Advertisement

ಭೂಕುಸಿತದ ತೀವ್ರತೆಗೆ ಪರ್ವತದ ಭಾಗವೇ ಕುಸಿದು ಬಿತ್ತು!

09:09 PM Sep 24, 2022 | Team Udayavani |

ನವದೆಹಲಿ: ಶುಕ್ರವಾರ ಸಂಜೆಯ ನಂತರ ಉತ್ತರಾಖಂಡದಲ್ಲಿ ಭಾರೀ ಮಳೆಯಾಗಿದ್ದು, ದೊಡ್ಡ ಪರ್ವತವೊಂದರ ಅರ್ಧ ಭಾಗ ಕುಸಿದು ಬೀಳುತ್ತಿರುವ ದೃಶ್ಯವು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

Advertisement

ಅಲ್ಲದೇ, ಇದರಿಂದಾಗಿ ಆದಿ ಕೈಲಾಸ ಮಾನಸ ಸರೋವರ ಯಾತ್ರೆಯ ಪ್ರಮುಖ ಮಾರ್ಗವೂ ಬ್ಲಾಕ್‌ ಆಗಿದೆ. ಸ್ಥಳೀಯರೂ ಸೇರಿದಂತೆ ಕನಿಷ್ಠ 40 ಯಾತ್ರಿಕರು ತವಾಘಾಟ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆ.25ರವರೆಗೂ ಉತ್ತರಾಖಂಡದಲ್ಲಿ ಭಾರೀ ಮಳೆಯಾಗಲಿದ್ದು, ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಹಲವು ಪ್ರದೇಶದಲ್ಲಿ ಭೂಕುಸಿತ ಉಂಟಾಗಿದ್ದು, 100ಕ್ಕೂ ಹೆಚ್ಚು ರಸ್ತೆಗಳು ಮತ್ತು ಹಲವು ಹೆದ್ದಾರಿಗಳ ಸಂಪರ್ಕ ಕಡಿತಗೊಂಡಿವೆ.


ರಸ್ತೆಯಲ್ಲೇ ಈಜು:
ದೆಹಲಿ, ಉತ್ತರಪ್ರದೇಶದಲ್ಲಿ ಮಳೆ ಶನಿವಾರವೂ ಮುಂದುವರಿದಿದೆ. ದೆಹಲಿಯ ಹಲವು ಕಡೆ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ನೋಯ್ಡಾ ಮತ್ತು ಗ್ರೇಟರ್‌ ನೋಯ್ಡಾದಲ್ಲಿ ಶನಿವಾರವೂ 8ನೇ ತರಗತಿವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಗುರುಗ್ರಾಮದ ಸುಭಾಷ್‌ ಚೌಕ್‌ನಲ್ಲಿ ಮಳೆಯಿಂದಾಗಿ ದೆಹಲಿ-ಎನ್‌ಸಿಆರ್‌ ಮಾರ್ಗ ಜಲಾವೃತವಾಗಿದೆ. ಇದೇ ರಸ್ತೆಯಲ್ಲಿ ಬಾಲಕನೊಬ್ಬ ಈಜುತ್ತಿರುವ ವಿಡಿಯೋ ವೈರಲ್‌ ಆಗಿದೆ.

ನೋಯ್ಡಾದಲ್ಲಿ ಹೊಸತಾಗಿ ನಿರ್ಮಿಸಲಾಗಿರುವ ರಾಜೀವ್‌ ಚೌಕ್‌ ಸಬ್‌ವೇ ಜಲಾವೃತವಾಗಿದೆ. ನವದೆಹಲಿಯಲ್ಲಿ ಮತ್ತು ಮುಂಬೈನಲ್ಲಿ ಮಳೆಯಿಂದಾಗಿ ಜನಜೀವನಕ್ಕೆ ತೊಂದರೆಯಾಗಿದೆ.

Advertisement

ಒಂದೇ ದಿನದಲ್ಲಿ 36 ಸಾವು
ಉತ್ತರಭಾರತದಲ್ಲಿ ಶುಕ್ರವಾರ ಒಂದೇ ದಿನ ಮಳೆ ಸಂಬಂಧಿ ಘಟನೆಗಳಿಗೆ ಒಟ್ಟು 36 ಮಂದಿ ಬಲಿಯಾಗಿದ್ದಾರೆ. ಈ ಪೈಕಿ 12 ಮಂದಿ ಸಿಡಿಲು ಬಡಿದು ಮೃತಪಟ್ಟರೆ, 24 ಮಂದಿ ಮನೆಗಳ ಗೋಡೆ ಕುಸಿದು ಸಾವಿಗೀಡಾಗಿದ್ದಾರೆ. ಒಟ್ಟಾರೆ 5 ದಿನಗಳಲ್ಲಿ 39 ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next