Advertisement

UV Fusion: Cinema- ದಿ ಪ್ರೆಸಿಡೆಂಟ್

10:25 AM Jul 22, 2024 | Team Udayavani |

ಜಗತ್ತಿನಲ್ಲಿ ಸರ್ವಾಧಿಕಾರತನವನ್ನು ಸಾಕಷ್ಟು ಕಡೆ ನೋಡಿದ್ದೇವೆ. ಹಿಟ್ಲರ್‌ನಿಂದ  ಹಿಡಿದು ಹಲವಾರು ಮಂದಿ ಜಗತ್ತನ್ನು ತಮ್ಮ ಆಡಳಿತದ ಕಪಿಮುಷ್ಠಿಯಲ್ಲಿ ಇರಿಸಿಕೊಂಡಿದ್ದನ್ನು ಕಂಡಿದ್ದೇವೆ. ಒಬ್ಬ ಸಿನಿಮಾ ನಿರ್ದೇಶಕ ಒಮ್ಮೆ ಕಾಬೂಲ್‌ನ ದರುಲ್‌ ಆಮಾನ್‌ ಪ್ಯಾಲೇಸ್‌ನ ಎದುರು ಹೋಗಿ ನಿಂತಾಗ ಅವನಿಗೊಂದು ಕಥೆ ಹೊಳೆಯಿತು. ಅದಕ್ಕೆ ಆರಬ್‌ ಸ್ಪ್ರಿಂಗ್‌ ಕ್ರಾಂತಿಯ ಹೊಳಹೂ ಸೇರಿ ಸಿನಿಮಾವಾಗಿ ರೂಪುಗೊಂಡಿತು. ಅದೇ ದಿ ಪ್ರೆಸಿಡೆಂಟ್‌.

Advertisement

2014ರಲ್ಲಿ ಜಾರ್ಜಿಯನ್‌ ಭಾಷೆಯಲ್ಲಿ ರೂಪಿಸಿದ ಸಿನಿಮಾ. ಇದರ ನಿರ್ದೇಶಕ ಇರಾನಿನ ಖ್ಯಾತ ಸಿನಿಮಾ ನಿರ್ದೇಶಕರಲ್ಲಿ ಒಬ್ಬರಾದ ಮೊಹ್ಸಿನ್‌ ಮಖ¾ಲ#ಫ್. ಮೊಹ್ಸಿನ್‌ ಮೂಲತಃ ಕ್ರಾಂತಿಕಾರಿ ಸಹ. ಒಂದು ಚಳವಳಿಗೆ ಸಂಬಂಧಪಟ್ಟಂತೆ ಜೈಲಿಗೆ ಹೋಗಿ ಹೊರಗೆ ಬಂದ ಮೇಲೆ ದೃಶ್ಯ ಮಾಧ್ಯಮವನ್ನು ಆಯ್ದುಕೊಂಡು ಆದರ ಮೂಲಕ ವಿಭಿನ್ನ ಕಥೆಗಳನ್ನು ಹೇಳಲು ಹೊರಟವರು. ವಿಶೇಷವೆಂದರೆ ಇವರ ಇಡೀ ಕುಟುಂಬ ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡಿದೆ.

ಸಿನಿಮಾದ ಕಥೆ ವಿಶೇಷವೇನಿಲ್ಲ. ದರುಲ್‌ ಅರಮನೆ ರಾಜನ ಕಥೆ ಹೇಳಿದರೆ ಈ ಸಿನಿಮಾ ರಾಜನ ಅನಂತರದ ಕತೆ ಹೇಳುತ್ತದೆ. ಕಲ್ಪನೆಯದ್ದು. ಕಲ್ಪನಾ ರಾಜ್ಯದಲ್ಲಿ ಒಮ್ಮೆ ಜನರೆಲ್ಲ ದಂಗೆ ಏಳುತ್ತಾರೆ. ರಾಜನ ಸರ್ವಾಧಿಕಾರ ಸಾಕಾಗಿರುತ್ತದೆ.

ಎಲ್ಲರೂ ಸಿಟ್ಟಿಗೆದ್ದು ಬೀದಿಗಿಳಿಯುತ್ತಾರೆ. ಈ ಪರಿಸ್ಥಿತಿಯನ್ನು ಅರಿಯುವ ರಾಜ ಕೂಡಲೇ ತನ್ನ ಕುಟುಂಬವನ್ನು ಹಡಗಿನ ಮೂಲಕ ಬೇರೆ ದೇಶಕ್ಕೆ ಸಾಗಿಸಲು ಸನ್ನದ್ಧನಾಗುತ್ತಾನೆ. ಅದರಂತೆ ಕುಟುಂಬವೂ ಸಿದ್ಧವಾಗುತ್ತದೆ. ಆದರೆ ಮೊಮ್ಮಗ ಮಾತ್ರ ಅಜ್ಜನೊಂದಿಗೆ ಇರಲು ಹಠ ಹಿಡಿಯುತ್ತಾನೆ. ಕುಟುಂಬವನ್ನೆಲ್ಲ ಮೊದಲು ಕಳುಹಿಸಿ, ತಾನೂ ಹಡಗು ಹತ್ತಿ ಪಲಾಯನಗೈಯುವುದು ರಾಜನ ಲೆಕ್ಕಾಚಾರವಾಗಿತ್ತು. ಮೊಮ್ಮಗನ ಹಠ ತಾಳದೆ ಉಳಿಸಿಕೊಳ್ಳುತ್ತಾನೆ. ಈಗ ಅಜ್ಜ ಮತ್ತು ಮೊಮ್ಮಗ ಮಾತ್ರ.

Advertisement

ಅಷ್ಟರಲ್ಲಿ ದಂಗೆಯ ಗುಂಪು ಆರಮನೆಯನ್ನೂ ಸುತ್ತುವರಿಯತೊಡಗುತ್ತದೆ. ಕಂಗಾಲಾಗುವ ರಾಜ ಏನು ಮಾಡಬೇಕೆಂದು ತೋಚದೇ ತನ್ನ ವೇಷ ಭೂಷಣವೆಲ್ಲ ಬದಿಗಿಟ್ಟು, ಅರಮನೆ, ಸಂಪತ್ತು ತೊರೆದು ಮೊಮ್ಮಗನನ್ನು ಬೆನ್ನಮೇಲೆ ಕುಳ್ಳಿರಿಸಿಕೊಂಡು ಗಿಟಾರ್‌ ಹಿಡಿದು ಜಿಪ್ಸಿಯ ವೇಷ ಧರಿಸಿ ಓಡ ತೊಡಗುತ್ತಾನೆ. ಈ ಪಲಾಯನ ಪಯಣದಲ್ಲಿ ಮೊಮ್ಮಗ ರಾಜ್ಯದಲ್ಲಿ ಎದ್ದ ದಂಗೆಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾನೆ. ಆದಕ್ಕೆಲ್ಲ ಏನೇನೋ . ಉತ್ತರ ಕೊಡುತ್ತಾ ಪ್ರಾಣ ಉಳಿಸಿಕೊಳ್ಳಲು ರಾಜ ಒದ್ದಾಡುತ್ತಾನೆ. ಕೊನೆಯಲ್ಲಿ ಕ್ಲೈಮ್ಯಾಕ್ಸ್‌ ಇದ್ದದ್ದೇ.

ಈ ಪಯಣದಲ್ಲಿ ತನ್ನ ಆಡಳಿತದಲ್ಲಿನ ಜನರ ಬಡತನ, ಸಂಕಷ್ಟಗಳು ಒಂದೆಡೆ ಅರಿವಿಗೆ ಬಂದರೆ, ಮತ್ತೂಂದೆಡೆ ರಾಜ, ಆತನ ಸರ್ವಾಧಿಕಾರ, ಆಡಳಿತದ ಬಗ್ಗೆಗಿನ ಪ್ರಜೆಗಳ ಆಕ್ರೋಶದ ಬಿಸಿ ತಟ್ಟತೊಡಗುತ್ತದೆ. ಇದರ ಮುಖೇನ ಪ್ರಜೆಗಳ ಮಹತ್ವ, ಒಳ್ಳೆಯ ಆಡಳಿತದ ಪ್ರಾಮುಖ್ಯ ಹಾಗೂ ಪ್ರಜೆಗಳ ಆಕ್ರೋಶದ ತಾಜಾತನವನ್ನು ತೋರಿಸಲು ಪ್ರಯತ್ನಿಸಿದ್ದಾನೆ ನಿರ್ದೇಶಕ. ಅದರೊಟ್ಟಿಗೇ ಸರ್ವಾಧಿಕಾರತನ ಶಾಶ್ವತವಲ್ಲ ಎಂಬುದನ್ನೂ ಬಿಂಬಿಸಲು ಹೊರಟಂತೆ ತೋರುತ್ತದೆ.

ಸುಮಾರು ಎರಡು ಗಂಟೆಯ ಸಿನಿಮಾ. ಇಡೀ ಸಿನಿಮಾ ನಡೆಯುವುದೇ ಅಜ್ಜ ಮತ್ತು ಮೊಮ್ಮಗನಿಂದ. ಅಜ್ಜನಾಗಿ ಮಿಷ ಗೊಮಿಸ್ವಿಲಿ, ಮೊಮ್ಮಗನಾಗಿ ದಚಿ ಒರ್ವೆಶ್ವಿ‌ಲಿ ಅಭಿನಯಿಸಿದ್ದರು.

2014ರಲ್ಲಿ ವೆನಿಸ್‌ ಅಂತಾರಾಷ್ಟ್ರೀಯ ಸಿನಿಮೋತ್ಸವದ ಉದ್ಘಾಟನ ಚಿತ್ರವಾಗಿ ಇದು ಪ್ರದರ್ಶಿತಗೊಂಡಿತ್ತು. ಇದಲ್ಲದೇ ಸುಮಾರು ಹತ್ತಕ್ಕೂ ಹೆಚ್ಚು ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಸಿನಿಮಾಪ್ರೇಮಿಗಳ ಮೆಚ್ಚುಗೆ ಗಳಿಸಿತ್ತು. ಹಲವು ಪ್ರಶಸ್ತಿಗಳನ್ನೂ ಗಳಿಸಿತ್ತು. ಕಥೆ ಚಿತ್ರಕಥೆಯೂ ಮೊಹ್ಸಿನ್‌ ರದ್ದೇ ಆಗಿತ್ತು. ಇತ್ತೀಚೆಗಷ್ಟೇ ಆಫ್ಘಾನಿಸ್ಥಾನದಲ್ಲಿನ. ಕಥೆಯಂತೆಯೇ . ತೋರುತ್ತದೆ.

  • ಅಪ್ರಮೇಯ
Advertisement

Udayavani is now on Telegram. Click here to join our channel and stay updated with the latest news.

Next