ಶಿರಸಿ: ದೇಶದ ಮೊದಲ “ಭಾರತ್ ವೈಫೈ 7′ ಸೇವೆಗೆ ಉತ್ತರಕನ್ನಡ ಜಿಲ್ಲೆಯ ಯಾಣದಲ್ಲಿ ಸಂಸದ ಅನಂತಕುಮಾರ ಹೆಗಡೆ ಶುಕ್ರವಾರ ಚಾಲನೆ ನೀಡಿದರು.
ಭಾರತ್ ಸಂಚಾರ ನಿಗಮ ಹಾಗೂ ಅರಣ್ಯ ಇಲಾಖೆಗಳ ಸಹಕಾರದಲ್ಲಿ ಜಪಾನ್ ತಂತ್ರಜ್ಞಾನ ಹೊಂದಿರುವ ಈ ಸೇವೆಯಡಿ ನೆಟ್‌ವರ್ಕ್ ಇಲ್ಲದ ಸ್ಥಳದಲ್ಲೂ ನೇರವಾಗಿ ಮಾತನಾಡುವ, ವೈಫೈ ಕಾಲಿಂಗ್ ಮಾಡುವ ಜತೆಗೆ ಹಣ ವರ್ಗಾವಣೆ ಕೂಡ ಮಾಡಬಹುದಾಗಿದೆ.
ಈ ವೇಳೆ ಅನಂತಕುಮಾರ್ ಹೆಗಡೆ ಮಾತನಾಡಿ, ಭಾರತ್ ವೈಫೈ ಎಂದರೆ ವೈಫೈ 7 ತಂತ್ರಜ್ಞಾನ ಆಗಿದೆ. ಒಂದೆರಡು ಕಿ.ಮೀ.ವರೆಗೂ ವೈಫೈ ಮಾಡಬಹುದು.
ಭಾರತ್ ಏರ್‌ಫೈ ಸಂಸ್ಥೆ ಹಾಗೂ ಬಿಎಸ್‌ಎನ್‌ಎಲ್ ಶೇ.50ರ ಸಹಭಾಗಿತ್ವ ಇದೆ. ಯಾವುದೇ ಹಳ್ಳಿಯನ್ನು ವೈಫೈ ವಿಲೇಜ್ ಮಾಡುವ ಮೂಲಕ ಕೈಗಾರಿಕೆ, ವೃತ್ತಿಪರತೆಗೆ ತೊಡಗಿಕೊಳ್ಳಬಹುದು. ಶಿರಸಿ ನಗರದಲ್ಲೂ ಶೀಘ್ರ ಇದನ್ನು ಉದ್ಘಾಟಿಸಲಾಗುತ್ತದೆ ಎಂದರು.