Advertisement
ನಾವು ಜೀವನದಲ್ಲಿ ಏನೆÇÉಾ ಸಾಧಿಸಿರಬಹುದು, ಉತ್ತಮ ಬದುಕು ಕಟ್ಟಿಕೊಂಡಿರಬಹುದು, ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆದಿರಬಹುದು, ನಾವು ಒಳ್ಳೆಯದೆಂದು ಜೀವನದಲ್ಲಿ ಏನೆÇÉಾ ಕಂಡಿದ್ದೇವೆಯೋ ಅನುಭವಿಸಿದ್ದೇವೋ ಅದೆಲ್ಲವೂ ಗುರುಗಳ ಆಶೀರ್ವಾದ ಮಾರ್ಗದರ್ಶನದ ಫಲವಾಗಿರುತ್ತದೆ. ಗುರುಗಳ ಆಶೀರ್ವಾದ ಮಾರ್ಗದರ್ಶನ ಇಲ್ಲದೆ ನಾವು ಏನನ್ನೂ ಪಡೆದುಕೊಳ್ಳಲು ಸಾಧ್ಯವಿಲ್ಲ.
Related Articles
Advertisement
ಗುರುಗಳು ಎಂದಿಗೂ ತಮ್ಮ ಶಿಷ್ಯಂದಿರ ಏಳಿಗೆಯನ್ನೇ ಬಯಸುತ್ತಾರೆ. ನಮ್ಮ ವಿದ್ಯಾರ್ಥಿಗಳು ಚೆನ್ನಾಗಿ ಕಲಿಯಬೇಕು, ಸಮಾಜದಲ್ಲಿ ಗುರುತರವಾದ ಸಾಧನೆಯನ್ನು ಮಾಡಬೇಕು, ಒಳ್ಳೆಯ ಸ್ಥಾನಕ್ಕೇರಬೇಕು ಎಂಬ ಭಾವ ಗುರುವರ್ಯರದಾಗಿರುತ್ತದೆ. ವಿದ್ಯಾರ್ಥಿಗಳು ಸಾಧಿಸಿದಾಗ ಮೊದಲು ಖುಷಿಪಡುವ ಜೀವ ಎಂದರೆ ಅದು ಗುರುಗಳು ಮಾತ್ರ.
ಗುರುಗಳು ತಮ್ಮ ಮನೆಯಲ್ಲಿ ಎಷ್ಟೇ ಕಷ್ಟವಿದ್ದರೂ ಮೊದಲು ಶಾಲೆಗೆ ಓಡಿ ಬರುತ್ತಾರೆ ಕಾರಣ ಶಾಲೆಯಲ್ಲಿ ತನಗಾಗಿ ಕಾದಿರುವ ಜೀವಗಳಿವೆ ಎಂದು. ಮಕ್ಕಳಿಗೆ ಕಲಿಸುತ್ತಾ ತನ್ನಯ ದುಃಖವನ್ನೆÇÉಾ ಮರೆಯುವಾತ ಗುರು. ಹಾಗೆಯೇ ಗುರುವು ತನ್ನ ಸ್ವಂತ ಮಗುವಿಗೇ ಅನಾರೋಗ್ಯ ಉಂಟಾದರೂ ಸಹ ತನ್ನ ಮನೆಯಲ್ಲಿ ಮಗುವಿನ ಜವಾಬ್ದಾರಿಯನ್ನು ಯಾರಿಗಾದರೂ ವಹಿಸಿ ಶಾಲೆಗೆ ಬರುತ್ತಾನೆ ಕಾರಣ ಶಾಲೆಯಲ್ಲಿ ತನ್ನನ್ನು ನಂಬಿರುವ ಮಕ್ಕಳಿದ್ದಾರೆ ಎಂದು. ಅಂತಹ ಹೃದಯವಂತರು ನಮ್ಮ ಗುರುಗಳು.
ಇಂತಹ ಗುರುಗಳಿಗೆ ನಾವು ವಂದನೆಗಳನ್ನು ಗೌರವವನ್ನು ಸಲ್ಲಿಸಬೇಕು. ಎಷ್ಟು ಜನುಮ ಪಡೆದರೂ ತಂದೆತಾಯಿಯ, ಗುರುವಿನ ಋಣವನ್ನು ತೀರಿಸಲಾಗದು ಆದರೂ ಅವರಿಗೆ ಧನ್ಯವಾದವನ್ನು ತಿಳಿಸುವ ಮನೋಭಾವ ನಮ್ಮಲ್ಲಿರಬೇಕು.
ಗುರುಗಳಿಗೆ ವಂದನೆಯನ್ನು ತಿಳಿಸುವ ಸಲುವಾಗಿಯೇ ಪ್ರತಿ ವರುಷವೂ ಆಷಾಡ ಮಾಸದಲ್ಲಿ ಗುರುಪೂರ್ಣಿಮೆಯು ಬರುತ್ತದೆ. ಅಂದು ನಾವೆಲ್ಲರೂ ನಮ್ಮ ನಮ್ಮ ಗುರುಗಳನ್ನು ನೆನೆದು ಅವರಿಗೆ ಭಕ್ತಿಪೂರ್ವಕವಾದ ಗೌರವಯುತವಾದ ಧನ್ಯವಾದಗಳನ್ನು ಅರ್ಪಿಸೋಣ. ಗುರುಗಳ ಜೀವ ಏನನ್ನೂ ಬಯಸದು ಅಂದಿನ ದಿನ ಅವರ ನೆನೆದು ಧನ್ಯವಾದ ಹೇಳಿದರೆ ಅದರಿಂದಲೇ ಸಂತಸಪಡುವ ಮಾತೃ ಹೃದಯಿ ಮನಸು ಅವರದು.
ಗುರುಗಳಿಗೆ ವಂದಿಸುವುದು, ನೆನೆಯುವುದು ಅವರ ಸೇವೆಯನ್ನು ನೆನೆದು ಧನ್ಯವಾದಗಳನ್ನು ಸಲ್ಲಿಸುವುದು ಹಿಂದಿನಿಂದಲೂ ನಡೆದುಬಂದ ನಮ್ಮ ಸಂಸ್ಕೃತಿಯಾಗಿದೆ. ಈ ಆಚಾರ ವಿಚಾರಗಳನ್ನು ನಾವು ತಿಳಿಯುವುದರೊಂದಿಗೆ ನಮ್ಮ ಮಕ್ಕಳಿಗೂ ತಿಳಿಸೋಣ ಕಲಿಸೋಣ ಮನವರಿಕೆ ಮಾಡಿಕೊಡೋಣ.
-ಭಾಗ್ಯ ಜೆ. ಬೋಗಾದಿ
ಮೈಸೂರು