Advertisement
ಪದ್ಮನಾಭ ಅವರು ಕೃಷ್ಣಮೂರ್ತಿ ಭಟ್-ಸತ್ಯವತಿ ದಂಪತಿಯ ಪುತ್ರ. ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಕುಂಭಾಶಿಯ ಕೊರವಡಿ ರಸ್ತೆಯ ಲ್ಲಿರುವ ಶ್ರೀ ಹರಿಹರ ನಿಲಯವು ಮೃತ ಪದ್ಮನಾಭ ಭಟ್ಟರ ಹಿರಿಯರ ಮೂಲ ಮನೆ. ಇಲ್ಲೀಗ ಅವರ ಚಿಕ್ಕಪ್ಪನ ಕುಟುಂಬದವರು ವಾಸ್ತವ್ಯ ಇದ್ದಾರೆ.
ಪದ್ಮನಾಭರಿಗೆ ಪ್ರವಾಸ, ಚಾರಣ ಇತ್ಯಾದಿ ಆಸಕ್ತಿ. ಆಗಾಗ ಸಹೋದ್ಯೋಗಿಗಳು, ಸ್ನೇಹಿತರೊಡನೆ ಪ್ರವಾಸ ಹೋಗುತ್ತಿದ್ದರು. ಮೇ 29ರಂದು 22 ಜನರ ತಂಡದೊಂದಿಗೆ ಉತ್ತರಾಖಂಡದ ಉತ್ತರ ಕಾಶಿಯ ಬೆಟ್ಟ ಪ್ರದೇಶಕ್ಕೆ ಚಾರಣ ಹೋಗಿದ್ದರು.
Related Articles
Advertisement
ರೋದನಬೆಂಗಳೂರಿನ ಭಟ್ಟರ ನಿವಾಸದಲ್ಲಿ ರೋದನ ಮುಗಿಲು ಮುಟ್ಟಿದೆ. ಅವರ ತಾಯಿ, ಪತ್ನಿ, ಪುತ್ರ, ಪುತ್ರಿ, ಸಹೋದರಿಯರು, ಕುಟುಂಬದವರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಉತ್ತರಾಖಂಡ ಆಡಳಿತ, ಸೇನೆ ಕಾರ್ಯಾಚರಣೆ ನಡೆಸಿದೆ. ಕರ್ನಾಟಕ ಸರಕಾರವೂ ತನ್ನ ಪ್ರವಾಸಿಗರನ್ನು ವಾಪಸು ಕರೆಸಿಕೊಳ್ಳಲು ವ್ಯವಸ್ಥೆ ಮಾಡಿದೆ. 34 ಬಾರಿ ಈ ಬೆಟ್ಟ ಏರಿದವರೂ ಇದ್ದರು!
ಈ ತಂಡದಲ್ಲಿ ಬೆಂಗಳೂರಿನ ಇಬ್ಬರು ಮಹಿಳೆಯರಿದ್ದು, ಅವರು 34 ಬಾರಿ ಈ ಬೆಟ್ಟವನ್ನು ಏರಿ ಇಳಿದಿದ್ದರಂತೆ. ಅವರೂ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಶೀತ ಮಾರುತ ಒಂದು ಗಂಟೆ ತಡವಾಗಿ ಬೀಸಿದ್ದರೂ ಎಲ್ಲರೂ ಪಾರಾಗುತ್ತಿದ್ದರು. ಪದ್ಮನಾಭ ಭಟ್ ಕುಂಭಾಶಿಯ ಬಗ್ಗೆ ಮಮತೆ ಹೊಂದಿದ್ದರು. ಕುಟುಂಬ ದವರು ಪೂಜೆ ನಡೆಸುತ್ತಿದ್ದ ಕುಂಭಾಶಿಯ ಶ್ರೀ ಹರಿಹರ ದೇವಾಲಯ ಅಭಿವೃದ್ಧಿಗೂ ಸಹಕಾರ ನೀಡಿದ್ದರು. ತೆಕ್ಕಟ್ಟೆ ಬಳಿಯ ಮಾಲಾಡಿಯ ಶ್ರೀ ನಂದಿಕೇಶ್ವರ ದೈವಕ್ಕೂ ರಜತ ಮುಖವಾಡ ಇತ್ಯಾದಿ ಸಮರ್ಪಿಸಿದ್ದರು. ಮುಂದಿನ ಡಿಸೆಂಬರ್‌ನಲ್ಲಿ ಊರಿಗೆ ಬಂದು ತಮ್ಮ ತಂದೆಯ ಸ್ಮರಣಾರ್ಥ ದೊಡ್ಡ ಕಾರ್ಯಕ್ರಮ ಇತ್ಯಾದಿ ನಡೆಸುವ ಉದ್ದೇಶವಿತ್ತು.