Advertisement

UV Fusion: ಕುಂತಿ ಬೇಡವೆಂದು ಬಿಟ್ಟ ಕರ್ಣನಂತೆ

10:07 AM Sep 18, 2023 | Team Udayavani |

ಆಕೆ ತನ್ನೆಲ್ಲ ಗಡಿಗಳನ್ನು ಮೀರಿ ಹೊಸ ಲೋಕದತ್ತ ಹಾರ ಬಯಸಿದವಳು. ಚಂದ್ರನಷ್ಟೇ ಹೊಳೆವ ನಗುವ ಹೊಂದಿದ ಆಕೆಯ ಹೆಸರು ಚಂದನಾ. ತಂದೆ ತಾಯಿಯ ಪ್ರೀತಿ ಅಕ್ಕರೆಯಲ್ಲಿ ಬೆಳೆದ ಒಬ್ಬಳೇ ಮುದ್ದಿನ ಮಗಳಾಕೆ. ತಂದೆ ಒಬ್ಬ ಮೀನುಗಾರ. ಆಕೆ ಎಲ್ಲರ ಬಳಿ ಹೆಮ್ಮೆಯಿಂದ ಹೇಳುತ್ತಿದ್ದಳು ನಾವು ಮೀನುಗಾರರು ಕಡಲ ಮಕ್ಕಳು ಎಂದು. ಓದುವುದರಲ್ಲಿ ಜಾಣೆ. ಚಿಕ್ಕ ವಯಸ್ಸಿನಲ್ಲಿ ಶಾಲೆಯಲ್ಲಿ ಮೇಡಂ ನೀನು ದೊಡ್ಡವಳಾದ ಮೇಲೆ ಏನಾಗಬೇಕು ಅಂತಿದೀಯಾ ಚಂದನಾ ಅಂತಾ ಕೇಳಿದರೆ  ನಾನು ಒಂದು ಒಳ್ಳೆಯ ಲಾಯರ್‌ ಆಗ್ತಿನಿ ಮೇಡಂ. ಅನ್ಯಾಯ ಆದೋರಿಗೆಲ್ಲಾ ನ್ಯಾಯ ಕೊಡಿಸ್ತೀನಿ ಅಂತಿದ್ದಳು.

Advertisement

ಆಕೆ ಮಾತಿನಲ್ಲಿ ಚುರುಕು. ಶಾಲೆಯಲ್ಲಿ ಯಾವುದೇ ಭಾಷಣ ಸ್ಪರ್ಧೆ ನಡೆದರು ಇವಳಿಗೆ ಪ್ರಥಮ ಬಹುಮಾನ. ತಂದೆ ತಾಯಿ ಅಂದ್ರೆ ಎಲ್ಲಿಲ್ಲದ ಪ್ರೀತಿ. ತಂದೆ ತಾಯಿ ಜತೆ ಸ್ನೇಹಿತೆಯಂತಿದ್ದಳು. ಅವಳಿಗೆ ಈಗ 20 ವರ್ಷ. ಪ್ರತಿಷ್ಠಿತ ಕಾಲೇಜಿನಲ್ಲಿ ಬ್ಯಾಚುಲರ್‌ ಆಫ್‌ ಲಾ ಓದುತ್ತಿದ್ದಳು. ಲಿಂಗದಲ್ಲಿ ಹುಡುಗಿಯಾಗಿದ್ದರು, ವೇಷ ಭೂಷಣದಲ್ಲಿ ಹುಡುಗರಂತೆ ಇದ್ದಳು. ಹುಡುಗರಂತೆ ಬಾಯ್‌ ಕಟ್‌, ಪ್ಯಾಂಟ್‌ ಶರ್ಟ್‌, ಈ ವೇಷಭೂಷಣದಿಂದ ಆಕೆ ಶಾಲೆಯಲ್ಲಿ ಎಲ್ಲರ ಗಮನ ಸೆಳೆದಿದ್ದಳು.

ಕೆಲವೊಬ್ಬರು ಛೇ ಇದೇನು ಗಂಡುಬೀರಿ ವೇಷ ನಾಚಿಕೆಯಿಲ್ಲದವಳು ಅಂತಾ ತಮ್ಮ ತಮ್ಮೊಳಗೆ ಆಡಿಕೊಳ್ಳುತ್ತಿದ್ದರು. ಇಷ್ಟೆಲ್ಲಾ ಪ್ರೀತಿ, ಮಮತೆ, ಅಸಹನೆಗಳನ್ನು ನುಂಗಿ ಬದುಕುತ್ತಿದ್ದ ಆ ಜೀವಕ್ಕೆ ಒಂದುದಿನ ಕಾರ್ಮೋಡ ಕವಿದೆ ಹೋಯ್ತು. ಒಂದು ದಿನ ಆಕೆ ಕಾಲೇಜಿಗೆ ಹೋಗುತ್ತಿರುವಾಗ ಎರಡು ಮೂರು ಹುಡುಗರು ಆಕೆಯನ್ನು ಚೂಡಾಯಿಸಲು ಪ್ರಾರಂಭಿಸಿದರು. ಮೊದಲೇ ಮಾತು ಜೋರಿನ ಹುಡುಗಿ, ಆ ಹುಡುಗರ ಪುಂಡಾಟಿಕೆ ಸಹಿಸಲಾಗದೆ ಬಾಯಿ ತೆರೆದೆ ಬಿಟ್ಟಳು, ಏನ್ರೊà ಶಾಲೆ ಬಿಟ್ಟು ಪೊರ್ಕಿಗಳ ತರ ಊರೂರು ತಿರುಗೋದು ಅಲ್ಲದೇ ಹುಡುಗಿರನ್ನು ಚೂಡಾಯಿಸೊದು ಬೇರೆ ಮಾಡೀರಾ, ಅಪ್ಪ ಅಮ್ಮ ದುಡಿದು ತರೋದನ್ನು ತಿಂದು ಮೈ ಕೊಬ್ಬು ಏರಿದೆ ನಿಮಗೆ ಅದಿಕ್ಕೆ ಹೀಗಾಡ್ತಿರಾ ಇನ್ನೊಂದು ಸಲಿ ನನ್ನ ಜತೆ ಹೀಗೆ ಮಾಡಿದರೆ ಚಪ್ಪಲಿ ಎಟು ಗ್ಯಾರಂಟಿ ಎಂದೇ ಬಿಟ್ಟಳು.

ಅದರಿಂದ ಸಿಟ್ಟಿಗೆದ್ದ ಹುಡುಗರು ಆಕೆಯನ್ನು ಇನ್ನಷ್ಟು ಕಿಚಾಯಿಸಲು ಶುರು ಮಾಡಿದರು. ಆಕೆಯ ವೇಷಭೂಷಣಗಳ ಬಗ್ಗೆ ಆಡಿಕೊಳ್ಳಲು ಶುರು ಮಾಡಿದರು. ಇದರಿಂದ ಬೇಸತ್ತ ಅವಳು ಅಲ್ಲಿಂದ ಹೋರಟು ಹೋದಳು. ಆದರೆ ಇದರಿಂದ ಅತಿಯಾಗಿ ಕೋಪಗೊಂಡ ಆ ಹುಡುಗರು ಅವಳ ತಂದೆ ತಾಯಿ ಬಳಿ ಹೋಗಿ ಮೊದಲು ಮಗಳನ್ನು ಹೇಗೆ ಬೆಳೆಸಬೇಕು ಅಂತ ಕಲಿತುಕೊಳ್ಳಿ, ಹೆಣ್ಣು ಹೆಣ್ಣಾಗಿದ್ರೆ ಚಂದ. ಅವಳು ಗಂಡು ಬೀರಿ ತರ ಆಡೋದು ಅಲ್ಲದೇ ರಸ್ತೆಯಲ್ಲಿ ಹೋಗೋ ನಮ್ಮಂತೋರಿಗೆಲ್ಲ ಬೈಕೊಂಡು ಓಡಾಡುತ್ತಾಳೆ.

ಇನ್ನೊಂದು ಸಲ ಹೀಗಾದ್ರೆ ನಿಮ್ಮ ಮಗಳ ಕತೆ ಅಷ್ಟೇ ಅಂತಾ ಹೇಳಿ ಅಲ್ಲಿಂದ ಹೊರಟರು. ಇದೆಲ್ಲಾ ಜಗಳವನ್ನು ಕೇಳಿಸಿಕೊಂಡ ಪಕ್ಕದ ಮನೆ ಅಜ್ಜಿ ಆ ಹುಡುಗರನ್ನು ಕರೆದು ಸತ್ಯ ಘಟನೆ ಒಂದನ್ನು ಹೇಳಿಯೇ ಬಿಟ್ಟಳು. ಅ ಸತ್ಯ ಆಕಾಶದಲ್ಲಿ ತಾರೆಯಂತೆ ಮೀನುಗುತ್ತಿದ್ದ ಚಂದನಾಳ ಬದುಕು ಒಂದೇ ಸಲಕ್ಕೆ ಭೂಮಿಗೆ ಅಪ್ಪಳಿಸಿ ಚೂರು ಚೂರು ಮಡುವಂತಿತ್ತು. ಏನ್ರಪಾ ಆ ಗಂಡ, ಹೆಂಡ್ತಿಗೆ ಆ ರೀತಿ ಬಾಯಿಗೆ ಬಂದ ಹಾಗೆ ಬೈತಾ ಇದ್ರಿ ಅಲ್ವಾ, ನಿಜವಾಗಿಯೂ ಆ ಚಂದನಾ ಇವರ ಮಗಳೇ ಅಲ್ಲಾ. 20 ವರ್ಷಗಳ ಹಿಂದೆ ನಡೆದ ಘಟನೆಯನ್ನು ಸವಿವರವಾಗಿ ಆ ಹುಡುಗರ ಮುಂದೆ ಹೇಳಿಯೇ ಬಿಟ್ಟಳು.

Advertisement

ಇದನ್ನೇ ಸೂತ್ರವಾಗಿ ತೆಗೆದುಕೊಂಡ ಆ ಹುಡುಗರು ಆಕೆ ಶಾಲೆಯಿಂದ ಮರಳಿ ಬರುವಾಗ ತಂದೆ ತಾಯಿ ಯಾರೂ ಅಂತ ಗೋತ್ತೇ ಇಲ್ಲದೇ ಇರೋ ನೀನು ನಮ್ಮ ಬಗ್ಗೆ ಮಾತಾಡ್ತೀಯಾ, ಹೋಗೇ ಅನಾಥೆ ಅಂದು ಬಿಟ್ಟರು. ತತ್‌ಕ್ಷಣಕ್ಕೆ ಆಘಾತಕ್ಕೊಳಗಾದ ಚಂದನಾ ಏನ್ರೋ ಹೇಳುತ್ತಿದ್ದೀರಾ..ನನಗೆ ತಂದೆ ತಾಯಿ ಇದ್ದಾರೆ. ನಾನು ಮೀನುಗಾರ ಮಂಜಪ್ಪ, ಯಶೋದೆೆಯ ಮಗಳು. ಇದನ್ನು ಕೇಳಿ ನಕ್ಕ ಆ ಹುಡುಗರು ಮಗಳಂತೆ ಮಗಳು ಹೋಗಿ ನಿಮ್ಮ ತಂದೆ ತಾಯಿ ಹತ್ತಿರ ಕೇಳು ನಿನ್ನ ಜನ್ಮ ರಹಸ್ಯ ಎಂದರು. ಇದನ್ನು ಕೇಳಿ ಸೀದಾ ಮನೆಗೆ ಓಡಿದ ಚಂದನಾ ತಂದೆ ತಾಯಿ ಬಳಿ ನಿಂತು ನನ್ನ ತಂದೆ ತಾಯಿ ಯಾರು? ನೀವು ನನ್ನ ನಿಜವಾದ ತಂದೆ ತಾಯಿ ಅಲ್ವಾ? ಎಂಬಂತೆ ಪ್ರಶ್ನೆಗಳ ಮಳೆ ಸುರಿಸಿದಳು.

ಮಗಳ ಬಾಯಿಯಿಂದ ಇದನ್ನು ಕೇಳಿಸಿಕೊಂಡ ತಂದೆ ತಾಯಿಯ ಹೃದಯಕ್ಕೆ ಮುಳ್ಳಿನಿಂದ ಚುಚ್ಚಿದಂತಾಯಿತು. ಅಲ್ಲಮ್ಮ ನೀನು ನಮ್ಮ ಸಾಕು ಮಗಳು. 20 ವರ್ಷಗಳ ಹಿಂದೆ ನಿಮ್ಮ ಅಮ್ಮನ ಗರ್ಭಕೋಶದಲ್ಲಿ ಗಡ್ಡೆಗಳಾದ್ದರಿಂದ ಆಕೆಯ ಗರ್ಭಕೋಶವನ್ನು ತೆಗೆದು ಬಿಟ್ಟರು. ಆ ದಿನ ನಿನ್ನ ತಾಯಿ ಆಸ್ಪತ್ರೆಯೇ ಕಂಪಿಸುವಂತೆ ಗೋಳೊ ಎಂದು ಅತ್ತಿದಳು. ಆದರೆ ಪಕ್ಕದ ವಾರ್ಡ್‌ನಲ್ಲಿ ನಿನ್ನ ತಾಯಿ ನಿನಗೆ ಜನ್ಮ ನೀಡಿದ್ದಳು. ಆದರೆ ಆಕೆಗೆ ನೀನು ಬೇಡವಾದ ಮಗಳಾಗಿದ್ದೆ. ಹಾಗಾಗಿ ನಿನ್ನನ್ನು ಅನಾಥಾಶ್ರಮಕ್ಕೆ ಸೇರಿಸುವುದಾಗಿ ನಿನ್ನ ಹೆತ್ತ ತಾಯಿ ನರ್ಸ್‌ ಬಳಿ ಕೇಳಿಕೊಂಡಳು.

ನಿನ್ನ ಸಾಕು ತಾಯಿಯ ಆಕ್ರಂದನ ನೋಡಿದ ಆ ನರ್ಸ್‌ ನಿನ್ನನ್ನು ತಂದು ನಮ್ಮ ಕೈಗಿಟ್ಟು ಸಾಕಿಕೊಳ್ಳುವುದಾದರೆ ಸಾಕಿಕೊಳ್ಳಿ ಎಂದಳು. ಒಣಗಿದ ಮರದಂತಿದ ನಮ್ಮ ಜೀವನಕ್ಕೆ ನೀನು ಹೊಸ ಚಿಗುರಿನಂತೆ ಬಂದೆ. ನೀನು ನಮ್ಮ ಮಗಳೇ ಅಮ್ಮಾ ಎಂದು ತಂದೆ ಅತ್ತು ಬಿಟ್ಟರು. ಆಕೆಗೆ ಒಂದು ಸಲಕ್ಕೆ ತಾನು ಕುಂತಿ ಬೇಡವೆಂದು ಬಿಟ್ಟ ಕರ್ಣನಂತೆ ಅನಿಸಿಬಿಟ್ಟಳು. ಆದರು ಆಕೆಯ ಪಾಲಿಗೆ ಉಳಿದಿದ್ದ ಸಂತೋಷ ಒಂದೇ ಸಾಕು ಮಗಳಾದರೂ ಹೆತ್ತ ಮಗಳಿಗಿಂತ ಹೆಚ್ಚಾಗಿ ತನನ್ನು ಸಾಕಿದ ಆ ಪೋಷಕರು.

-ದಿವ್ಯಾ

ಎಸ್‌ಡಿಎಂ ಕಾಲೇಜು ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next