ಉತ್ತರಾಖಂಡ್: ಸಾರ್ವಜನಿಕ ರಸ್ತೆ, ಸ್ಥಳಗಳಲ್ಲಿ ಬೈಕ್ ಸವಾರರ ಸ್ಟಂಟ್ ಗಳು ಸಾರ್ವಜನಿಕರು ಹಾಗೂ ವಾಹನ ಚಲಾಯಿಸುವವರಿಗೂ ಅಪಾಯಕಾರಿ. ಆದರೂ ಹಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್ ಪಡೆಯುವ ನಿಟ್ಟಿನಲ್ಲಿ ಅಪಾಯಕಾರಿ ಸ್ಟಂಟ್ ಮಾಡಲು ಹೋಗಿ ಸಮಸ್ಯೆಗೆ ಸಿಲುಕುವ ಪ್ರಸಂಗಗಳೇ ಹೆಚ್ಚು.
ಇದನ್ನೂ ಓದಿ:ಆ ದಿನಗಳು.. ಹೃದಯಾಘಾತವಾದ ಕರಾಳ ದಿನಗಳ ಬಗ್ಗೆ ಮೌನ ಮುರಿದ ನಟ ಸುನಿಲ್ ಗ್ರೋವರ್
ಉತ್ತರಾಖಂಡ್ ಡೆಹ್ರಾಡೂನ್ ನ ವ್ಲಾಗರ್ ತನ್ನ ಯೂಟ್ಯೂಬ್ ಚಾನೆಲ್ ನ Likes ಮತ್ತು subscribersಗಳನ್ನು ಹೆಚ್ಚಳ ಮಾಡಿಕೊಳ್ಳುವ ನಿಟ್ಟಿನಲ್ಲಿ ಬೈಕ್ ನಲ್ಲಿ ಮಿತಿಮೀರಿದ ವೇಗದಿಂದ ಚಲಾಯಿಸಿ ಅಪಾಯಕಾರಿ ಸ್ಟಂಟ್ ಮಾಡಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದ. ಈ ವಿಡಿಯೋ ಬಗ್ಗೆ ತುಂಬಾ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಡೆಹ್ರಾಡೂನ್ ಪೊಲೀಸರು ಯುವಕನ ಬೈಕ್ ಅನ್ನು ವಶಪಡಿಸಿಕೊಂಡು, ದೂರು ದಾಖಲಿಸಿರುವುದಾಗಿ ವರದಿ ತಿಳಿಸಿದೆ.
ಸ್ಟಂಟ್ ಮಾಡಿ ವಿಡಿಯೋ ಪೋಸ್ಟ್ ಮಾಡಿರುವ ಯುವಕನನ್ನು ಪತ್ತೆ ಹಚ್ಚಿ, ಆತನ ಬೈಕ್ ಅನ್ನು ವಶಪಡಿಸಿಕೊಂಡಿದ್ದು, ಆತ ಠಾಣೆಯಲ್ಲಿ ಕ್ಷಮೆಯಾಚಿಸಿರುವ ಕಿರು ವಿಡಿಯೋವನ್ನು ಉತ್ತರಾಖಂಡ್ ಪೊಲೀಸರು ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ.
ಜನನಿಬಿಢ ರಸ್ತೆಯಲ್ಲಿ ಅತಿಯಾದ ವೇಗದಿಂದ ಬೈಕ್ ಚಲಾಯಿಸಿದ ಯೂಟ್ಯೂಬರ್ ಗೆ ಉತ್ತರಾಖಂಡ್ ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದು, ಈ ಕೃತ್ಯಕ್ಕಾಗಿ ಕ್ಷಮೆಯಾಚಿಸಿರುವ ಯುವಕ, ಸಾರ್ವಜನಿಕರು ಟ್ರಾಫಿಕ್ ನಿಯಮವನ್ನು ಪಾಲಿಸುವಂತೆ ಮನವಿ ಮಾಡಿಕೊಂಡಿದ್ದಾನೆ.
ಉತ್ತರಾಖಂಡ್ ಪೊಲೀಸರು ಟ್ವೀಟ್ ಮಾಡಿರುವ ವಿಡಿಯೋದಲ್ಲಿ, ವ್ಲಾಗರ್ ಕೈಮುಗಿದು ಕ್ಷಮೆಯಾಚಿಸಿರುವ ದೃಶ್ಯ ಸೆರೆಯಾಗಿದೆ. ಜೊತೆಗೆ ಸಾರ್ವಜನಿಕರು ಸಂಚಾರ ನಿಮಯವನ್ನು ಪಾಲಿಸುವಂತೆ ತಿಳಿಸಿದ್ದು, ಇಂತಹ ಅಪಾಯಕಾರಿ ಸ್ಟಂಟ್ ಮಾಡದಂತೆ ಯುವಕ ಮನವಿಮಾಡಿಕೊಂಡಿರುವುದು ವಿಡಿಯೋದಲ್ಲಿದೆ.