Advertisement

ಬರೇಲಿಯಲ್ಲಿ ಮನೆಗೆ ಬೆಂಕಿ: ಸಹೋದರಿಯರಿಬ್ಬರಿಗೆ ಗಂಭೀರ ಗಾಯ

11:18 AM Aug 12, 2017 | udayavani editorial |

ಬರೇಲಿ : ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ನವಾಬ್‌ಗಂಜ್‌ ಪ್ರದೇಶದಲ್ಲಿ ಯಾರೋ ಅಪರಿಚಿತ ದುಷ್ಕರ್ಮಿಗಳು ಮನೆಗೆ ಬೆಂಕಿ ಹಚ್ಚಿದ ಪರಿಣಾಮವಾಗಿ ಮನೆಯೊಳಗೆ ಮಲಗಿಕೊಂಡಿದ್ದ ಇಬ್ಬರು ಸಹೋದರಿಯರು ತೀವ್ರ ಸುಟ್ಟಗಾಯಗಳಿಗೆ ಗುರಿಯಾದ ಘಟನೆ ನಿನ್ನೆ ಶುಕ್ರವಾರ ತಡ ರಾತ್ರಿ ಸಂಭವಿಸಿದೆ.

Advertisement

ದುಷ್ಕರ್ಮಿಗಳು ಮನೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದರು. ಬೆಂಕಿ ಮನೆಯನ್ನು ಪೂರ್ತಿಯಾಗಿ ಅವರಿಸಿಕೊಂಡಾಗ ಮನೆಯವರು ಹೊರಗೋಡಿ ಬಂದರು. ಆದರೆ ಮನೆಯೊಳಗೆ ಮಲಗಿಕೊಂಡಿದ್ದ ಸಹೋದರಿಯರಿಬ್ಬರು ಅದಾಗಲೇ ತೀವ್ರ ಸುಟ್ಟಗಾಯಗಳಿಗೆ ಗುರಿಯಾಗಿದ್ದರು. ಆವರನ್ನು ಒಡನೆಯೇ ಆಸ್ಪತ್ರೆಗೆ ದಾಖಲಿಸಲಾಯಿತು.

ಗಾಯಗೊಂಡಿರುವ 18ರ ಹರೆಯದ ಗುಲ್‌ಶನ್‌ ಸ್ಥಿತಿ ಚಿಂತಾಜನಕವಿದೆ. ಆಕೆಯ 17ರ ಹರೆಯದ ಸಹೋದರಿ ಫಿಜಾಗೆ ಶೇ.40ರಷ್ಟು ಸುಟ್ಟಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. 

ಕೇಸು ದಾಖಲಿಸಿಕೊಂಡಿರುವ ಪೊಲೀಸರು ಅಪರಿಚಿತ ದುಷ್ಕರ್ಮಿಗಳ ಶೀಘ್ರಾತಿಶೀಘ್ರ ಪತ್ತೆಗೆ ತಂಡಗಳನ್ನು ರಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next