Advertisement

ಚಮೋಲಿ ದುರಂತ: 32 ಮೃತದೇಹ ಪತ್ತೆ, 197 ಮಂದಿ ನಾಪತ್ತೆ, ಮುಂದುವರಿದ ಶೋಧ ಕಾರ್ಯ

09:42 AM Feb 10, 2021 | Team Udayavani |

ನವದೆಹಲಿ: ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ದುರಂತದಲ್ಲಿ ಮೃತರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಹಿಮನದಿ ಸ್ಫೋಟದಿಂದ ಉಂಟಾದ ಪ್ರವಾಹದಿಂದ 197 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು ಸ್ಥಳದಲ್ಲಿ ಶೋಧ ಕಾರ್ಯ ಮುಂದುವರೆದಿದೆ.

Advertisement

ಅಲಕಾನಂದ ಮತ್ತು ದೌಲಿಗಂಗದಲ್ಲಿ ನಡೆದ ಈ  ದುರಂತದಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈಗಾಗಲೇ ತಫೋವನ್ ಹೈಡ್ರೋಪವರ್ ಯೋಜನೆ ಮತ್ತು ರಿಷಿಗಂಗಾದ ಹೈಡೆಲ್ ಪ್ರೋಜೆಕ್ಟ್ ಗೆ ಭಾರೀ ಹಾನಿಯಾಗಿದ್ದು, ಪ್ರವಾಹದ ಕಾರಣದಿಂದ ಹಲವಾರು ಮನೆಗಳು ಕೂಡ  ಕೊಚ್ಚಿಹೋಗಿದೆ ಎಂದು ವರದಿಯಾಗಿದೆ.

ಸುಮಾರು 600 ಮಂದಿ ಭಾರತೀಯ ಸೇನಾ ಯೋಧರು, ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ), ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ತಂಡಗಳು ಚಮೋಲಿ ಜಿಲ್ಲೆಯಲ್ಲಿ ಕಾರ್ಯಾಚರಣೆ ಮುಮದುವರೆಸಿದೆ,

ಇದನ್ನೂ ಓದಿ:   ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ ಏರಿಕೆ: ಗ್ರಾಹಕರು ಕಂಗಾಲು

ರೈನಿ ಗ್ರಾಮದಲ್ಲಿ ಕುಸಿದು ಬಿದ್ದ ಕಟ್ಟಡಗಳ ಅವಶೇಷಗಳ ಅಡಿಯಲ್ಲಿದ್ದ ಐವರ ಮೃತದೇಹಗಳನ್ನು ಹೊರಗೆಳೆಯಲಾಗಿದೆ. ತಪೋವನ ವಿದ್ಯುತ್ ಯೋಜನೆಯ ಸ್ಥಳದಲ್ಲಿ 30ಕ್ಕೂ ಹೆಚ್ಚು ಕಾರ್ಮಿಕರು ಟನೆಲ್​ನೊಳಗೆ ಸಿಲುಕಿಕೊಂಡಿದ್ದು, 2 ದಿನಗಳಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

Advertisement

ಪ್ರವಾಹದಿಂದ ಸಂಪರ್ಕ ಕಡಿದುಕೊಮಡ 123 ಗ್ರಾಮಗಳಿಗೆ ಹೆಲಿಕಾಫ್ಟರ್ ಮೂಲಕ 100 ಕ್ಕೂ ಅಧಿಕ ಪಡಿತರ ಕಿಟ್ ವಿತರಿಸಲಾಗಿದೆ. ಉತ್ತರಖಾಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಹಾನಿಗೆ ಒಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.

ಚಮೋಲಿಯಲ್ಲಿ ಸಂಭವಿಸಿದ ದುರಂತಕ್ಕೆ 1965ರಲ್ಲಿ ಪತ್ತೆಯಾಗಿದ್ದ ವಿಕಿರಣಶೀಲ ಸಾಧನವೇ ಕಾರಣವಾಗಿರಬಹುದು ಎಂದು ರೈನಿ ಗ್ರಾಮಸ್ಥರು ಈಗ ಸಂಶಯ ವ್ಯಕ್ತಪಡಿಸತೊಡಗಿದ್ದಾರೆ.

ಇದನ್ನೂ ಓದಿ:  ಅಧಿಕಾರಿಗೆ ಮಸಿ ಬಳಿಯಲು ಘೋಷಿಸಿದ್ದ 1 ಲಕ್ಷ ರೂ. ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ: ಪ್ರತಿಭಾ

Advertisement

Udayavani is now on Telegram. Click here to join our channel and stay updated with the latest news.

Next