ಮಧ್ಯಭಾಗದಲ್ಲಿ ಸರ್ಕಾರ ರಚನೆಗಾಗಿ ನಡೆದಿದ್ದ ಕಿತ್ತಾಟದಲ್ಲಿ ಹಾಗೂ ಮಾಜಿ ಮುಖ್ಯಮಂತ್ರಿ ವಿಜಯ್ ಬಹುಗುಣ
ನೇತೃತ್ವದಲ್ಲಿ ಹಲವು ಪ್ರಮುಖ ಮುಖಂಡರು ಪಕ್ಷ ತೊರೆದು ಬಿಜೆಪಿ ಸೇರಿದ್ದು ಕಾಂಗ್ರೆಸ್‌ಗೆ ದೊಡ್ಡ ಪೆಟ್ಟು ಕೊಟ್ಟಿದೆ.
ಮತದಾನ ನಂತರದ ಎಲ್ಲ ಸಮೀಕ್ಷೆಗಳ ಊಹೆ ಮೀರಿ ಉತ್ತರಾಖಂಡದಲ್ಲಿ ಜಯಭೇರಿ ಬಾರಿಸಿರುವ ಬಿಜೆಪಿ, ಹರೀಶ್
ರಾವತ್ ನೇತೃತ್ವದ ಕಾಂಗ್ರೆಸ್ ಪಡೆಗೆ ದೊಡ್ಡ ಸೋಲಿನ ರುಚಿ ತೋರಿಸಿದೆ. ಬಹುತೇಕ ಪ್ರಧಾನಿ ಮೋದಿ ಹೆಸರಲ್ಲೇ ಚುನಾವಣೆ ಎದುರಿಸಿದ ಬಿಜೆಪಿ, 70ರ ಪೈಕಿ 57 ಕ್ಷೇತ್ರಗಳನ್ನು ಕಬಳಿಸುವ ಮೂಲಕ ಪ್ರಚಂಡ ಬಹುಮತ ಗಳಿಸಿದೆ.
Advertisement
ಸ್ವತಃ ರಾವತ್, ತಾವು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಸೋಲನುಭವಿಸುವ ಮೂಲಕ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಿದ್ದು, ಆಡಳಿತ ವಿರೋಧಿ ಅಲೆ ಸ್ಪಷ್ಟವಾಗಿ ಗೋಚರಿಸಿದೆ. ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನಿಂದ ಬಂಡಾಯವೆದ್ದು ಬಿಜೆಪಿ ಸೇರಿದ್ದ ವಿಜಯ್ ಬಹುಗುಣರ ಪುತ್ರ ಸೌರವ್ ಬಹುಗುಣ ಜಯಗಳಿಸಿರುವುದು ಕಾಂಗ್ರೆಸ್‌ಗೆ ಮುಜುಗರ ಉಂಟುಮಾಡಿದೆ. ಉತ್ತರಾಖಂಡದಲ್ಲಿ ಈ ಚುನಾವಣೆಯನ್ನು ಬಾಹುಬಲಿ (ರಾವತ್) ಮತ್ತು ಬಾ (ಬಹುಗುಣ) ನಡುವಿನ ಯುದ್ಧವೆಂದೇ ಪರಿಗಣಿಸಲಾಗಿತ್ತು. ಈ ಯುದ್ಧದಲ್ಲಿ ವಿಜಯ್ ಬಹುಗುಣ ತಮ್ಮ ಸಾಮರ್ಥ್ಯಸಾಬೀತುಪಡಿಸುವಲ್ಲಿ ಸಂಪೂರ್ಣ ಸಫಲರಾಗಿದ್ದಾರೆ.
ಈ ಚುನಾವಣೆಯ ಮತ್ತೂಂದು ವಿಶೇಷ. ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಿಶೋರ್ ಉಪಾದ್ಯಾಯ್ ಹಾಗೂ
ಬಿಜೆಪಿ ರಾಜ್ಯಾಧ್ಯಕ್ಷ ಅಜಯ್ ಭಟ್ ಪರಾಭವಗೊಂಡಿದ್ದಾರೆ. ಸಿಎಂ ಯಾರು?: ಉತ್ತರಾಖಂಡದ ಸಿಎಂ ಹುದ್ದೆ ಅಲಂಕರಿಸಲು ಬಿಜೆಪಿಯಲ್ಲಿ ಹಿರಿಯ ನಾಯಕರ ದಂಡೇ ಸಿದ್ಧವಾಗಿ ನಿಂತಿದೆ. ಅದರಲ್ಲೂ ಮಾಜಿ ಮುಖ್ಯಮಂತ್ರಿಗಳಾಗಿರುವ ಬಿಸಿ ಖಂಡೂರಿ, ವಿಜಯ್ ಬಹುಗುಣ, ಭಗತ್ ಸಿಂಗ್ ಕೋಶಿಯಾರಿ, ರಮೇಶ್ ಪೋಕ್ರಿಯಾಲ್ ಈ ರೇಸ್‌ನಲ್ಲಿರುವ ಪ್ರಮುಖರು.
Related Articles
ಸಿಎಂ ಹರೀಶ್ ರಾವತ್ ತಾವು ಸ್ಪಧಿಸಿದ್ದ ಎರಡೂ ಕ್ಷೇತ್ರಗಳಲ್ಲೂ ಸೋಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಅಲ್ಲದೆ ಸೋಲು ಖಚಿತವಾಗುತ್ತಿದ್ದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸಿಎಂ ರಾವತ್ ಸ್ಪರ್ಧಿಸಿದ್ದ ಹರಿದ್ವಾರ ಗ್ರಾಮಾಂತರ ಹಾಗೂ ಕಿಚ್ಚಾ ಕ್ಷೇತ್ರಗಳೆರಡರಲ್ಲೂ ಸೋಲನುಭವಿಸಿದ್ದಾರೆ.
Advertisement