Advertisement
ಗಾಳಿ ಮಿಂಚು ಗುಡುಗು ಸಿಡಿಲಿನ ಆರ್ಭಟಕ್ಕೆ ಮೂಡುವ ಆತಂಕ, ತಂಪಾಗಿ ಬೀಸುವ ಗಾಳಿ ಜತೆಗೆ ಜಿಟಿ-ಜಿಟಿ ಸದ್ದು ಮಾಡುವ ಮಳೆಹನಿ ಮನದಲ್ಲಿ ಬಾಲ್ಯದ ನೆನಪುಗಳು ಒಂದು ಕ್ಷಣ ಕಣ್ಮುಂದೆ ಬಂದು ಹೋಗುತ್ತದೆ. ಎಲ್ಲರ ಮೊಗದಲ್ಲಿ ಮಂದಹಾಸ ಮೂಡಿಸುತ್ತದೆ. ಮಕ್ಕಳ ಪಾಲಿಗೆ ಮಳೆ ಅನ್ನೋದು ಗೆಳೆಯ ರೊಂದಿಗೆ ಕೊಡೆ-ರೈನ್ ಕೋ ಟ್ ತೆಗೆದುಕೊಂಡು ಹೋಗುವುದೇ ಒಂದು ಖುಷಿ.
Related Articles
Advertisement
ಹೀಗೆ ಮಳೆ ಬಂತು ಅಂದರೆ ಸಾಕು ತಲೆಯೆತ್ತಿ ನೇರವಾಗಿ ಸುರಿಯುವ ಮಳೆಗೆ ನಾಲಿಗೆ ಚಾಚಿ ಮಳೆಹನಿಗಳು ಕುಡಿದು ಕೆಸರು ಕಂಡರೆ ಸಾಕು ಜಿಗಿದಾಡುವ ಕೆಸರಾಟ. ಅಲ್ಲಲ್ಲಿ ನಿಂತ ನೀರಿನಲ್ಲಿ ಆಗ ತಾನೆ ಮೊಟ್ಟೆಯೊಡೆದು ಹೊರಬಂದ ಮರಿಗಳನ್ನು ಮೀನುಗಳು ಎಂದು ತಿಳಿದು ಆಶ್ಚರ್ಯವೆಂಬಂತೆ ನೋಡುತ್ತಿದ್ದ ಕ್ಷಣಗಳು ರೋಡಿನಲ್ಲಿ ಗಾಡಿಗಳ ಹಾಯ್ದು ಹೋಗಬೇಕಾದರೆ ಅದರಲ್ಲಿದ್ದ ಪೆಟ್ರೋಲ್ ರೋಡ್ ಮೇಲೆ ಬಿದ್ದಾಗ ಅದು ವಿವಿಧ ಬಣ್ಣಗಳ ಮಿಶ್ರಣ ಮಾಡಿ ಹಾಕಿದ ಹಾಗೆ ಕಾಣುತ್ತಿತ್ತು. ಅದನ್ನು ಕಂಡ ನಾವು ಕಾಮನಬಿಲ್ಲು ಎಂದು ತಿಳಿದು ಕಿರುಚಾಡಿದ ಕ್ಷಣಗಳು ಇಂದಿಗೂ ಹಚ್ಚ ಹಸಿರಾಗಿವೆ
ಮಳೆಯಲ್ಲಿ ನೆನೆದು ಬಟ್ಟೆಯನ್ನೆಲ್ಲ ಕೊಳೆ ಮಾಡಿಕೊಂಡು ಬಂದ ನಮಗೆ, ಮನೆಗೆ ಬರುತ್ತಲೇ ಬೈಗುಳ ಖಾಯಂ ಆಗಿರುತ್ತಿದ್ದವು. ಬೈಯುತ್ತಲೇ ಅಮ್ಮ ನಮಗೆ ಟವೆಲ್ ತೆಗೆದುಕೊಂಡು ಬಂದು ತಲೆಮರೆಸಿ ನಮಗೆ ಬಿಸಿಬಿಸಿಯಾದ ತಿಂಡಿಗಳನ್ನು ಮಾಡಿಕೊಡುತ್ತಿದ್ದಳು, ತಿಂಡಿ ತಿನ್ನುತ್ತ ನನಗಷ್ಟೇ ಬೈಯ್ಯುತ್ತಿ ನಿನ್ನ ದೊಡ್ಡ ಮಗಳಿಗೆ ಬೈಯೋದಿಲ್ಲ ಆಕಿ ಅಷ್ಟೇ ನಿನ್ ಮಗಳು ತಗೋ ಅಂತ ಅಂತಿದ್ದೆ. ಇವಾಗ ಇವನ್ನೆಲ್ಲ ನೆನಪಿಸಿಕೊಂಡರೆ ತುಂಬಾನೇ ನಗುಬರುತ್ತದೆ.
ಹೀಗೆ ಮಳೆ ಬಂತೆಂದರೆ ಸುರಿಯುವ ಮಳೆ ಹನಿಗಳ ಜೊತೆ ಅವಿಸ್ಮರಣೀಯ ಸಂಬಂಧ ತುಂಟಾಟ ತರ್ಲೆ ಮರೆಯಲಾಗದ ನೆನಪುಗಳು ಮತ್ತೆ ಮತ್ತೆ ನೆನಪಿನ ಬುತ್ತಿಯನ್ನು ಬಿಚ್ಚಿಡುವ ಹಾಗೆ ಮಾಡುವ ಕಾಲವನ್ನು ಮರೆಯಲು ಸಾಧ್ಯವೇ ಇಲ್ಲ.
–ಸೌಭಾಗ್ಯ
ನಾಗರಳ್ಳಿ