Advertisement

UV Fusion-Cinema: ಕಜಕಿಸ್ತಾನ ಸಿನಿಮಾ-ಓಲ್ಡ್‌ ಮ್ಯಾನ್‌

04:15 PM Jul 10, 2024 | Team Udayavani |

ಇದು ಕಜಕ್ತಿಸ್ತಾನದ ಸಿನಿಮಾ.

Advertisement

ಕಜಕಿಸ್ತಾನದ ಭಾಷೆ ಹಾಗೂ ರಷ್ಯನ್‌ ಭಾಷೆಯಲ್ಲೂ 2012 ರಲ್ಲಿ ರೂಪಿತವಾದ ಸಿನಿಮಾ. ಅರ್ಮೆಕ್‌ ತಸ್ರುನೊವ ಇದರ ನಿರ್ದೇಶಕ.

ನೊಬೆಲ್‌ ಪ್ರಶಸ್ತಿ ಪುರಸ್ಕೃತ ಕಾದಂಬರಿಕಾರ ಅರ್ನೆಸ್ಟ್‌ ಹೆಮ್ಮಿಂಗ್ವೆ ನ ದಿ ಓಲ್ಡ್‌ ಮ್ಯಾನ್‌ ಆ್ಯಂಡ್‌ ದಿ ಸೀ ಕಾದಂಬರಿಯಿಂದ ಪ್ರಭಾವಿತವಾಗಿರುವಂಥದ್ದು. ಅದರಲ್ಲಿನ ಪಾತ್ರಗಳಿಗೂ ಈ ಸಿನಿಮಾದ ಪಾತ್ರಗಳಿಗೂ ಸಾಕಷ್ಟು ಸಾಮ್ಯತೆಗಳಿವೆ.

ಒಬ್ಬ ಇಳಿ ವಯಸ್ಸಿನವ ಕಾಸಿನ್‌ (ಎರ್ಬುಲಟ್‌ ತೊಗೊಜೊಕೊವ), ತನ್ನ ಮಗಳು ಹಾಗೂ ಮೊಮ್ಮಗನೊಂದಿಗೆ ಒಂದು ಹಳ್ಳಿಯಲ್ಲಿ ವಾಸಿಸುತ್ತಿರುತ್ತಾನೆ. ಆದರೆ ಈತ ಮೀನುಗಾರನಲ್ಲ, ಸಮುದ್ರವೂ ಇಲ್ಲ. ಬದಲಾಗಿ ಒಬ್ಬ ಕುರಿಗಾಹಿ. ಕುದುರೆಯೊಂದಿಗೆ ಬದುಕುತ್ತಿರುತ್ತಾನೆ. ಫ‌ುಟ್‌ ಬಾಲ್‌ ಪ್ರೇಮಿ.

ಅಜ್ಜ ಮತ್ತು ಮೊಮ್ಮಗನೊಂದಿಗಿನ ಆತ್ಮೀಯತೆ ದಿನೇದಿನೆ ಗಟ್ಟಿಯಾಗುತ್ತಾ ಹೋಗುತ್ತದೆ. ಒಮ್ಮೆ ಸಂದರ್ಭಗಳೆಂಬ ಸಂಕಷ್ಟಗಳು ಬಿರುಗಾಳಿಯಂತೆ ತೋಳದ ರೂಪದಲ್ಲಿ ಅವನ ಮೇಲೆ ಎರಗಿದಾಗ ಅದನ್ನು ಎದುರಿಸುವ ಕಾಸಿನ್‌ ಗೆ ಬದುಕು ದೊಡ್ಡದಾಗಿ ಕಾಣುತ್ತದೆ. ಹಾಗೆಯೇ ತನ್ನ ಮೂಲ ಸಂಸ್ಕೃತಿ-ಸಂಗತಿಗಳನ್ನು ತನ್ನ ಮುಂದಿನ ತಲೆಮಾರಿಗೆ ವರ್ಗಾಯಿಸುವ ಕಾರ್ಯವನ್ನೂ ಯಶಸ್ವಿಯಾಗಿ ಮಾಡುತ್ತಾನೆ. ಇದೊಂದು ಸಾಹಸಮಯ ಹಾಗೂ ಜೀವನ ಪ್ರೀತಿಯನ್ನು ಹೆಚ್ಚಿಸುವಂಥ ಸಿನಿಮಾ.

Advertisement

ಇದೂ ಸಹ ಆಸ್ಕರ್‌ ಗೆ ವಿದೇಶಿ ಭಾಷೆಯ ಚಲನಚಿತ್ರಗಳ ವಿಭಾಗದಲ್ಲಿ ಕಜಕಿಸ್ತಾನದಿಂದ ನಾಮ ನಿರ್ದೇಶನಗೊಂಡಿತ್ತು. ಪ್ರಶಸ್ತಿ ಗೆಲ್ಲುವಲ್ಲಿ ಸಫ‌ಲವಾಗಲಿಲ್ಲ. ಆದರೆ ಇದರ ನಿರ್ದೇಶಕ ಆರ್ಮೆಕ್‌ ಬಹಳ ಸುದ್ದಿ ಮಾಡಿದ್ದರು. ವಿವಿಧ ಪ್ರಶಸ್ತಿಗಳನ್ನು ಪಡೆಯಿತಲ್ಲದೇ ಸಿನಿಮಾ ಪ್ರಿಯರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಜಕಿಸ್ತಾನದ ಕೆಲವು ಒಳ್ಳೆಯ ಸಿನಿಮಾಗಳಲ್ಲಿ ಇದೂ ಸಹ ಸ್ಥಾನ ಪಡೆದಿದೆ.

-ಅಪ್ರಮೇಯ

Advertisement

Udayavani is now on Telegram. Click here to join our channel and stay updated with the latest news.

Next