ಉತ್ತರಾಖಂಡ್: ಇಲ್ಲಿನ ಪ್ರವಾಸೋದ್ಯಮ ಸಚಿವ ಸತ್‌ಪಾಲ್ ಮಹಾರಾಜ್ ಪತ್ನಿ ಅಮೃತಾ ರಾವತ್ ಅವರಿಗೆ ಕೋವಿಡ್ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಸಚಿವ ಮಹಾರಾಜ್ ಸೇರಿದಂತೆ ಇವರೊಂದಿಗೆ ಸಂಪರ್ಕದಲ್ಲಿದ್ದ 40 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಕೆಲವು ದಿನಗಳ ಹಿಂದೆ ಅಮೃತಾ ರಾವತ್ ಅವರಿಗೆ ಜ್ವರ ಕಾಣಿಸಿಕೊಂಡಿದ್ದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಶನಿವಾರದಂದು ಸೋಂಕು ಇರುವುದಾಗಿ ವರದಿ ಬಂದಿದೆ.
ಮಹಾರಾಜ್ ಲಾಕ್‌ಡೌನ್ ನಡುವೆಯೂ ದೆಹಲಿಗೆ ತೆರಳಿದ್ದರು. ಈ ಕಾರಣಕ್ಕಾಗಿ ವಾರದ ಹಿಂದೆಯೇ ಡೆಹ್ರಾಡೂನ್ ಜಿಲ್ಲಾ ಆಡಳಿತ ಇವರನ್ನು ಖಾಸಗಿ ನಿವಾಸದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಇದರ ನಡುವೆ ಆತಂಕಕಾರಿ ವಿಷಯವೆಂದರೆ ಶುಕ್ರವಾರ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಚಿವ ಸತ್‌ಪಾಲ್ ಮಹಾರಾಜ್ ಭಾಗವಹಿಸಿದ್ದರು.
ಉತ್ತರಖಂಡ್‌ನಲ್ಲಿ ಇಲ್ಲಿಯವರೆಗೆ 5 ಜನ ಕೋವಿಡ್‌ನಿಂದಾಗಿ ಸಾವನ್ನಾಪ್ಪಿದ್ದಾರೆ.