Advertisement
ನಮಗೆಲ್ಲ ತಿಳಿದ ಹಾಗೆ ದ್ರೋಣಚಾರ್ಯರು ಹಕ್ಕಿಯ ಕಣ್ಣಿಗೆ ಬಾಣ ಹೊಡೆಯಲು ಹೇಳಿದಾಗ ಅಲ್ಲಿ ಅನೇಕ ವೀರಾನುಪುರುಷರು ಇದ್ದರು ಹಾಗೆ ಅರ್ಜುನನು ಇದ್ದ, ಆದರೆ ಅಲ್ಲಿ ಹಕ್ಕಿಯ ಕಣ್ಣನ್ನು ಭೇದಿಸಿದ್ದು ಮಾತ್ರ ಅರ್ಜುನ ಯಾಕೆಂದರೆ ಆ ಗುರಿಯ ಸ್ಪಷ್ಟತೆ ಅವನಲ್ಲಿತ್ತು. ಜೀವನದಲ್ಲಿ ಗುರಿ, ಗುರು ಎಲ್ಲವೂ ಅಗತ್ಯ ಗುರುವಿನ ಮಾರ್ಗದರ್ಶನ ಅತ್ಯಂತ ಅಗತ್ಯ.
Related Articles
Advertisement
ಬಡತನದಲ್ಲಿ ಸಾಧಿಸುವ ಧೈರ್ಯ ಆತ್ಮವಿಶ್ವಾಸ ನಮ್ಮಲ್ಲಿದ್ದರೆ ಜಯ ಎಂದಿಗೂ ಶಾಶ್ವತ. ಹಾಗೆ ಸೂಕ್ತ ಸಮಯಬೇಕು ಎಂದು ಕಾಯುವುದಕ್ಕಿಂತ ನಾವೇ ಆ ಸಮಯವನ್ನು ಸೃಷ್ಟಿಸಿಕೊಳ್ಳಬೇಕು. ನಾಳೆ ಮಾಡುವೆ ಎನ್ನುವುದನ್ನು ಬಿಟ್ಟು ಇವತ್ತೇ ಮಾಡುವೆ ಎಂದು ಸಕಲ ನಿರ್ಧಾರ ನಮ್ಮದಾಗಬೇಕು.
ಬದುಕಿನಲ್ಲಿ ಸಾಧ್ಯ, ಅಸಾಧ್ಯ ಎನ್ನುವುದು ಗೆಲುವಿನ ಭಾಗ ಆದರೆ ಅಸಾಧ್ಯ ಅನ್ನೋದು ಯಾವುದು ಇಲ್ಲ. ಕಠಿನ ನಿರ್ಧಾರಗಳನ್ನು ಸುಲಭದಲ್ಲಿ ಯೋಚಿಸಿ ಎಲ್ಲವೂ ಸಾಧ್ಯ ಎಂದು ಗಟ್ಟಿ ಮನಸ್ಸಿನೊಂದಿಗೆ ಇರಬೇಕು. ಮೊದಲು ನಮ್ಮನ್ನು ನಾವು ಹುರಿದುಂಬಿಸಬೇಕು ಮತ್ತು ಅಗೇ ಆಗುತ್ತದೆ, ಮಾಡೇ ಮಾಡುತ್ತೇನೆ ಎಂಬ ಛಲದೊಂದಿಗಿರಬೇಕು.
ಕಳೆದು ಹೋದ ಕ್ಷಣಗಳನ್ನು ಮರೆತು ಮುಂದಿನ ದಿನಗಳನ್ನು ಯೋಚಿಸುವುದು ಬಿಟ್ಟು ಈ ದಿನ ನಾನು ಏನು ಮಾಡಬೇಕು ಎಂದು ಯೋಚಿಸುವುದು ಮುಖ್ಯ. ಪ್ರತಿಕ್ಷಣವು ಹೊಸತನವನ್ನು ಯೋಚಿಸುತ್ತಾ ಹೊಸ ಭರವಸೆಯೊಂದಿಗೆ ಗೆಲುವಿನ ಹಾದಿ ಹಿಡಿಯುವ. ನಮ್ಮ ಜೀವನ ನಮ್ಮ ಕೈಯಲ್ಲಿದೆ, ನಾವೇ ನಮ್ಮ ಜೀವನದ ಶಿಲ್ಪಿ, ಮಾಲಕರು ಕೂಡ.
–ಅನಿತಾ ಉಜಿರೆ