Advertisement

UV Fusion: ಮಾಯಾ ತಾಣ

10:01 AM May 11, 2024 | Team Udayavani |

ಮಾಯಾ ತಾಣ ಎಂದ ತಕ್ಷಣವೇ ಬೇರೇನು ಯೋಚಿಸಬೇಡಿ ಇದೇನು ರಂಬೆ ಊರ್ವಶಿ ಮೇನಕೆಯವರು ನರ್ತಿಸುವ ಸ್ವರ್ಗವಲ್ಲ, ಆದರೂ ಇಂದಿನ ಕಾಲೇಜಿಗೆ ಹೋಗುವ ಯುವಕರಿಗೆ ಒಂದು ರೀತಿಯಲ್ಲಿ ಇದು ಸ್ವರ್ಗವೇ ಆಗಿದೆ ಅದೇ ಬಸ್‌ ತಂಗುದಾಣ.

Advertisement

ಬಸ್‌ ತಂಗುದಾಣವೆಂದರೆ ಕೇವಲವಾಗಿ ಯೋಚಿಸಬೇಡಿ. ಶಿವನು ತನ್ನ ಮೂರನೇ ಕಣ್ಣನ್ನು ತೆರೆದು ನೋಡುವ ಹಾಗೆ ನಾವು ಕೂಡಾ ನಮ್ಮ ಮೂರನೇ ಕಣ್ಣನ್ನು ತೆರೆದು ನೋಡಿದರೆ ಇಲ್ಲಿ ನಡೆಯುವ ಸತ್ಯಾನುಸತ್ಯ ಘಟನೆಗಳನ್ನು ವೀಕ್ಷಿಸಬಹುದಾಗಿದೆ. ಪ್ರತಿಯೊಬ್ಬರೂ ಕೂಡ ತಂಗುದಾಣಕ್ಕೆ ಹೋಗಿಯೇ ಹೋಗಿರುತ್ತಾರೆ. ಆದರೆ ಯಾರು ಕೂಡ ತಂಗುದಾಣವನ್ನು ಸೂಕ್ಷ್ಮವಾಗಿ ಗಮನಿಸುವುದಿಲ್ಲ, ಎಲ್ಲರೂ ಕೂಡ ಅವರವರ ಗೋಜಿನಲ್ಲಿ ಇರುತ್ತಾರೆ. ಯಾವಾಗಾದರೂ ಮನೆ ಕಾಣುತ್ತೆ ಎಂಬ ಸಂದಿಗ್ಧ ಸ್ಥಿತಿಯಲ್ಲಿ ಇರುತ್ತಾರೆ.

ಆದರೆ ಇನ್ನೂ ಕೆಲವರಿಗೆ ತಂಗುದಾಣವೆಂದರೆ ಮೋಜು. ಅಂತವರಲ್ಲಿ ನಾನು ಕೂಡ ಒಬ್ಬ. ನಾವು ಕಾಲೇಜಿನಲ್ಲಿ ಕಾಲ ಕಳೆಯುವುದಕ್ಕಿಂತ ಹೆಚ್ಚಿನ ಕಾಲವನ್ನು ತಂಗುದಾಣದಲ್ಲಿ ಕಳೆಯುತ್ತೇವೆ. ಹಾಗೆಂದರೆ ಕಾಲೇಜಿಗೆ ಹೋಗದೆಯೇ ಬಂಕ್‌ ಹಾಕಿ ಬಸ್‌ ಸ್ಟ್ಯಾಂಡ್‌ ನಲ್ಲಿ ಇರುತ್ತೇವೆಂದು ಅರ್ಥವಲ್ಲ. ನಮ್ಮೂರಿಗೆ ತೆರಳುವ ಬಸ್ಸಿನ ಸಮಯದಲ್ಲಿ ಅಷ್ಟೊಂದು ಅಂತರವಿದೆಯೆಂದು. ಅದರಲ್ಲೂ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಒಮ್ಮೆ ನಿಲ್ದಾಣದ ಬಗ್ಗೆ ಕೇಳಿದರೆ ಗುಣಗಾನ ಮಾಡಿ ಹೇಳುವುದನ್ನು ಒಮ್ಮೆ ಕೇಳಬೇಕು.

ಈ ಬಸ್‌ ನಿಲ್ದಾಣದ ಒಂದು ಮೂಲೆಯಲ್ಲಿ ನಿಂತು ಸುತ್ತಲೂ ಗಮನಿಸಬೇಕು ಒಬ್ಬೊಬ್ಬರು ಒಂದೊಂದು ಪಾತ್ರದಲ್ಲಿ ಕಾಣುತ್ತಾರೆ. ಅದನ್ನು ನೋಡುವುದೇ ಒಂದು ತರನಾದ ಮಜ ಸಿಗುತ್ತದೆ. ಒಂದೆಡೆಗೆ ಈಗ ತಾನೇ ಪದವಿ ಪೂರ್ವ ತರಗತಿಗೆ ಬಂದಿರುವಂತಹ ಹುಡುಗರು ಗೇಲಿ ಮಾಡುತ್ತಿರುವಂತಹ ಸನ್ನಿವೇಶ. ಇನ್ನೊಂದೆಡೆಗೆ ಒಂದಿಷ್ಟು ಹದಿಹರೆಯದ ಹುಡುಗರ ಮನಸ್ಸು ಚಂಚಲವಾಗಿ ಅವರು ತಮ್ಮ ಪ್ರೇಯಸಿಯನ್ನು ಹುಡುಕುವ ಅಲೋಚನೆಯಲ್ಲಿಯೇ ಮುಳುಗಿರುತ್ತಾರೆ.  ಇನ್ನೊಂದು ಗುಂಪಿದೆ ಇದು ಗುಂಪಿಗೆ ಸೇರದ ಪದದ ತರನಾದ ಗುಂಪು ಇವರಿಗೆ ಯಾವುದೇ ರೀತಿಯ ಪ್ರಪಂಚದ ಮೇಲೆ ಅರಿವಿರುವುದಿಲ್ಲ ಹಾಗೆ ತಾವು ಇಹಲೋಕ ತ್ಯಜಿಸಿದ ಹಾಗೆ ಮೊಬೈಲ್‌ ಗೇಮಿಂಗ್‌ ನ ಒಳಗಡೆಯೇ ಹೊಕ್ಕಿ ಮುಳುಗಿರುತ್ತಾರೆ.

ಒಂದೆಡೆ ಯುವಕರ ಮೈ ರೋಮಾಂಚನಗೊಳಿಸುವ ಕಿತ್ತಾಟಗಳು  ನಡೆಯುತ್ತಿರುತ್ತದೆ. ಅದರೊಂದಿಗೆ ಸಾರ್ವಜನಿಕರು ಮತ್ತು ಬಸ್‌ ನಿರ್ವಾಹಕರೊಂದಿಗಿನ ಜಗಳವಂತು ಸರ್ವೇ ಸಾಮಾನ್ಯವಾಗಿದೆ.  ಇವೆಲ್ಲವನ್ನು ಒಂದೆಡೆ ನೋಡಲು ಸಿಕ್ಕಿರುವುದೇ ನಮ್ಮ ಭಾಗ್ಯ. ಸಿನಿಮಾದಲ್ಲೂ ಕೂಡ ಎಲ್ಲವನ್ನು ಒಂದೇ ಬಾರಿ ನೋಡಲು ಕಾಣುವುದಿಲ್ಲ ಆದರೆ ಇಂಥ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲವನ್ನು ಕಾಣಬಹುದಾಗಿದೆ ಕೆಲವರಿಗೆ ತಂಗುದಾಣವೆಂದರೆ ಕಿರಿಕಿರಿ ಅನ್ನಿಸುತ್ತದೆ. ಆದರೆ ನಮಗೆ ಒಂಥರ ಮನಸ್ಸಿಗೆ ಮುಂದ ನೀಡುವಂತಹ ಸ್ಥಳವಾಗಿದೆ. ಎಲ್ಲಿಯಾದರೂ ಒಬ್ಬಂಟಿಯಾಗಿ ದೂರ ಪ್ರಯಾಣಿಸಿದಲ್ಲಿ ಈ ತಂಗುದಾಣವೇ ಒಮ್ಮೊಮ್ಮೆ ನಮ್ಮ ಮನೆಯಾಗಿದ್ದು ಕೂಡ ಉಂಟು. ಇದು ಸಾರ್ವಜನಿಕ ಸ್ಥಳವಾಗಿದ್ದರಿಂದ ನಮ್ಮ ಮನೆಯನ್ನು ಹೀಗೆ ಸ್ವತ್ಛಂದವಾಗಿ ಇಟ್ಟುಕೊಳ್ಳುತ್ತೇವೋ ಹಾಗೆ ಸಾರ್ವಜನಿಕ ಸ್ಥಳ ಹಾಗೂ ಸಾರ್ವಜನಿಕ ವಸ್ತುಗಳನ್ನು ಕೂಡ ಜಾಗರೂಕತೆಯಿಂದ ಕಾಯ್ದುಕೊಳ್ಳಬೇಕಾದದ್ದು ನಮ್ಮ ಕರ್ತವ್ಯವಾಗಿದೆ..

Advertisement

-ಸುದೀಪ ಮಾಳಿ

ಎಂ ಎಂ ಕಾಲೇಜು ಶಿರಸಿ.

Advertisement

Udayavani is now on Telegram. Click here to join our channel and stay updated with the latest news.

Next