Advertisement

Uttara Karnataka; ನದಿಗಳ ಅಬ್ಬರಕ್ಕೆ ಉತ್ತರದಲ್ಲಿ “ನೆರೆ’ ಹೊರೆ

12:25 AM Jul 26, 2024 | Team Udayavani |

ಹುಬ್ಬಳ್ಳಿ: ಮಹಾ ಮಳೆಗೆ ಕೃಷ್ಣಾ, ವೇದಗಂಗಾ, ದೂಧಗಂಗಾ, ಹಿರಣ್ಯಕೇಶಿ, ಭೀಮಾ, ಮಲೆನಾಡು ಮುಸಲಧಾರೆಗೆ ತುಂಗಭದ್ರಾ, ವರದಾ ನದಿಗಳ ಅಬ್ಬರಕ್ಕೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.

Advertisement

ಹಲವು ಸೇತುವೆಗಳು ಮುಳುಗಡೆ ಯಾಗಿ ಸಂಪರ್ಕ ಕಡಿತಗೊಂಡಿದೆ. ತೀರ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಬೋಟ್‌ಗಳ ಮೂಲಕ ಕರೆತರಲಾಗುತ್ತಿದೆ. 48 ಸೇತುವೆಗಳು ಮುಳುಗಡೆಯಾಗಿ ಹಲವೆಡೆ ಸಂಪರ್ಕ ಕಡಿತಗೊಂಡಿದೆ.

ಕೃಷ್ಣಾ ನದಿಗೆ 1,97,350 ಕ್ಯುಸೆಕ್‌, ದೂಧಗಂಗಾ ನದಿಗೆ 36,600 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು ಬೆಳಗಾವಿ ಜಿಲ್ಲೆಯಲ್ಲಿ 22, ಬಾಗಲಕೋಟೆ ಜಿಲ್ಲೆಯಲ್ಲಿ 21, ಯಾದಗಿರಿ, ಕಂಪ್ಲಿಯಲ್ಲಿ ತಲಾ 1, ಮಲೆನಾಡಿನಲ್ಲಿ ಮೂರು ಸೇರಿ 48 ಸೇತುವೆಗಳು ಮುಳುಗಡೆಯಾಗಿವೆ. ಬೆಳಗಾವಿ ಜಿಲ್ಲೆ ಮಂಗಾವತಿ ಗ್ರಾಮದ ಜನರನ್ನು ದೋಣಿಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next