Advertisement

UV Fusion: “ಪರಿಸರವು ನಮ್ಮ ಆಸೆಗಳನ್ನು ಪೂರೈಸಬಲ್ಲದು, ಆದರೆ ದುರಾಸೆಗಳನಲ್ಲ

10:05 AM Sep 08, 2024 | Team Udayavani |

“ರವಿ ಕಾಣದ್ದನ್ನು, ಕವಿ ಕಂಡ” ಎಂಬಂತೆ. ಒಂದು ಕೈತೋಟವು ಹೇಗೆ ವಿವಿಧ ಹೂ ಬಳ್ಳಿಗಳಿಂದ ವರ್ಣಮಯವಾಗಿರುತ್ತದೆಯೋ! ಹಾಗೆಯೇ ನಮ್ಮ ಪರಿಸರವು ವಿವಿಧ ರೀತಿಯ ಪ್ರಾಣಿ-ಪಕ್ಷಿಗಳು, ಮರ – ಗಿಡಗಳಿಂದ ವರ್ಣಮಯವಾಗಿದೆ. ಆದರೆ ನಾವು ನಮ್ಮ ಕೈಯಾರೆ ಈ ಸುಂದರವಾದ ಪರಿಸರವನ್ನು ಅಭಿವೃದ್ಧಿ ಎಂಬ ಹೆಸರಿನಲ್ಲಿ ಹಾಳು ಮಾಡುತ್ತಿದ್ದೇವೆ. ಪರಿಸರದಿಂದ ನಾವಿಂದು ಬದುಕಿದ್ದೇವೆ ಹೊರತು ನಮ್ಮಿಂದ ಪರಿಸರವಲ್ಲ . ಪರಿಸರ ನಮ್ಮ ತಾಯಿಯಂತೆ ಸದಾಕಾಲ ನಮ್ಮನ್ನು ಸಲಹುತ್ತಾಳೆ. ಆದರೆ ನಾವಿಂದು ನಮ್ಮನ್ನು ಸಲಹುತ್ತಿರುವ ಪರಿಸರವನ್ನೇ ನಾಶಮಾಡಲು ಹೊರಟಿದ್ದೇವೆ. “ಪರಿಸರವು ನಮ್ಮ ಆಸೆಗಳನ್ನು ಪೂರೈಸಬಲ್ಲದು, ಆದರೆ ದುರಾಸೆಗಳನಲ್ಲ.

Advertisement

ನಾವಿಂದು ಕಾಡುಗಳನ್ನು ಕಡಿಯುತ್ತಿದ್ದೇವೆ, ಗಾಳಿ ನೀರನ್ನು ವಿಷವನ್ನಾಗಿಸುತ್ತಿದ್ದೇವೆ. ಈ ಕಾರಣಕ್ಕೆ ಸರಿಯಾಗಿ ನಾವಿಂದು ಒಂದೇ ದಿನದಲ್ಲಿ ವರ್ಷದ ಎಲ್ಲ ಕಾಲಗಳನ್ನು ನೋಡುವಂತಾಗಿದೆ.

ಅಭಿವೃದ್ಧಿ ಎಂಬ ಹೆಸರಿನಲ್ಲಿ ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಗಿಡಮರಗಳನ್ನು ಕಡಿದೇ ರಸ್ತೆಗಳನ್ನು ದೊಡ್ಡದು ಮಾಡುತ್ತಿ ದ್ದೇವೆ. ಪ್ರಕೃತಿ ನಮಗೊಂದು ವರದಾನ ಅನೇಕ ವಿಸ್ಮಯಗಳನ್ನು ನಮಗೆ ನೀಡಿದೆ. ಪ್ರಕೃತಿಯ ಅಂಗವಾಗಿ ನಾವು ಜೀವಿಸುತ್ತಿದ್ದೇವೆ. ಪ್ರಕೃತಿಯೇ ನಮಗೆಲ್ಲ ವನ್ನು ನೀಡುತ್ತಿದೆ. ಆದರೆ ಅದನ್ನು ನಾವು ದುರುಪಯೋಗಮಾಡಿಕೊಳ್ಳುತ್ತಿದ್ದೇವೆ. ಪ್ರಕೃತಿಯ ಮೇಲೆ ನಿರಂತರ ಸವಾರಿ ಮಾಡುತ್ತಿದ್ದೇವೆ. ನಮ್ಮ ಒತ್ತಡ ತಾಳಲಾರದೇ ಅದು ಆಗಾಗ ಮುನಿಯುತ್ತದೆ. ಪ್ರಕೃತಿಯ ಮುನಿಸಿನ ಪರಿಣಾಮವಾಗಿಯೇ ಪ್ರವಾಹ, ಸುನಾಮಿ ಮುಂತಾದ ಪ್ರಕೃತಿ ವಿಕೋಪಗಳು ಸಂಭವಿಸುತ್ತಿರುವುದು .ನಮ್ಮ ಈ ಪರಿಸರ ಇಂದು ತನ್ನ ಮೂಲ ಸ್ವಾಭಾವಿಕ ನೈಜ ಸ್ಥಿತಿಯನ್ನು ಉಳಿಸಿಕೊಂಡಿಲ್ಲ ಇಂದು ಪ್ರಕೃತಿ ಕೆಟ್ಟಿದೆ ,ಕೆಡುತ್ತಿದೆ . ಪರಿಸರ ಕೆಡಲು ನಾನು ಕಾರಣ ಇವೆ. ಮಾನವನನು ಆರೋಗ್ಯಕರವಾದ ಜೀವನವನ್ನು ನಡೆಸಲು ಶುದ್ಧವಾದ ಗಾಳಿ ಬೇಕು ಕಲುಷಿತಗೊಳ್ಳದ ಶುದ್ಧವಾದ ಕುಡಿಯುವ ನೀರು ಬೇಕು ಕುಡಿಯುವ ನೀರು ಕಲುಷಿತವಾದರೆ ನಾನಾ ಕಾಯಿಲೆಗಳು ಬರುತ್ತದೆ.

ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸಿ ಅವುಗಳಿಂದಲೀ ಪರಿಸರವನ್ನು ತುಂಬಿದರೆ ಭೂ ಕಂಪವಾಗುತ್ತದೆ. ನಮ್ಮ ಮನೆಗಳನ್ನು ಊರನ್ನು ಶುಭ್ರವಾಗಿ ಇಡದಿದ್ದರೆ. ಪರಿಸರ ಹಾಳಾ ಹಾಳಾಗುತ್ತದೆ. ಒಟ್ಟಿನಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಸಂಸ್ಕೃತಿ ಯನ್ನು ನಾವು ವಿವೇಚನೆ ಇಲ್ಲದೆ ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ದೇಶದ ಆರ್ಥಿಕ ಮಟ್ಟವನ್ನು ಹೆಚ್ಚುಗೊಳಿಸುವ ನಿಟ್ಟಿನಲ್ಲಿ ನಮ್ಮ ಪ್ರಕೃತಿಯ ಬುಡಕ್ಕೆ ಕೊಡಲಿಬಿದ್ದಿರುವುದನ್ನು ಗಮನಿಸಬಹುದು.

ಪರಿಸರ ಸಂರಕ್ಷಣೆ ನಾವು ಅಂದುಕೊಂಡಂತೆ ಸುಲಭವಿಲ್ಲದಿದ್ದರೂ ಅದನ್ನು ನಾವು ಸಾಧಿಸುವುದು ಕಷ್ಟದ ವಿಷಯವೇನಲ್ಲ ಮನಸ್ಸಿದ್ದರೆ ಮಾರ್ಗ ಎಂಬಂತೆ ವಿದ್ಯಾರ್ಥಿಗಳಾದನಾವು ಪರಿಸರದ ಬಗ್ಗೆ ಕಾಳಜಿಯನ್ನು ವಹಿಸೋಣ ಹಾಗೂ ನಮ್ಮ ಸುತ್ತಮುತ್ತಲಿನ ಜನರಿಗೂ ಪರಿಸರದ ಬಗ್ಗೆ ಅರಿವನ್ನು ಮೂಡಿಸೋಣ “ಪ್ರಕೃತಿ ರಕ್ಷಿತೋ ” ಎಂಬಂತೆ. ನಾವು ಪ್ರಕೃತಿಯನ್ನು ರಕ್ಷಿಸಿದರೆ ಪ್ರಕೃತಿಯು ನಮ್ಮನ್ನು ರಕ್ಷಿಸುತ್ತದೆ.

Advertisement

“ಬೇರಿದ್ದರೆ ಮರವಿದೆ,

ನೀರಿದ್ದರೆ ನದಿಯಿದೆ,

ಸಂಸ್ಕಾರವಿದ್ದರೆ ಸಂಸ್ಕೃತಿಯಿದೆ,

ಅಂತೆಯೇ ಉತ್ತಮ ಪರಿಸರವಿದ್ದರೆ

ಮಾತ್ರ ಅಭಿವೃದ್ಧಿಯಿದೆ’

- ಹರ್ಷಿತಾ

ಮಡಂತ್ಯಾರು

Advertisement

Udayavani is now on Telegram. Click here to join our channel and stay updated with the latest news.

Next