Advertisement

18 ಉಪ ಜಾತಿಗಳಿಗೆ ಉತ್ತರ ಪ್ರದೇಶದಲ್ಲಿಒಳ ಮೀಸಲಿಗೆ ಸಿದ್ಧತೆ?

06:45 PM Sep 05, 2022 | Team Udayavani |

ಲಕ್ನೋ: ಇತರೆ ಹಿಂದುಳಿದ ವರ್ಗಗಳಿಗೆ(ಒಬಿಸಿ) ಸೇರುವ 18 ಉಪ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.

Advertisement

ಇನ್ನೊಂದೆಡೆ, ಈ 18 ಉಪ ಜಾತಿಗಳು ತಮ್ಮನ್ನು ಪರಿಶಿಷ್ಟ ಪಂಗಡಗಳಿಗೆ(ಎಸ್‌ಸಿ) ಸೇರಿಸಬೇಕೆಂದು ಒತ್ತಾಯಿಸಿ ಸಲ್ಲಿಸಿರುವ ಅರ್ಜಿ ಸದ್ಯ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ.

ಉತ್ತರ ಪ್ರದೇಶದಲ್ಲಿ ಹಾಲಿ ಇರುವ ಶೇ.27 ಪ್ರತಿಶತ ಒಬಿಸಿ ಕೋಟಾದಲ್ಲಿ ಈ 18 ಉಪ ಜಾತಿಗಳಿಗೆ ಒಳಮೀಸಲಾತಿ ನೀಡಲು ಸರ್ಕಾರ ಯೋಚಿಸುತ್ತಿದೆ.

ಈ ಕುರಿತ ಮಸೂದೆ ಉತ್ತರ ಪ್ರದೇಶದ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಅಂಗೀಕರಿಸಬೇಕಾಗಿದ್ದು, ನಂತರ ಅಂತಿಮ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಅಂಗೀಕಾರಕ್ಕಾಗಿ ಕಳುಹಿಸಬೇಕು.

ಇದನ್ನೂ ಓದಿ:ಆಟೋ ಚಾಲಕನಾಗಿದ್ದಾತ…27 ವರ್ಷಗಳಲ್ಲಿ 5000ಕ್ಕೂ ಅಧಿಕ ಕಾರು ಕಳ್ಳತನ, ಐಶಾರಾಮಿ ಜೀವನ

Advertisement

ಮಜ್ವಾರ್‌, ಕಹರ್‌, ಕಶ್ಯಪ್‌, ಕೇವತ್‌, ಮಲ್ಲಾಹ್‌, ನಿಶಾದ್‌, ಪ್ರಜಾಪತಿ, ಕುಮ್ಹರ್ ,ಧೀಮರ್‌, ಬಿಂದ್‌, ಭರ್‌, ರಾಜಭರ್‌, ಧಿಮಾನ್‌, ಬಾಥಮ್‌, ತುರ್ಹಾ, ಗೋಡಿಯಾ, ಮಾಂಝಿ ಮತ್ತು ಮಚುವಾ ಉಪಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ಪ್ರಸ್ತಾಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next