Advertisement

ಉತ್ತರಪ್ರದೇಶ ಮೊದಲ ಹಂತ, ಶೇ.60ರಷ್ಟು ಮತದಾನ: ಗಗನ್ ಸೋಮ್ ಸೆರೆ

11:29 AM Feb 11, 2017 | Team Udayavani |

ಲಕ್ನೋ:ಹೈವೋಲ್ಟೇಜ್ ಮಿನಿ ಸಮರದ ಮೊದಲ ಹಂತದ ಮತದಾನ ಉತ್ತರಪ್ರದೇಶದಲ್ಲಿ ಶನಿವಾರ ಶಾಂತಿಯುತವಾಗಿ ಮತದಾನ ನಡೆಯಿತು. ಒಟ್ಟು ಶೇ.60ರಷ್ಟು ಮತದಾನವಾಗಿದೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ. ಒಟ್ಟು ಏಳು ಹಂತಗಳ ಪೈಕಿ ಇದು ಮೊದಲನೇಯದ್ದು. ಪಶ್ಚಿಮ ಉತ್ತರ ಪ್ರದೇಶದ 73 ವಿಧಾನಸಭಾ ಕ್ಷೇತ್ರಗಳಲ್ಲಿನ 839 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 

Advertisement

ಮತದಾನದ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಏತನ್ಮಧ್ಯೆ ಮೀರತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಗೀತ್ ಸೋಮ್ ಸಹೋದರ ಗಗನ್ ಸೋಮ್ ಮತಗಟ್ಟೆಯೊಳಗೆ ಪಿಸ್ತೂಲ್ ತೆಗೆದುಕೊಂಡು ಹೋದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ.

ಬಿಜೆಪಿ, ಬಿಎಸ್ಪಿ, ಕಾಂಗ್ರೆಸ್‌ ಮೈತ್ರಿ ಮತ್ತು ರಾಷ್ಟ್ರೀಯ ಲೋಕದಳ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನೋಯ್ಡಾ ಕ್ಷೇತ್ರದಿಂದ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಪುತ್ರ ಪಂಕಜ್‌ ಸಿಂಗ್‌, ಮಥುರಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮುಖಂಡ ಪ್ರದೀಪ್‌ ಮಾಥೂರ್‌, ತಾನಾಭವನ್‌ನಿಂದ ಬಿಜೆಪಿಯ ವಿವಾದಿತ ಶಾಸಕ ಸುರೇಶ್‌ ರಾಣಾ ಮುಖ್ಯವಾಗಿ ಕಣದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next