ಲಕ್ನೊ : ಎಲ್ಲಾ ಪದವಿ, ಸ್ನಾತಕೋತ್ತರ ಕಾಲೇಜು, ಖಾಸಗಿ ವಿಶ್ವವಿದ್ಯಾಲಯಗಳನ್ನು ಸೋಮವಾರ(ಫೆ.15)ದಂದು ಪುನರಾರಂಭವಾಗುತ್ತದೆ ಎಂದು ಘೋಷಿಸಿದೆ.
ಕೇಂದ್ರ ಸರ್ಕಾರದ ಕೋವಿಡ್ 19 ಮಾರ್ಗ ಸೂಚಿಗಳನ್ನು ಪಾಲಿಸುವಂತೆ ಅಧಿಕಾರಿಗಳಿಗೆ ಉತ್ತರ ಪ್ರದೇಶದ ಸರ್ಕಾರ ಆದೇಶ ನೀಡಿದೆ. ಉನ್ನತ ಶಿಕ್ಷಣ ಅಧಿಕಾರಿಗಳ ಸಂವಹನ ಪತ್ರದ ಪ್ರಕಾರ, ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಉಪನ್ಯಾಸಕರು ಮಾಸ್ಕ್ ನ್ನು ಧರಿಸಬೇಕು ಎಂದು ಹೇಳಿದೆ. ಮಾತ್ರವಲ್ಲದೇ, ತರಗತಿ ಕೋಣೆಯಲ್ಲಿ ಆರು ಅಡಿಗಳ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳನ್ನು ಕೂರಿಸಬೇಕು. ಎಲ್ಲಾ ಕಾಲೇಜು ಸಂಸ್ಥೆಗಳು ಸ್ಯಾನಿಟೈಸೇಶನ್ ಹಾಗೂ ಥರ್ಮಲ್ ಸ್ಕ್ಯಾನಿಂಗ್ ನ್ನು ಕಡ್ಡಾಯವಾಗಿ ಮಾಡಬೇಕು ಎಂದು ಹೇಳಿದೆ.
ಓದಿ : ಕುಲ್ಗಾಮ್ ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಉಗ್ರ ನಂಟು? ಲಶ್ಕರ್ ಉಗ್ರ ಜಹೂರ್ ಅಹಮದ್ ಬಂಧನ
ಕೋವಿಡ್ ಪರಿಸ್ಥಿತಿ ಸ್ವಲ್ಲ ಸಮಸ್ಥಿತಿಗೆ ಮರಳುತ್ತಿರುವಾಗ ಉತ್ತರ ಪ್ರದೇಶದ ಎಲ್ಲಾ ವಿಶ್ವವಿದ್ಯಾಲಗಳು ಹಾಗೂ ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳ ತರಗತಿಗಳು ಪುನರಾರಂಭಗೊಳ್ಳುವುದರ ಮೂಲಕ ಯಥಾಸ್ಥಿತಿಗೆ ಬರಲಿದೆ. ಎಲ್ಲಾ ಶಿಕ್ಷಣ ಸಂಸ್ಥೆಗಳು ರಾಜ್ಯದಲ್ಲಿ ನವೆಂಬರ್ 23ರಂದು ಸರ್ಕಾರದ ಎಲ್ಲಾ ಕೋವಿಡ್ ಮಾರ್ಗಸೂಚಿಗಳ ಅನ್ವಯ ಪುನರಾಂಭಗೊಂಡಿವೆ. ಉನ್ನತ ಶಿಕ್ಷಣ ಇಲಾಖೆಯ ವಿಶೇಷ ಕಾರ್ಯದರ್ಶಿ ಅಬ್ದುಲ್ ಸಮದ್ ಅವರ ಪತ್ರವನ್ನು (ಫೆ. 12 ದಿನಾಂಕ ಹೊಂದಿರುವ) ಉತ್ತರ ಪ್ರದೇಶದ ಎಲ್ಲಾ ಖಾಸಗಿ ಮತ್ತು ರಾಜ್ಯ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳಿಗೆ ಹಾಗೂ ಉನ್ನತ ಶಿಕ್ಷಣ ನಿರ್ದೇಶಕರಿಗೆ ಕಳಹಿಸಿಕೊಡಲಾಗಿದೆ.
ಇನ್ನು, ವಿದ್ಯಾರ್ಥಿಗಳು, ಶಿಕ್ಷಕರು ಅಥವಾ ಸಿಬ್ಬಂದಿಗಳು ಯಾರಿಗಾದರೂ ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ಪರೀಕ್ಷೆಗೆ ಒಳಪಡಿಸವುದು ಕಡ್ಡಾಯ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಓದಿ : ಫೆ.15ರಿಂದ ಎಲ್ಲಾ ವಾಹನಗಳಿಗೂ FASTag ಕಡ್ಡಾಯ..!