Advertisement

Uttara Kannada: ಸರಕಾರಿ ಆಸ್ತಿ ರಕ್ಷಣೆಯಲ್ಲಿ ಉತ್ತರ ಕನ್ನಡ ಪ್ರಥಮ

11:03 PM Jun 27, 2024 | Team Udayavani |

ಕಾರವಾರ: ಜಿಯೋ ಫೆನ್ಸಿಂಗ್‌ ಮಾಡಿ ಸರಕಾರಿ ಭೂಮಿಯನ್ನು ರಕ್ಷಿಸುವ ಪ್ರಕ್ರಿಯೆಯಲ್ಲಿ ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಉಡುಪಿ ಎರಡನೇ ಹಾಗೂ ತುಮಕೂರು ಮೂರನೇ ಸ್ಥಾನದಲ್ಲಿದೆ. ಬೆಂಗಳೂರು ಹಾಗೂ ಸುತ್ತಲಿನ ಜಿಲ್ಲೆಗಳು ಕೊನೆಯ ಸ್ಥಾನದಲ್ಲಿವೆ.

Advertisement

ರಾಜ್ಯಾದ್ಯಂತ ಇರುವ ಸರಕಾರಿ ಜಮೀನುಗಳನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿರುವ ಸಮಸ್ಯೆ ಒಂದೆಡೆ ಇದ್ದರೆ, ಇನ್ನೊಂದೆಡೆ ಸರಕಾರಿ ಜಮೀನು ಒತ್ತುವರಿ ತೆರವುಗೊಳಿಸಲು ನಡೆಸಬೇಕಾದ ಹಲವು ವರ್ಷಗಳ ಕಾನೂನು ಹೋರಾಟಗಳು ಮುಂದುವರಿದಿವೆ. ಒತ್ತುವರಿಯ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ, ಸರಕಾರಿ ಆಸ್ತಿಗಳನ್ನು ವೈಜ್ಞಾನಿಕವಾಗಿ ಗುರುತಿಸಿ, ಖಾಸಗಿಯವರ ಪಾಲಾಗದಂತೆ ರಕ್ಷಿಸಿ, ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಜಾರಿಗೆ ತಂದಿರುವ ಲ್ಯಾಂಡ್‌ ಬೀಟ್‌ ಆ್ಯಪ್‌ ಬಳಸಿಕೊಂಡು ವಿವಿಧ ಜಮೀನುಗಳಲ್ಲಿರುವ ಸರರ್ಕಾ ಭೂಮಿಯನ್ನು ಜಿಯೋ ಫೆನ್ಸಿಂಗ್‌ ಮಾಡಿದೆ.

ಸರಕಾರದ ಆಸ್ತಿ ಯಾವುದು?:

ಲ್ಯಾಂಡ್‌ ಬೀಟ್‌ ಆ್ಯಪ್‌ನಲ್ಲಿ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಜಮೀನುಗಳಾದ ಗೋಮಾಳ, ಹುಲ್ಲು ಬನ್ನಿ ಖರಾಬು, ಸರಕಾರಿ ಫಡಾ, ಸರಕಾರಿ ಖರಾಬು, ಸರಕಾರಿ ಬೀಳು, ದನಗಳಿಗೆ ಮುಫತ್ತು, ಸರಕಾರಿ ದಾರಿ, ಗುಂಡು ತೋಪು ಇತ್ಯಾದಿ ಹಾಗೂ ಸರಕಾರಿ ಕೆರೆ ಮತ್ತು ಸರಕಾರಿ ಶ್ಮಶಾನಗಳನ್ನು ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳು ಲ್ಯಾಂಡ್‌ ಬೀಟ್‌ ತಂತ್ರಾಂಶದಲ್ಲಿ ಕಡ್ಡಾಯವಾಗಿ ಕ್ಷೇತ್ರ ಪರಿಶೀಲನೆ ಮಾಡಿದ್ದಾರೆ. ಸರಕಾರಿ ಜಮೀನುಗಳ ಪೈಕಿ ಅರಣ್ಯ ಜಮೀನುಗಳು, ಇತರ ಯೋಜನೆಗಳಿಗೆ ಸ್ವಾಧೀನಪಡಿಸಿಕೊಂಡ ಜಮೀನುಗಳು (ಭೂಸ್ವಾಧೀನ), ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಇಲಾಖೆಗಳ ಜಮೀನುಗಳನ್ನು ಒಳಗೊಂಡಿದ್ದು, ಇಂತಹ ಜಮೀನುಗಳನ್ನು ಕ್ಷೇತ್ರ ಪರಿಶೀಲನೆಗಾಗಿ ಮುಂದಿನ ದಿನಗಳಲ್ಲಿ ಆಯಾ ಇಲಾಖೆಗಳಿಗೆ ಕಳುಹಿಸಲು ತಂತ್ರಾಂಶದಲ್ಲಿ ಅಗತ್ಯ ತಾಂತ್ರಿಕ ಬದಲಾವಣೆ ಮಾಡಲಾಗುತ್ತಿದೆ.

ಜಿಲ್ಲೆ /     ಸರಕಾರಿ ಆಸ್ತಿ               ಜಿಯೋ ಫೆನ್ಸಿಂಗ್‌ ಪೂರ್ಣ

Advertisement

ಉತ್ತರ ಕನ್ನಡ /   1,04,192            79,628

ಉಡುಪಿ       /       84,766            70,637

ತುಮಕೂರು /     80,599              61,058

ದಕ್ಷಿಣ ಕನ್ನಡ/  1,35,475           60,225ಕ್ಕೆ

ವಿಜಯನಗರ  / 62,740                50,733

Advertisement

Udayavani is now on Telegram. Click here to join our channel and stay updated with the latest news.

Next