ನಾಯಕಿ ಎನ್ನುವ ಸಂದೇಶವನ್ನು ಚಿತ್ರದಲ್ಲಿ ಮಾತ್ರವಲ್ಲದೇ ಬದುಕಿನಲ್ಲಿ ವ್ಯಕ್ತವಾಗಿದೆ ಎನ್ನುವುದು ನನ್ನ ಭಾವನೆ. ಅಲ್ಲದೇ ಕಾಲೇಜಿನಲ್ಲಿ ಕ್ರೀಡೆ, ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಸಮ್ಮಾನಿಸಲಾಯಿತು.
ಕಾಲೇಜೊಂದರಲ್ಲಿ ಮಹಿಳಾ ದಿನಾಚರಣೆಯನ್ನು ಹೀಗೂ ಆಚರಿಸಬಹುದು ಎಂದು ಸಾಬೀತುಪಡಿಸಿದೆ ನಮ್ಮ ಕಾಲೇಜು. ಇಡೀ ಕಾರ್ಯಕ್ರಮದ ಉದ್ದೇಶ ಇಷ್ಟೇ, ಹೆಣ್ಣಿನ ಜೀವನದ ಭಾವನೆಗಳನ್ನು ಪುರುಷ ಅರ್ಥ ಮಾಡಿಕೊಳ್ಳಬೇಕೆಂದು.
- ಸುಜಯ್ ಶೆಟ್ಟಿ
ಡಾ| ಬಿ.ಬಿ. ಹೆಗ್ಡೆ ಫಸ್ಟ್ ಗ್ರೇಡ್ ಕಾಲೇಜು