Advertisement
ನನಗೆ ತಿಳಿದ ಹಾಗೆ ಕನಸಿನಲ್ಲಿ ಎರಡು ವಿಧ. ಒಂದು ನಿದ್ರೆ ಮಾಡುವಾಗ ಬರುವ ಕನಸು ಇನೊಂದು ನಮಗೆ ನಿದ್ರೆ ಮಾಡಲು ಬಿಡದ ಕನಸು… ಮನುಷ್ಯನು ಭವಿಷ್ಯದ ಬಗೆ ಕನಸು ಕಾಣುವುದು ಸಹಜ, ಆದರೆ ಅದೇ ಕನಸನ್ನು ದೊಡ್ಡದಾಗಿ ಕಾಣಬೇಕು ನಾವು ಅದನು ನನಸಾಗಿಸುವ ಹಾದಿಯಲ್ಲಿ ನಮ್ಮ ಜೀವನವನು ಸುಂದರವಾಗಿ ರೂಪಿಸಿಕೊಳ್ಳಬಹುದು ಎಂದನು.
Related Articles
Advertisement
ದೊಡ್ಡ ಹುದ್ದೆಗೆ ಹೋದರೆ, ಕೂಲಿ ಕೆಲಸ ಮಾಡುವವರು ಯಾರು..? ಅದಕ್ಕೆ ಮುಂದೆ ನೀವೆಲ್ಲಾ ಉಪಯೋಗಕ್ಕೆ ಬರುವಿರಿ ಎನುತ್ತಿದರು, ಇಂಥ ಕೆಲವು ಅವಮಾನಗಳೇ… ನನ್ನ ಸ್ನೇಹಿತನಿಗೆ ಭವಿಷ್ಯದ ಬಗೆ ಕನಸು ಕಾಣಲು ಸಹಾಯಕವಾಗಿತೆಂದು ಭಾವಿಸುತ್ತೇನೆ, ಅವನು ಅಭ್ಯಾಸ ಮಾಡುತ್ತಾ ಮಾಡುತ್ತಾ..ಅವನ ವಿಚಾರಧಾರೆಗಳು ಹೆಚ್ಚಾಗುತ್ತಾ ಕನಸು ದೊಡ್ಡದಾಗುತ್ತಾ ಹೋಗಿತು.
ಅವನು ನಾನೊಂದಿಗೆ ಹೇಳಿಕೊಳ್ಳುತ್ತಿದ್ದಳು ಅವನ ಕನಸಿನ ಬಗೆ ಅದನು ನನಸಾಗಿಸಲು ಅವನ ಪ್ರಯತ್ನದ ಬಗೆ, ಅಂದು ದಡ್ಡ ವಿದ್ಯಾರ್ಥಿ ಇಂದು ದೊಡ್ಡ ಹುದ್ದೆಯಲ್ಲಿದ್ದಾನೆ ಇದಕ್ಕೆ ಕಾರಣ ಅವನು ಕಾಣುತ್ತಿದ್ದ ಕನಸು ಮತ್ತು ಅದನು ನನಸಾಗಿಸಲು ಮಾಡಿದ ಅವನು ಪ್ರಯತ್ನ.., ಕೆಲವೊಂದು ಸಾಧಕರನ್ನು ನೋಡಿದಾಗ ಅವರಲ್ಲಿ ಕಾಣುವ ಖುಷಿಗಿಂತ “ಪರಿಶ್ರಮವೇ ಜೀವನ” ಅನಿಸುತ್ತದೆ ನನಗೆ, ಅವರ ಸಾಧನೆಗೆ ಕಾರಣ ಅವರು ತಮ್ಮ ಸುಖ ನಿದ್ರೆಯನ್ನು ತ್ಯಜಿಸಿ, ನಿದ್ರೆ ಗೆಡಿಸುವಂತಹ ಕನಸು ಕಂಡಿದ್ದಕ್ಕೆ, ಮತ್ತೆ ಮತ್ತೆ ಹೇಳುತ್ತೇನೆ.. ನಮ್ಮ ಭವಿಷ್ಯದ ಕನಸು ದೊಡ್ಡದಾಗಿರಲಿ ಅದನು ನನಸಾಗಿಸುವ ಛಲ ಅಷ್ಟೇ ದೃಢವಾಗಿರಲಿ.
-ಭರತ್ ವಾಸು ನಾಯ್ಕ
ಶಿರಸಿ