Advertisement
ಒಂದೂರಿನಲ್ಲಿ ಒಬ್ಬ ದರ್ಜಿಯಿದ್ದ. ಆತ ಊರಿನ ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದ. ಊರಿನವರ ಬಟ್ಟೆ ಹೊಲಿದು ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಹೀಗೆ ದಿನ ಸಾಗಿದಂತೆ ಬಟ್ಟೆ ಹೊಲಿಸಿಕೊಂಡವರು ಹಣವನ್ನು ನಾಳೆ ಕೊಡುತ್ತೇನೆ ನಾಡಿದ್ದು ಕೊಡುತ್ತೇನೆಂದು ಉದ್ರಿ ಹೇಳಿ ಹೋಗುವುದು ಹೆಚ್ಚಾಯಿತು. ಇದರಿಂದ ಬೇಸತ್ತ ದರ್ಜಿ ಹೊಲಿಯುವುದನ್ನು ಬಿಟ್ಟು ಬೇಸಾಯ ಮಾಡಬೇಕೆಂದುಕೊಂಡ. ಆದರೆ ಅವನ ಬಳಿ ಭೂಮಿಯಿಲ್ಲ. ಇದೇ ಸಮಯದಲ್ಲಿ ಆ ಊರಿನ ರಾಜನ ಅಂಗಿಯ ಗುಂಡಿ ಕಳಚಿತ್ತು. ಇದನ್ನು ಹೊಲಿದು ಕೊಡುವುದಕ್ಕಾಗಿ ದರ್ಜಿಯನ್ನು ಕರೆತರುವಂತೆ ರಾಜ ಆದೇಶ ಹೊರಡಿಸಿದ. ಆಗ ಅದೇ ದರ್ಜಿಯನ್ನು ಅರಮನೆಗೆ ಕರೆತಂದು ರಾಜನ ಅಂಗಿಯ ಗುಂಡಿಯನ್ನು ಹೊಲಿದು ಕೊಡಲು ಹೇಳಲಾಯಿತು. ರಾಜನ ಅಂಗಿಗೆ ಬಂಗಾರದ ಗುಂಡಿಯನ್ನು ದರ್ಜಿ ಹೊಲಿದುಕೊಟ್ಟದನ್ನು ಕಂಡು ಖುಷಿಯಾದ ರಾಜ ಆತನಿಗೆ ನೀನು ಕೇಳಿದ ಬಹುಮಾನ ನೀಡುವುದಾಗಿ ತಿಳಿಸಿದ. ರಾಜ ನಿನಗೇನು ಬೇಕು ಎಂದು ಆತನ ಬಳಿ ಕೇಳಿದಾಗ “ರಾಜರೆ ತಾವು ಏನೇ ಕೊಟ್ಟರೂ ನನಗೆ ಸಂತೋಷವೇ’ ಎಂದು ಉದಾರತೆ ತೋರಿದ. ರಾಜ ನಮ್ಮ ಘನತೆಗೆ ತಕ್ಕಂತೆ 10 ಎಕರೆ ಹೊಲವನ್ನು ಇತನಿಗೆ ಬಹುಮಾನವಾಗಿ ನೀಡಬೇಕೆಂದು ಆಜ್ಞೆ ಮಾಡಿದ. ದರ್ಜಿಯ ಖುಷಿಗೆ ಪಾರವೇ ಇರಲಿಲ್ಲ. ಅಂದುಕೊಂಡದಕ್ಕಿಂತ ಹೆಚ್ಚು ಆತನಿಗೆ ಸಿಕ್ಕಿತ್ತು.
Related Articles
Advertisement