Advertisement
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಭಾಗ್ಯ ಲಕ್ಷ್ಮೀ ಯೋಜನೆಗೆ 2,95,228 ಲಕ್ಷ ಮಹಿಳೆಯರು ಹೆಸರು ನೊಂದಾಯಿಸಿಕೊಂಡಿದ್ದಾರೆ. ಅ.30 ರಂದು ಯೋಜನೆ ಅನುಷ್ಟಾನವಾಗಲಿದೆ .ಜಿಲ್ಲೆಯ ಮೂರು ಲಕ್ಷ ಮಹಿಳೆಯರು ಪ್ರಯೋಜನ ಪಡೆಯಲಿದ್ದಾರೆ. ಭಾಗ್ಯ ಜ್ಯೋತಿ ಯೋಜನೆಯಲ್ಲಿ 346835 ಲಕ್ಷ ಜನ ನೊಂದಣಿ ಮಾಡಿದ್ದು ಉಚಿತ ವಿದ್ಯುತ್ ಪ್ರಯೋಜನ ಪಡೆಯುತ್ತಿದ್ದಾರೆ. ಜಿಲ್ಲೆಯ ಶೇ. 85.13ರಷ್ಟು ಜನ ಪ್ರಯೋಜನ ಪಡೆದಂತಾಗಿದೆ. ರಾಜ್ಯದ ಇತರೆ ಜಿಲ್ಲೆಗೆ ಹೋಲಿಸಿದರೆ ಉತ್ತರ ಕನ್ನಡ ಪ್ರಯೋಜನ ಪಡೆವಲ್ಲಿ 10 ನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ವಿವರಿಸಿದರು. 81065 ಭಾಗ್ಯ ಲಕ್ಷ್ಮೀ ಸುಕನ್ಯ ಸಮೃದ್ಧಿ ಬಾಂಡ್ ವಿತರಿಸಲಾಗಿದೆ. 263 ಬಾಂಡ್ ನೀಡುವುದು ಬಾಕಿ ಇದೆ ಎಂದರು.
ಜಿಲ್ಲೆಯ ಮರಳು ಸಮಸ್ಯೆಗೆ ಮುಂದಿನ ಸಭೆಯಲ್ಲಿ ಪರಿಹಾರ ಹುಡುಕಲಾಗುವುದು. ಪ್ರಸಕ್ತ ವರ್ಷ ಅಕ್ರಮ ಮರಳು ಸಾಗಟ, ದಾಸ್ತಾನು ಪ್ರಕರಣದಲ್ಲಿ 11,10,840 ರೂ. ದಂಡ ಸಂಗ್ರಹಿಸಲಾಗಿದೆ . 30,800 ಮೆಟ್ರಿಕ್ ಟನ್ ಮರಳು ವಶಪಡಿಸಿಕೊಳ್ಳಲಾಗಿದೆ ಎಂದರು.