ನನಗೆ ನೆನಪಿರುವಂತೆ ನನ್ನ ತಂದೆ ಎಂದಿಗೂ ನನ್ನ ಮುಂದೆ ಕಣ್ಣೀರು ಸುರಿಸಿರಲಿಲ್ಲ. ಒಂದು ದಿನ ನನ್ನ ಸಂದೇಹವನ್ನು ನಿವಾರಿಸಲು ನಾನು ಅವರನ್ನು ಕೇಳಿದೆ ಅಪ್ಪ ನೀವು ಯಾವ ಸಂದರ್ಭದಲ್ಲಿ ಕಣ್ಣೀರು ಹಾಕಿದ್ದೀರಿ?
ಅವರು ಉತ್ತರಿಸಲಿಲ್ಲ, ಆದರೆ ಬಹಳ ಯೋಚಿಸಿದ ಅನಂತರ ಅವರು ಒಮ್ಮೆ, ಅದೂ ನಿನ್ನಿಂದಾಗಿ ಎಂದು ಉತ್ತರಿಸಿದರು. ನಾನು ಒಂದು ಕ್ಷಣ ಅವಕ್ಕಾದೆ!!
ಸ್ವಲ್ಪ ಸಾವರಿಸಿಕೊಂಡು ತಂದೆ ಉತ್ತರಿಸತೊಡಗಿದರು. ನಿನ್ನ ಮೊದಲ ಹುಟ್ಟುಹಬ್ಬದಂದು ನಿನ್ನನ್ನು ಪರೀಕ್ಷಿಸಲು ಮೂರು ವಸ್ತುಗಳನ್ನು ನಿನ್ನ ಮುಂದೆ ಇಟ್ಟೆ. ನಿನ್ನ ಆಯ್ಕೆಯು ನನ್ನನ್ನು ಬೆರಗುಗೊಳಿಸಿತು ಮತ್ತು ನನ್ನ ಕಣ್ಣಲ್ಲಿ ನೀರು ತರಿಸಿತು ಎಂದು ಅವರು ಹೇಳಿದರು.
ಈ ಸಂದರ್ಭವನ್ನು ವಿವರಿಸುತ್ತಾ, ಪೆನ್ನು, ಚಿಲ್ಲರೆ ದುಡ್ಡು – ಸ್ವಲ್ಪ ನೋಟುಗಳು ಮತ್ತು ಸುಂದರವಾದ ಗೊಂಬೆಯನ್ನು ನಿನ್ನ ಮುಂದೆ ಇಟ್ಟಿದ್ದೆ. ನಿನ್ನ ಆಯ್ಕೆಯಿಂದ ನಿನ್ನ ರುಚಿ, ಅಭಿರುಚಿಯನ್ನು ತಿಳಿಯುವುದು ನನ್ನ ಉದ್ದೇಶವಾಗಿತ್ತು.
ಪೆನ್ನು ನಿನ್ನ ಜ್ಞಾನದಾಹದ ಸಂಕೇತವಾಗಿರಬಹುದು, ರೂಪಾಯಿ ನೋಟು ನಿನ್ನ ಸಂಪತ್ತಿನ ದಾಹದ ಸಂಕೇತವಾಗಿರಬಹುದು ಮತ್ತು ಗೊಂಬೆ ನಿನ್ನ ಆರಾಮ ಜೀವನದ ಪುರಾವೆಯಾಗಿರಬಹುದು, ಹೀಗೆ ನಾನು ಯೋಚಿಸಿದ್ದೆ. ನಾನು ಮೂರು ವಸ್ತುಗಳನ್ನು ನಿನ್ನ ಮುಂದೆ ಇಟ್ಟಾಗ, ನೀನು ನನ್ನ ವ್ಯಾಪ್ತಿಗೆ ಮೀರಿದ ನಾಲ್ಕನೆಯದನ್ನು ಆರಿಸಿ ನನ್ನ ಕಣ್ಣುಗಳನ್ನು ತೇವಗೊಳಿಸಿದಿ.!!
ನೀನು ನಿನ್ನ ಮುಂದಿದ್ದ ಮೂರು ವಸ್ತುಗಳನ್ನು ಒಂದು ಕ್ಷಣ ನೋಡಿದಿ ಮತ್ತು ನಿಧಾನವಾಗಿ ತೆವಳುತ್ತಾ ಆ ಮೂರು ವಸ್ತುಗಳ ಬಳಿ ಒಂದು ಕ್ಷಣ ನಿಂತೆ. ಆ ದಿನ ಆ ನಿರ್ಜೀವ ವಸ್ತುಗಳು ನಿನ್ನ ಆಯ್ಕೆಯಲ್ಲ ಎಂಬಂತೆ ನೀನು ನನ್ನನ್ನು ಮುಟ್ಟಿ, ನಿನ್ನನ್ನು ಎತ್ತಿಕೊಳ್ಳುವಂತೆ ನನ್ನೆಡೆಗೆ ನೋಡಿದಾಗ ನನ್ನ ಕಣ್ಣಲ್ಲಿ ನೀರು ಹರಿಯಿತು, ಎಂದು ಹೇಳಿ ಮುಗಿಸುತ್ತಿದ್ದಂತೆ
ನಾನು ನನ್ನ ತಂದೆಯನ್ನು ನೋಡಿ ಮೂಕಳಾದೆ.
ರಶ್ಮಿ ಉಡುಪ ಮೊಳಹಳ್ಳಿ
ಡಾ| ಬಿ. ಬಿ. ಹೆಗ್ಡೆ ಪ್ರ.ದ. ಕಾಲೇಜು ಕುಂದಾಪುರ