Advertisement

UV Fusion: ಪ್ರಕೃತಿ ಶಾಶ್ವತ ಮನುಷ್ಯನ ಕೊಡುಗೆ ನಿಮಿತ್ತ…

03:55 PM Jun 24, 2024 | Team Udayavani |

ನಾವು ಭೂಮಿಯ ಮೇಲೆ ವಾಸಿಸುತ್ತೆವೆ. ಈ ಭೂಮಿ ಮೇಲೆ ಮನುಷ್ಯನಲ್ಲದೆ ಬೇರೆ ಬೇರೆ ಪ್ರಾಣಿಗಳು, ಸಸ್ಯಗಳು ಗುಡ್ಡ, ಬೆಟ್ಟ, ಪರ್ವತ,ಹಳ್ಳ, ನದಿ,ಕೆರೆ,ಸರೋವರ, ಸಾಗರ ಜಲಪಾತ ಮತ್ತು ವಿವಿಧ ಬಗೆಯ ಪಕ್ಷಿಗಳು, ಹಾವು, ಹಲ್ಲಿ, ಸರಿಸೃಪಗಳು, ಜಾಲಚರ ಪ್ರಾಣಿಗಳು, ಆಕಾಶ, ಮಳೆ, ಮಂಜು, ಬಿಸಿಲು, ಗಾಳಿ, ಎಲ್ಲ ಸೇರಿ ಭೂಮಿಯ ಮೇಲೆ ಸ್ವರ್ಗದ ವಾತಾವರಣವನ್ನು ಸೃಷ್ಟಿಸಿವೇ….

Advertisement

ಪ್ರಕೃತಿಯ ವ್ಯವಸ್ಥೆಯಲ್ಲಿ ಎಳೆ ತಪ್ಪಿದರೆ ಅವ್ಯವಸ್ಥೆಗೆ ಅನಾಹುತಕ್ಕೆ ಕಾರಣವಾಗುತ್ತದೆ.

ನಿಸರ್ಗದ ಮಡಿಲಲ್ಲಿ ವಾಸಿಸುವ ಅನೇಕ ಜೀವಿಗಳಿಗೆ ಅರಣ್ಯದಿಂದ ಬಹಳ ಉಪಯೋಗವಿದೆ. ಅರಣ್ಯದಲ್ಲಿ ಅಥವಾ ನಿಸರ್ಗದಲ್ಲಿ ವಿವಿಧ ಜಾತಿಯ ಮರ, ಗಿಡ, ಪ್ರಾಣಿ, ಪಕ್ಷಿ, ಸರಿಸೃಪಗಗಳಿಗೆ ಆಶ್ರಯತಾಣ ವಾಗಿದೆ. ಅಲ್ಲದೆ ಅರಣ್ಯದಲ್ಲಿರುವ ಅತೀ ಎತ್ತರದಲ್ಲಿರುವ ಮರಗಳು ಮಳೆಯನ್ನು ಸುರಿಸಲು ಅನುವುಮಾಡಿಕೊಳ್ಳುತವೇ. ಅಂತಹ ಅರಣ್ಯ ನಾಶವಾದರೆ ಮಳೆ ಕಡಿಮೆಯಾಗುತ್ತದೆ. ಮಳೆ ಕಡಿಮೆಯಾದಂತೆ ಪ್ರಕೃತಿ ವಿಕೋಪ ಉಂಟಾಗುತದೆ.

ಕಾಡಿನಲ್ಲಿ ನೀರು, ಆಹಾರ, ದೊರೆಯದಿದ್ದರೆ ಅಲ್ಲಿಯ ಪ್ರಾಣಿಗಳು ನಾಡಿನಲ್ಲಿ ನುಗ್ಗಿ ಅಲ್ಲಿಯ ಅನೇಕ ಪ್ರಾಣಿಗಳನ್ನ ಕೊಂದು ತಿನ್ನುತವೇ. ಅರಣ್ಯದಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಾಣಿಗಳಿರುತವೇ ಒಂದಕ್ಕೊಂದು ನಿಸರ್ಗದನುಸಾರ ತಮ್ಮದೆ ಆದ ವಿಧಾನಗಳನ್ನು ಅನುಸರಿಸುತ್ತವೇ. ಆದರೆ ಮನುಷ್ಯ ಮೃಗಗಳಿಗಿಂತ ಕ್ರೂರಿ ಸ್ವಾರ್ಥಕ್ಕಾಗಿ ಎಲ್ಲವನ್ನು ಹಾಳು ಮಾಡುತಾನೆ. ಅರಣ್ಯ, ಪ್ರಾಣಿ, ಹುಲ್ಲು, ಮುಂತಾದವುಗಳನ್ನು ನಾಶ ಮಾಡುತ್ತಿದ್ದಾ ನೆ. ಮನುಷ್ಯ

ತನ್ನ ಸುತ್ತಮುತ್ತಲಿನ ನಿಸರ್ಗವನ್ನು ನಾಶ ಮಾಡಿ ವಿಶ್ವದ ವಿನಾಶಕ್ಕೆ ಕಾರಣವಾಗುತ್ತಾನೆ.ದಟ್ಟವಾದ ಅರಣ್ಯ ಬೆಳೆಸಬೇಕು. ಜಲ ಮಾಲಿನ್ಯ ತಡಿಯ ಬೇಕು. ನೀರು, ಭೂಮಿ ಎಲ್ಲವನ್ನು ಶುದ್ಧವಾಗಿಡಲು ಪ್ರಯತ್ನಿಸಬೇಕು. ಒಬ್ಬ ಉತ್ತಮ ಗೆಳೆಯನೆಂದರೆ ಅದು ಪ್ರಕೃತಿ…

Advertisement

-ಎಂ. ಸುದೀಪ್‌

ಕೊಟ್ಟೂರು

Advertisement

Udayavani is now on Telegram. Click here to join our channel and stay updated with the latest news.

Next