Advertisement

ಅಂತಿಮ ಹಂತ ತಲುಪಿದ ಕಾರ್ಯಾಚರಣೆ:ಶೀಘ್ರವೇ 41 ಕಾರ್ಮಿಕರ ರಕ್ಷಣೆ,41 ಆಂಬುಲೆನ್ಸ್‌ ವ್ಯವಸ್ಥೆ

02:50 PM Nov 28, 2023 | Nagendra Trasi |

ಉತ್ತರಕಾಶಿ: ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯಲ್ಲಿ ರಾಟ್‌ ಹೋಲ್‌ ಮೈನರ್ಸ್‌ ಕೊನೆಗೂ ಸುಮಾರು 60 ಮೀಟರ್‌ ನಷ್ಟು ಉದ್ದದವರೆಗೆ ರಾಶಿ ಬಿದ್ದ ಮಣ್ಣನ್ನು ಹೊರತೆಗೆಯುವ ಮೂಲಕ ಕಾರ್ಮಿಕರು ಸುರಕ್ಷಿತವಾಗಿ ಹೊರ ಬರುವ ಹಾದಿಯನ್ನು ಸುಗಮಗೊಳಿಸಿದಂತಾಗಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Divya Uruduga – Aravind KP; ‘ಅರ್ಧಂಬರ್ಧ ಲವ್ ಸ್ಟೋರಿ’ ಡಿ.1ರಂದು ರಿಲೀಸ್

ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, ಮಂಗಳವಾರ (ನ.28) ಮಧ್ಯಾಹ್ನದ ವೇಳೆಗೆ ಡ್ರಿಲ್ಲಿಂಗ್‌ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಇನ್ನು ಕಾರ್ಮಿಕರನ್ನು ಹೊರ ತೆಗೆಯುವ ಕಾರ್ಯವಷ್ಟೇ ಬಾಕಿ ಉಳಿದಿರುವುದಾಗಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾರ್ಮಿಕರನ್ನು ಆಸ್ಪತ್ರೆಗೆ ಸಾಗಿಸಲು ಸಿಲ್ಕ್ಯಾರಾ ಸುರಂಗ ಮಾರ್ಗದ ಬಳಿ 41 ಆಂಬುಲೆನ್ಸ್‌ ಸಾಲು, ಸಾಲಾಗಿ ನಿಂತಿರುವ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಆಕ್ಸಿಜನ್‌ ಸಹಿತ ಬೆಡ್‌ ವ್ಯವಸ್ಥೆ ಮಾಡಲಾಗಿದ್ದು, ಒಬ್ಬೊಬ್ಬರಿಗೆ ಪ್ರತ್ಯೇಕ ಆಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next