Advertisement

ಮದುವೆ ದಿಬ್ಬಣದಲ್ಲಿ ಪಿಪಿಇ ಕಿಟ್ ಧರಿಸಿ ಸಖತ್ ಡ್ಯಾನ್ಸ್ ಮಾಡಿದ ಆಂಬುಲೆನ್ಸ್ ಚಾಲಕ

01:15 PM Apr 27, 2021 | Team Udayavani |

ಉತ್ತರಖಂಡ : ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಸಿಬ್ಬಂದಿಯಂತೂ ತಮ್ಮ ಜೀವವನ್ನು ಪಣಕ್ಕೆ ಇಟ್ಟು ಕೆಲಸ ಮಾಡುತ್ತಿದ್ದಾರೆ. ಇನ್ನು ಆಂಬುಲೆನ್ಸ್ ಡ್ರೈವರ್ ಗಳು ಕೂಡ ರೋಗಿಗಳನ್ನು ಆಸ್ಪತ್ರೆಗಳಿಗೆ ಸಾಗಿಸುತ್ತಿದ್ದು ತುಂಬಾ ದೊಡ್ಡ ಕೆಲಸವನ್ನು ಮಾಡುತ್ತಿದ್ದಾರೆ.

Advertisement

ತಮ್ಮ ಕೆಲಸದ ಮಧ್ಯೆಯೂ ಕೆಲವು ವೈದ್ಯಕೀಯ ಸಿಬ್ಬಂದಿ ಹಾಗೂ ಆಂಬುಲೆನ್ಸ್ ಡ್ರೈವರ್ ಗಳು ಜನರಿಗೆ ಚೈತನ್ಯ ತುಂಬುವಂತಹ ಕೆಲಸ ಮಾಡಿ ಮನರಂಜನೆ ನೀಡುತ್ತಿದ್ದಾರೆ. ಇಂತಹದ್ದೇ ಒಂದು ಘಟನೆ ಉತ್ತರಖಂಡ ರಾಜ್ಯದ ಹಲ್ದ್ವಾನಿಯಲ್ಲಿ ನಡೆದಿದೆ. ಪಿಪಿಇ ಕಿಟ್ ಧರಿಸಿರುವ ಆಂಬುಲೆನ್ಸ್ ಡ್ರೈವರ್ ಒಬ್ಬ ಮದುವೆ ಮೆರವಣಿಗೆಯಲ್ಲಿ ಸಖತ್ ಸ್ಟೆಪ್ ಹಾಕಿ ಗಮನ ಸೆಳೆದಿದ್ದಾನೆ.

ಹಲ್ದ್ವಾನಿಯ ತಿವಾರಿ ಮೆಡಿಕಲ್ ಕಾಲೇಜಿನ ಮುಂಭಾಗ ಮದುವೆ ಮೆರವಣಿಗೆ ಹೋರಟಿದ್ದು, ಆ ವೇಳೆ ಆಂಬುಲೆನ್ಸ್ ನಿಂದ ಕೆಳಗಿಳಿದ ಚಾಲಕ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಆಂಬುಲೆನ್ಸ್ ನಲ್ಲಿ ಯಾವುದೇ ರೋಗಿ ಇರಲಿಲ್ಲ ಎಂದು ವರದಿಯಾಗಿದೆ.

ಈ ಮದುವೆಯ ಮೆರವಣಿಗೆಯಲ್ಲಿ ಎಲ್ಲಾ ಕೋವಿಡ್ ನಿಯಮಗಳನ್ನು ಪಾಲನೆ ಮಾಡಲಾಗಿತ್ತು. ಅಲ್ಲದೆ ಕಡಿಮೆ ಮಂದಿ ಸಮಾರಂಭದಲ್ಲಿ ಭಾಗಿಯಾಗಿದ್ದು, ಈ ವೇಳೆ ಆಂಬುಲೆನ್ಸ್ ಚಾಲಕ ಡ್ಯಾನ್ಸ್ ಮಾಡಿರುವುದು ಗಮನ ಸೆಳೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next