Advertisement

ಶಾಸಕನ ಪೆಟ್ರೋಲ್‌ ಬಂಕ್‌ ನೆಲಸಮ

09:07 PM Apr 07, 2022 | Team Udayavani |

ಬರೇಲಿ: ಉತ್ತರ ಪ್ರದೇಶದ ಭೋಜಿಪುರ ಕ್ಷೇತ್ರದ ಸಮಾಜವಾದಿ ಪಕ್ಷದ ಶಾಸಕ ಶಾಜಿಲ್‌ ಇಸ್ಲಾಂ ಅನ್ಸಾರಿ ಅವರಿಗೆ ಸೇರಿದ ಪೆಟ್ರೋಲ್‌ ಬಂಕ್‌ ಅನ್ನು ಬರೇಲಿ ಜಿಲ್ಲಾಡಳಿತ ಧ್ವಂಸಗೊಳಿಸಿದೆ.

Advertisement

ಪೆಟ್ರೋಲ್‌ ಬಂಕ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬರೇಲಿ ಜಿಲ್ಲಾಡಳಿತದಿಂದ ಅವರು ಅನುಮತಿ ಪಡೆದಿರಲಿಲ್ಲ. ಗುರುವಾರ ಪೊಲೀಸ್‌ ಬಂದೋಬಸ್ತ್ ನಲ್ಲಿ ಜಿಲ್ಲಾಡಳಿತ ಬುಲ್ಡೋಜರ್‌ ಸಮೇತ ಆಗಮಿಸಿ, ಬಂಕ್‌ ಅನ್ನು ನೆಲಸಮಗೊಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಶಾಸಕ ಶಜೀಲ್‌ ಅವರು ಸಮಾಜವಾದಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಬೆದರಿಕೆ ಒಡ್ಡುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕೇಸು ದಾಖಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next