ಲಕ್ನೋ: ಲವ್ ಜಿಹಾದ್ ತಡೆಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮಸೂದೆ ಜಾರಿಗೆ ತರಲು ಸಿದ್ಧತೆ ನಡೆಯುತ್ತಿದ್ದು, ಈ ಪ್ರಸ್ತಾಪವನ್ನು ಕಾನೂನು ಸಚಿವಾಲಯಕ್ಕೆ ಕಳುಹಿಸುವುದಾಗಿ ವರದಿ ತಿಳಿಸಿದೆ.
ಧಾರ್ಮಿಕ ನಂಬಿಕೆಯ ನೆಲಗಟ್ಟಿನ ಈ ವಿವಾಹದಲ್ಲಿ ಮತಾಂತರ ಮೂಲ ಉದ್ದೇಶವಿರುವ ಹಿನ್ನೆಲೆಯಲ್ಲಿ ಲವ್ ಜಿಹಾದ್ ತಡೆಯಲು ಶೀಘ್ರವೇ ಕಾನೂನು ಜಾರಿಗೆ ಬರಲಿದೆ ಎಂದು ಸಿಎಂ ಯೋಗಿ ಇತ್ತೀಚೆಗಷ್ಟೇ ತಿಳಿಸಿದ್ದರು. ಯೋಗಿ ಆದಿತ್ಯ ನಾಥ್ ಸರ್ಕಾರ ಇದೀಗ ಕಾನೂನು ರಚಿಸುತ್ತಿದ್ದು, ಕೂಡಲೇ ಜಾರಿಗೆ ಬರಲಿದೆ ಎಂದು ವರದಿ ವಿವರಿಸಿದೆ.
ಲವ್ ಜಿಹಾದ್ ತಡೆಗೆ ರಚಿಸುತ್ತಿರುವ ಕಾನೂನು ಪ್ರಸ್ತಾಪವನ್ನು ರಾಜ್ಯ ಗೃಹ ಇಲಾಖೆ ಗೃಹ ಸಚಿವಾಲಯಕ್ಕೆ ಕಳುಹಿಸಲಿದೆ ಎಂದು ಹೇಳಿದೆ. ಈ ಬಗ್ಗೆ ಮಸೂದೆಯ ಪ್ರಕ್ರಿಯೆ ನಡೆಯುತ್ತಿದೆ. ಇದು ಕಾನೂನು ಸಚಿವಾಲಯದಿಂದ ಅನುಮತಿ ದೊರೆಯುತ್ತಿದ್ದಂತೆಯೇ ಕಾನೂನು ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ದೆಹಲಿಯಲ್ಲಿ ಬಂಧಿಸಲ್ಪಟ್ಟ ಇಬ್ಬರು ಜೈಶ್ ಉಗ್ರರು ಐದು ದಿನ ಪೊಲೀಸ್ ಕಸ್ಟಡಿಗೆ
ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚು ನಡೆಯುತ್ತಿರುವುದಾಗಿ ಆರೋಪಿಸಿದೆ. ಮದುವೆಯಾಗಲು ಧಾರ್ಮಿಕವಾಗಿ ಮತಾಂತರ ಹೊಂದಬೇಕಾದ ಅಗತ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಯೋಗಿ ನೇತೃತ್ವದ ಸರ್ಕಾರ ಲವ್ ಜಿಹಾದ್ ತಡೆಗಾಗಿ ಕಾನೂನು ರೂಪಿಸುತ್ತಿದೆ ಎಂದು ವರದಿ ತಿಳಿಸಿದೆ.