Advertisement
“ ಬಂಧಿತರು ‘ಸೇವಾದಾರರು’ (ಸತ್ಸಂಗ ಸ್ವಯಂಸೇವಕರು) ಎಂದು ಪೊಲೀಸರು ತಿಳಿಸಿದ್ದಾರೆ. ಕಾಲ್ತುಳಿತ ಸಂಭವಿಸಿದಾಗ ಈಗ ಬಂಧಿಸಿರುವ ಆರು ಸೇವಕರು ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದರು. ಶೀಘ್ರದಲ್ಲೇ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಲಿದೆ. ಪಿತೂರಿಯಿಂದ ಈ ಘಟನೆ ಸಂಭವಿಸಿದ್ದರೆ ನಾವು ತನಿಖೆ ನಡೆಸುತ್ತೇವೆ ಎಂದು ಐಜಿ (ಅಲಿಗಢ ರೇಂಜ್) ಶಲಭ್ ಮಾಥುರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಐಜಿ ಮಾಥುರ್ ಪ್ರಕಾರ, ಎಫ್‌ಐಆರ್‌ನಲ್ಲಿ ಭೋಲೆ ಬಾಬಾ ಅವರ ಹೆಸರನ್ನು ಉಲ್ಲೇಖಿಸಲಾಗಿಲ್ಲ ಏಕೆಂದರೆ ಅವರ ಹೆಸರಿನಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಅನುಮತಿ ಕೇಳಿಲ್ಲ. “ಆದಾಗ್ಯೂ, ಅಗತ್ಯವಿದ್ದಲ್ಲಿ ಭೋಲೆ ಬಾಬಾ ಹಿನ್ನೆಲೆಯ ಅರಿತು ವಿಚಾರಣೆಗೆ ಒಳಪಡಿಸಲಾಗುತ್ತದೆ, ಆದರೆ ಇದು ಎಲ್ಲಾ ತನಿಖೆಯ ಹಾದಿಯ ಅವಲಂಬಿಸಿರುತ್ತದೆ. ನಾವು ಅವರ ಅಪರಾಧದ ಹಿಂದಿನ ವರದಿಗಳನ್ನುಕೂಡ ತನಿಖೆ ಮಾಡುತ್ತಿದ್ದೇವೆ” ಎಂದು ಪೊಲೀಸರು ಹೇಳಿದ್ದಾರೆ.