Advertisement

ಇವಿಎಂ ಮುಟ್ಟುಗೋಲು ಹಾಕಿ: ಹೈಕೋರ್ಟ್‌ ಆದೇಶ

01:55 AM Apr 28, 2017 | Team Udayavani |

ನೈನಿತಾಲ್‌: ಉತ್ತರಾಖಂಡ ವಿಧಾನಸಭೆ ಚುನಾವಣೆ ವೇಳೆ ವಿಕಾಸನಗರ ಕ್ಷೇತ್ರದ ವಿದ್ಯುನ್ಮಾನ ಮತಯಂತ್ರಗಳನ್ನು ತಿರುಚಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಚುನಾವಣಾ ಆಯೋಗ,ರಾಜ್ಯ ಸರಕಾರಕ್ಕೆ ಉತ್ತರಾಖಂಡ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ಅಷ್ಟೇ ಅಲ್ಲ, ಇವಿಎಂ ಯಂತ್ರಗಳನ್ನು ಮುಟ್ಟುಗೋಲು ಹಾಕಿ, ಬೀಗಮುದ್ರೆ ಜಡಿಯಿರಿ ಎಂದು ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ಗೆ ಸೂಚಿಸಿದೆ.

Advertisement

ಪಂಚರಾಜ್ಯ ಚುನಾವಣೆಯಲ್ಲಿ ಇವಿಎಂ ತಿರುಚಿರುವ ಶಂಕೆಗಳು ವ್ಯಕ್ತವಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ವಿಶೇಷ. ಫೆಬ್ರವರಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಮುನ್ನಾ ಸಿಂಗ್‌ ಚೌಹಾಣ್‌ ಅವರು ಕಾಂಗ್ರೆಸ್‌ನ ನವಪ್ರಭಾತ್‌ರನ್ನು 6,418 ಮತಗಳಿಂದ ಸೋಲಿಸಿದ್ದರು. ಚುನಾವಣೆ ವೇಳೆ ಇವಿಎಂಗಳನ್ನು ತಿರುಚಲಾಗಿದೆ. ಅನೇಕ ನಕಲಿ ಹೆಸರುಗಳು ಮತದಾರರ ಪಟ್ಟಿಯಲ್ಲಿ ಪ್ರತ್ಯಕ್ಷ ವಾಗಿವೆ ಎಂದು ಆರೋಪಿಸಿ ನವಪ್ರಭಾತ್‌ ಹೈಕೋರ್ಟ್‌ ಮೆಟ್ಟಿಲೇರಿ ದ್ದರು. ಗುರುವಾರ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌, ಚುನಾವಣಾ ಆಯೋಗ, ಅದರ ರಾಜ್ಯ ಘಟಕ, ರಾಜ್ಯ ಮುಖ್ಯ ಕಾರ್ಯದರ್ಶಿ, ವಿಕಾಸನಗರ ಚುನಾವಣಾ ಅಧಿಕಾರಿ, ಚೌಹಾಣ್‌ಗೆ ನೋಟಿಸ್‌ ಜಾರಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next