Advertisement
ಅಜ್ಞಾನಿ ತನಗೇನು ಗೊತ್ತಿಲ್ಲದಿದ್ದರೂ ಎಲ್ಲವೂ ತಿಳಿದಿದೆ ಎಂದು ಬೀಗಿದರೆ ಜ್ಞಾನಿ ತನಗೆಲ್ಲ ತಿಳಿದಿದ್ದರೂ ಏನೂ ತಿಳಿಯದವನಂತೆ ಸುಮ್ಮನಿರುತ್ತಾನೆ. ಇದೇ ಜ್ಞಾನಿಗೂ ಅಜ್ಞಾನಿಗೂ ಇರುವ ವ್ಯತ್ಯಾಸ.
Related Articles
Advertisement
ಉದಾಹರಣೆಗೆ ಪರೀಕ್ಷೆಯ ಸಂದರ್ಭವನ್ನೇ ತೆಗೆದುಕೊಳ್ಳೋಣ….. ಪುಸ್ತಕದ ಎಲ್ಲ ವಿಷಯಗಳನ್ನು ಮಸ್ತಕಕ್ಕೆ ತುಂಬಿಸಿಕೊಂಡ ವಿದ್ಯಾರ್ಥಿ ಮೌನವಾಗಿದ್ದು ಹಸನ್ಮುಖೀಯಾಗಿದ್ದರೆ ಅರ್ಧಂಬರ್ಧ ಕಲಿತವನು ತನ್ನ ಮಸ್ತಕದಲ್ಲಿ ಏನೂ ತುಂಬಿಲ್ಲದಿದ್ದರೂ ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿರುತ್ತಾನೆ. ಅಂದರೆ.. ಏನೂ ಗೊತ್ತಿಲ್ಲದಿದ್ದರೂ ಎಲ್ಲ ಗೊತ್ತಿರುವವರಂತೆ. ಇದಕ್ಕೆಯೇ ನಮ್ಮ ಹಿರಿಯರು ಹೇಳಿರುವುದು ಅರ್ಧ ಕಲಿತವನ ಅಬ್ಬರ ಹೆಚ್ಚು ಎಂದು.
ಎಲ್ಲವನ್ನು ತಿಳಿದುಕೊಂಡವನು ಯಾರ ತಂಟೆಗೂ ಹೋಗುವುದಿಲ್ಲ. ವಾಗ್ವಾದವನ್ನು ನಡೆಸುವುದಿಲ್ಲ. ಜಾಣ್ಮೆಯಿಂದ ಸಮಸ್ಯೆಯನ್ನ ಬಗೆಹರಿಸಿಕೊಂಡರೆ ಅರ್ಧಂಬರ್ಧ ತಿಳಿದ ಮೂಢ ವಾದ ಪ್ರತಿವಾದಗಳನ್ನ ಮಾಡಿ ಕೊನೆಗೆ ತಾನೇ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ.
ಇದೇ ಕಾರಣಕ್ಕೆ ಅಂತ ಅಲ್ಪ ಜ್ಞಾನಿಗಳಿಗೆ, ಮೂಢರಿಗೆ, ಅಹಂಕಾರಿಗಳಿಗೆ ಯಾರೂ ಬುದ್ಧಿವಾದ ಹೇಳುವ ಗೋಜಿಗೆ ಕೈ ಹಾಕುವುದಿಲ್ಲ. ಕೊಚ್ಚೆ ಎಂದು ಗೊತ್ತಿದ್ದ ಮೇಲು ಆ ಕೊಚ್ಚೆಯ ಮೇಲೆ ಕಲ್ಲು ಎಸೆದರೆ ಆ ನೀರು ರಾಚುವುದು ನಮ್ಮ ಮೈಗೆ ಅಲ್ಲವೇ?…….
–ಸುಸ್ಮಿತಾ ಕೆ. ಎನ್. ಅನಂತಾಡಿ, ಬಂಟ್ವಾಳ