ಕೇಂದ್ರ ಹಾಗೂ ರಾಜ್ಯ ಜಿಎಸ್‌ಟಿಯಡಿ ನಿಗದಿಪಡಿಸಿದ ಪ್ರಮಾಣದಷ್ಟು ತೆರಿಗೆಯನ್ನಷ್ಟೇ ಸಂಗ್ರಹಿಸಬೇಕು. ಒಂದೊಮ್ಮೆ ಹೋಟೆಲ್ ಮಾಲೀಕರು ಹೆಚ್ಚುವರಿ 40 ಪೈಸೆಯನ್ನು ರಸೀದಿಯಲ್ಲಿ ನಮೂದಿಸಿದರೆ ಅದಕ್ಕೂ ತೆರಿಗೆ ಪಾವತಿಸಬೇಕಾಗುತ್ತದೆ. ರಸೀದಿಯಲ್ಲಿ ದಾಖಲಿಸದೆ ಹೆಚ್ಚುವರಿ ಹಣ ಸಂಗ್ರಹಿಸಲು ಅವಕಾಶವಿಲ್ಲ. ಗ್ರಾಹಕರು ಹಣ ನೀಡಲು ನಿರಾಕರಿಸಬಹುದು. ಹೋಟೆಲ್‌ನವರು ಪೈಸೆ ಹೊಂದಾಣಿಕೆ ಮಾಡಿಕೊಂಡರೆ ಸಮಸ್ಯೆ ಬಗೆಹರಿಯಲಿದೆ.
– ವಿಶ್ವನಾಥ್, ಖಾಸಗಿ ಕಂಪನಿ ನೌಕರ, ಬೆಂಗಳೂರು
Advertisement
ಜಿಎಸ್‌ಟಿಯಡಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿ ತೆರಿಗೆ ಕಡಿತ ಮಾಡಿಕೊಂಡಿದ್ದರೆ ಯಾರ ಗಮನಕ್ಕೆ ತರಬೇಕು?ಯಾವುದೇ ವಸ್ತುವಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿ ತೆರಿಗೆ ಸಂಗ್ರಹಿಸಿದ್ದರೆ ವಿಭಾಗ ಮಟ್ಟದ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರ ಕಚೇರಿದಂತೆ ಸಮೀಪದ ಇಲಾಖೆ ಕಚೇರಿಗಳಿಗೆ ದೂರು ನೀಡಬಹುದು. ಅಲ್ಲಿನ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಈ ಹಿಂದೆ ಗ್ರಾಹಕರು ವ್ಯಾಟ್‌ಗೆ ಸಂಬಂಧಪಟ್ಟಂತೆ “ಇ-ಗ್ರಾಹಕ’ ಅಡಿಯಲ್ಲಿ ಆನ್‌ಲೈನ್‌ನಲ್ಲಿ ದೂರು ಸಲ್ಲಿಸಲು ಅವಕಾಶವಿತ್ತು. ಅದನ್ನು ಸದ್ಯದಲ್ಲೇ ಜಿಎಸ್‌ಟಿಗೆ ಸಂಬಂಧಪಟ್ಟ ದೂರು ಸ್ವೀಕಾರಕ್ಕೆ ಅಭಿವೃದ್ಧಿಪಡಿಸಲಾಗುವುದು.
– ಭಾರತಿ, ಗೃಹಿಣಿ, ಮೈಸೂರು
ವಾಣಿಜ್ಯ ತೆರಿಗೆ ಇಲಾಖೆ