Advertisement

Female: ಹೆಣ್ಣೆಂಬ ಕಿರೀಟ

12:22 PM Sep 08, 2024 | Team Udayavani |

ಹೆಣ್ಣು..! ಹೆಣ್ಣಿನ ವರ್ಣನೆಯ ಬಗ್ಗೆ ಅನೇಕ ಸಾಹಿತಿಗಾರರು, ಕವಿಗಳು, ವಿದ್ವಾಂಸರು ಹಾಡಿ ಹೊಗಳಿದ್ದಾರೆ. ಅದಲ್ಲದೆ ಹೆಣ್ಣಿನ ವರ್ಣನೆಯ ಬಗ್ಗೆ ಲೇಖನಗಳು, ಸಂಗೀತಗಳು ಹಾಗೂ ಕಥೆಗಳ ಮೂಲಕ ವರ್ಣಿಸಲಾಗಿದೆ. ಮತ್ತು ಮುಂತಾದ ವಿಚಾರಗಳಿಗೆ ಹೆಣ್ಣನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ. ಹಿಂದಿನ ಕಾಲಘಟ್ಟದಲ್ಲಿ ಹೆಣ್ಣು ಮಗು ಹುಟ್ಟಿದ ಕೂಡಲೇ ಅದು ಹೆಣ್ಣಿಂದು ತಿಳಿದ ತಕ್ಷಣ ನಾನಾ ತರಹದ ಮಾತುಗಳನ್ನಾಡಿ ಆ ಮಗುವಿನ ಭವಿಷ್ಯವನ್ನು ಅಂದೇ ನಿರ್ಧರಿಸಿಬಿಡುತ್ತಾರೆ.

Advertisement

ಆ ಮಗು ಇನ್ನು ಮದುವೆಯಾಗಿ ಗಂಡನ ಮನೆಗೆ ಹೋಗುವವಳು. ಆದರೆ ಗಂಡು ಮಗುವಾಗಿದ್ದರೆ ಆ ಮಗು ಇನ್ನೂ ಚೆನ್ನಾಗಿ ಓದಿ ನಂತರ ಸರಕಾರಿ ಕೆಲಸ ಸಿಕ್ಕಿ ತನ್ನ ತಂದೆ -ತಾಯಿಯನ್ನು ನೋಡಿಕೊಳ್ಳುತ್ತಾನೆ ಎಂದು. ಕೊನೆಗಾಲದಲ್ಲಿ ಆತ ತಂದೆ ತಾಯಿಗೆ ಆಸರೆಯಾಗಿರುತ್ತಾನೆ ಎಂಬ ನಂಬಿಕೆ.

 ಹೆಣ್ಣಿನ ಕಷ್ಟದ ಹಾದಿ..!

ಹೆಣ್ಣಿನ ಪರಿಸ್ಥಿತಿಯಲ್ಲಿ ನಿಂತು ನೋಡಿದರೆ ಇನ್ನೂ ವಿದ್ಯಾಭ್ಯಾಸ ಮಾಡಬೇಕು. ನಾನು ಸಮಾಜದಲ್ಲಿ ಎಲ್ಲರಂತೆ ಬದುಕಬೇಕು. ನನಗೂ ಒಂದು ಕೆಲಸ ಸಿಕ್ಕಿ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುವಷ್ಟರಲ್ಲಿ ಅಷ್ಟು ಬೇಗ ಮದುವೆ ಮಾಡುತ್ತಿದ್ದಾರೆ ಎಂಬ ನೋವು ಆ ಹೆಣ್ಣಿನ ಮನಸ್ಸಿಗೆ ಬಂದುಬಿಡುತ್ತದೆ. ತನ್ನ ಅಪ್ಪ ಅಮ್ಮನ ಒತ್ತಾಯದ ಮೇರೆಗೆ ಮದುವೆಗೆ ಒಪ್ಪಿಗೆ ಕೊಡುತ್ತಾಳೆ.

ಆದರೆ ಮದುವೆ ಆದ ಮೇಲೆ ಅವಳ ಮುಂದಿನ ಜೀವನ ನರಕಕ್ಕಿಂತ ತುಂಬಾನೇ ಕಠಿನವಾಗಿರುತ್ತದೆ. ಒಂದು ಕಡೆ ಅಪ್ಪ ಅಮ್ಮನ ಆಸರೆ ಇಲ್ಲ. ಇನ್ನೊಂದು ಕಡೆ ವಿದ್ಯಾಭ್ಯಾಸ ಇಲ್ಲ. ಹೀಗೆ ಹೆಣ್ಣು ಒಂದಿಷ್ಟು ಮೂಢನಂಬಿಕೆಗಳಿಂದ ತನ್ನ ಜೀವನವನ್ನು ಕಣ್ಣೀರಲ್ಲಿ ಕಳೆಯುತ್ತಾ ಇರುತ್ತಾಳೆ. ಇದು ಅವಳ ತಪ್ಪಲ್ಲ ಸಮಾಜವು ಹೆಣ್ಣಿನ ಬಗ್ಗೆ ತಪ್ಪು ಕಲ್ಪನೆಯನ್ನು ಇಟ್ಟುಕೊಂಡಿರುವುದು ತಪ್ಪಾಗಿದೆ.

Advertisement

 ಹೆಣ್ಣಿನ ಸಾಧನೆಯ ಹಾದಿ..!

ಹೆಣ್ಣನ್ನು ಪ್ರಾಯೋಗಿಕವಾಗಿ ನೋಡಿದರೆ ಗಂಡಸರಿಗಿಂತ ಹೆಣ್ಣು ಮಕ್ಕಳು ಈಗ ತುಂಬಾನೇ ಮುಂದುವರೆಯುತ್ತಿದ್ದಾರೆ. ಗಂಡಸರಿಗಿಂತ ನಾವೇನು ಕಮ್ಮಿ ಇಲ್ಲ ಎಂಬ ರೀತಿಯಲ್ಲಿ ತಮ್ಮ ಕೆಲಸಗಳಲ್ಲಿ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಹೆಣ್ಣು ಮಕ್ಕಳು ಮನಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬ ಆತ್ಮ ವಿಶ್ವಾಸ ಅವರಲ್ಲಿದೆ. ಹೆಣ್ಣು ಮಕ್ಕಳು ಸಾಧನೆಯ ಹಾದಿಯಲ್ಲಿ ಮುನ್ನುಗುತ್ತಿದ್ದಾರೆ.

ಈ ಒಂದು ಛಲವೇ ಹೆಣ್ಣು ಮಕ್ಕಳನ್ನು ಉನ್ನತ ಸ್ಥಾನಗಳಿಗೆ ಕರೆದುಕೊಂಡು ಹೋಗಲು ಕಾರಣವಾಗಿದೆ. ಹೆಣ್ಣು ಮಕ್ಕಳು ಡಾಕ್ಟರ್‌, ಇಂಜಿನಿಯರಿಂಗ್‌, ಲಾಯರ್‌, ಪೋಲಿಸ್‌ ಮುಂತಾದ ಉದ್ಯೋಗಗಳಲ್ಲಿ ತಮ್ಮ ಯಶಸ್ಸನ್ನು ಕಾಣುತ್ತಿದ್ದಾರೆ. ಹಾಗಾಗಿ ಯಾರು ಕೂಡ ಮೇಲು ಕೀಳಲ್ಲ. ಹೆಣ್ಣುಗಳು, ಗಂಡುಗಳು ಎಲ್ಲರೂ ಸಮಾಜದ ಮುಂದೆ ಸಮಾನರೆ. ಗಂಡಿಗೆ ಈ ಸಮಾಜದಲ್ಲಿ ಎಷ್ಟು ಹಕ್ಕು ಉಂಟೋ, ಅಷ್ಟೇ ಹಕ್ಕು ಹೆಣ್ಣಿಗೂ ಕೂಡ ಇದೆ ಎನ್ನುವುದನ್ನು ಮರೆಯಬಾರದು.

ಮೌಲ್ಯ ಶೆಟ್ಟಿ

ಎಸ್‌ಡಿಎಂ ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next