ಜೀವನವೆಂಬುವುದು ಅನಿಶ್ಚಿತತೆಯ ಪಯಣ. ಈ ಪಯಣ ಸಮಸ್ಯೆಗಳದ್ದೇ ಸಾಗರವಾಗಿರುತ್ತದೆ. ಆದರೆ ಪ್ರತಿಯೊಂದು ಸಮಸ್ಯೆಯ ಜತೆಗೂ ಅದಕ್ಕೆ ಬೇಕಾಗಿರುವ ಪರಿಹಾರವು ಹುಟ್ಟಿಕೊಳ್ಳುತ್ತದೆ. ಜೀವನವೆಂದರೆ ಸುಖ – ದುಃಖಗಳ ಸಮ್ಮಿಲನ ಕೂಡ ಹೌದು. ಕೆಲವರು ಅಂದುಕೊಳ್ಳುತ್ತಾರೆ ತನಗೆ ಮಾತ್ರ ಯಾವಾಗಲೂ ಸಮಸ್ಯೆಗಳು ಇರುವುದೆಂದು.
ಹೀಗೆ ಚಿಂತಿಸುತ್ತಾ ಜೀವನದಲ್ಲಿ ಕುಗ್ಗುತ್ತಾ ಹೋಗುತ್ತಾರೆ ಹೀಗೆ ಕುಗ್ಗುವುದರಿಂದ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಿಲ್ಲ ಬದಲಾಗಿ ಅವರ ಆತ್ಮಸ್ಥೈರ್ಯ ಕಡಿಮೆಯಾಗುತ್ತಾ ಹೋಗುತ್ತದೆ. ಸಮಸ್ಯೆಗಳನ್ನು ಯಾವಾಗಲೂ ಎದೆಗುಂದದೇ ಸ್ವೀಕರಿಸಬೇಕು. ಸಮಸ್ಯೆಗಳು ಬರುತ್ತಾ ಇರುತ್ತದೆ ಅವುಗಳಿಗೆ ಕೊನೆ ಎಂಬುದೇ ಇÇÉಾ. ಸಮಸ್ಯೆಗಳು ಬಾರದೇ ಹೋದರೆ ಜೀವನದಲ್ಲಿ ಖುಷಿ ಎಂಬುವುದರ ಅರಿವು ಆಗಲು ಸಾಧ್ಯವೇ ಇಲ್ಲ.
ಸುಖ-ದುಃಖ, ಸಿಹಿ -ಕಹಿ ಇವುಗಳನ್ನೆಲ್ಲಾ ಸಮಾನ ಮನಸ್ಸಿನಿಂದ ಸ್ವೀಕರಿಸುವವರಿಗೆ ಸಮಸ್ಯೆಗಳಿಗೆ ಹೋರಾಡುವ ಆತ್ಮವಿಶ್ವಾಸ ಮತ್ತು ಶಕ್ತಿ ಇದ್ದೇ ಇರುತ್ತದೆ. ಸಮಸ್ಯೆಗಳಿಗೆ ಬೆನ್ನು ತೋರಿಸದೆ ಎದೆ ಕೊಟ್ಟು ನಿಲ್ಲಬೇಕು. ಸಮಸ್ಯೆಗಳು ಬಂದಾಗ ನಮಗೆ ಮುಖ್ಯವಾಗಿ ಬೇಕಾದದ್ದೇ ತಾಳ್ಮೆ. ಸದಾ ತಾಳ್ಮೆಯಿಂದಿದ್ದು, ಬಂದಂತಹ ಸಮಸ್ಯೆಗಳೆಲ್ಲವನ್ನು ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಿ ಅದಕ್ಕೆ ಬೇಕಾದ ಪರಿಹಾರೋಪಾಯವನ್ನು ಕಂಡುಕೊಂಡು ಬಾಳಬೇಕು. ಸಮಸ್ಯೆಗಳು ಬರುವುದು ನಮ್ಮನ್ನು ನಾಶ ಪಡಿಸಲು ಅಲ್ಲ ಬದಲಾಗಿ ನಮ್ಮೊಳಗಿನ ಶಕ್ತಿಯನ್ನು ಅರ್ಥ ಪಡಿಸಲು ಎಂಬ ಅರಿವಿನೊಂದಿಗೆ ಸದಾ ಬದುಕಿದರೆ ಗೆಲುವು ನಮಗೆ ಕಟ್ಟಿಟ್ಟ ಬುತ್ತಿ.
–
ಕಾವ್ಯಾಶ್ರೀ ಎಸ್.
ಸಾಮೆತ್ತಡ್ಕ , ಸ. ಪ್ರ ದ. ಮಹಿಳಾ ಕಾಲೇಜು, ಪುತ್ತೂರು