Advertisement
ಉತ್ತರಪ್ರದೇಶದ ನೋಯ್ಡಾ ವಲಯದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ 100 ಮೀಟರ್ ಎತ್ತರದ ಸೂಪರ್‌ಟೆಕ್ ಅವಳಿ ಟವರ್‌ಗಳನ್ನು ಕೇವಲ 9 ಸೆಕೆಂಡುಗಳಲ್ಲಿ ಧ್ವಂಸಗೊಳಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ನೋಯ್ಡಾ ಪ್ರಾಧಿಕಾರ ಮಾಹಿತಿ ನೀಡಿದೆ.
Related Articles
Advertisement
ಏನೇನು ಪ್ರಕ್ರಿಯೆ?ಈ ಟವರ್‌ಗಳ ಸುತ್ತಮುತ್ತ ವಾಸಿಸುವ ಸುಮಾರು 1500 ಕುಟುಂಬಗಳನ್ನು 5 ಗಂಟೆಗಳ ಕಾಲ ಸ್ಥಳಾಂತರಿಸ ಲಾಗುತ್ತದೆ. 1 ಗಂಟೆ ಕಾಲ ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇಯನ್ನು ಮುಚ್ಚಲಾಗುತ್ತದೆ. ಭಾರೀ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಅವಳಿ ಟವರ್‌ಗಳಿಂದ 9 ಮೀ. ದೂರದಲ್ಲಿರುವ 12 ಅಂತಸ್ತಿನ ಕಟ್ಟಡವನ್ನು ರಕ್ಷಿಸಲು ಉಕ್ಕಿನ ಶಿಪ್ಪಿಂಗ್ ಕಂಟೈನರ್‌ಗಳನ್ನು ಇಡಲಾಗುತ್ತದೆ. ಪಕ್ಕದ 4 ಕಟ್ಟಡಗಳ ರಕ್ಷಣೆಗಾಗಿ ಜಿಯೋಟೆಕ್ಸ್‌ಟೈಲ್ ಫ್ಯಾಬ್ರಿಕ್‌ನ ಪರದೆ ಹಾಕಲಾಗುತ್ತದೆ. ಧ್ವಂಸಗೊಂಡಾಗ ಏಳುವ ದಟ್ಟ ಧೂಳುಮಿಶ್ರಿತ ಹೊಗೆ ಮಾಯವಾಗಲು ಸುಮಾರು 10 ನಿಮಿಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಟವರ್‌ಗಳ ಎತ್ತರ – ಮೊದಲ ಟವರ್ 103 ಮೀಟರ್, ಎರಡನೇ ಟವರ್ 97 ಮೀ.
ಒಟ್ಟು ವಿಸ್ತೀರ್ಣ – 7.5 ಲಕ್ಷ ಚದರ ಅಡಿ
ನೆಲಸಮಗೊಳಿಸಲು ಬಳಸಲಾಗುವ ಸ್ಫೋಟಕ – 2500 ಕೆಜಿ
ನೆಲಸಮಕ್ಕೆ ತಗಲುವ ಅವಧಿ – 9 ಸೆಕೆಂಡು