Advertisement

ಉತ್ತರ ಕನ್ನಡ: ಕಡಲತೀರಕ್ಕೆ ತೆರಳದಂತೆ ನಿಷೇಧ; ಶಾಲಾ ಕಾಲೇಜು ರಜೆ

09:31 AM Aug 07, 2019 | keerthan |

ಕಾರವಾರ: ಕರಾವಳಿ ಭಾಗದಲ್ಲಿ ತೀವ್ರ ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಕಡಲತೀರಗಳಿಗೆ ಪ್ರವಾಸಿಗರು ಹಾಗೂ ಸಾರ್ವಜನಿಕರು ತೆರಳದಂತೆ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಕೆ. ಆದೇಶಿಸಿದ್ದಾರೆ.

Advertisement

ಮುಂದಿನ 48ಗಂಟೆ ಅವಧಿಗೆ ಕಡಲತೀರ ಪ್ರವೇಶ ನಿಷೇಧ ಹೇರಲಾಗಿದೆ.

ಭಾರಿ ಮಳೆಯ ಹಿನ್ನಲೆಯಲ್ಲಿ ನಾಳೆ (ಬುಧವಾರ) ಜಿಲ್ಲಾದ್ಯಂತ ಎಲ್ಲಾ ಶಾಲೆ, ಕಾಲೇಜುಗಳು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.

ಕಳೆದೆರಡು ದಿನಗಳಿಂದ ಸತತ ಮಳೆ ಸುರಿಯುತ್ತಿದ್ದು ಕಾರವಾರ ತಾಲೂಕಿನ ಕಾಳಿ ದಂಡೆಯ ಗ್ರಾಮಗಳಾದ ಕಿನ್ನರ ,ಅಂಬೆಜೂಗ್, ಕದ್ರಾ, ಕಣಜಗೇರಿ ಗ್ರಾಮಗಳಿಗೆ ನದಿ ನೀರು ನುಗ್ಗಿದೆ. ಖಾರ್ಗೆಜೂಗ ದ್ವೀಪದ ಜನರ ಸ್ಥಳಾಂತರ ಮಾಡಲಾಗಿದೆ. ಅಲ್ಲಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.

Advertisement

ಘನ ವಾಹನಗಳ ಸಂಚಾರ ನಿಷೇಧ :
ಹುಬ್ಬಳ್ಳಿ: ಯಲ್ಲಾಪುರ, ನಿಪ್ಪಾಣಿ, ಕಿತ್ತೂರ, ಖಾನಾಪುರ, ಬಾಡ ಮಾರ್ಗದಲ್ಲಿ ಪ್ರವಾಹ ಆಗಮಿಸಿ ಸಂಚಾರಕ್ಕೆ ತಡೆಯಾದ ಹಿನ್ನೆಲೆಯಲ್ಲಿ ನಗರದ ಹೊರವಲಯದ ಪ್ರದೇಶಗಳಾದ ಗಬ್ಬೂರ ಬೈಪಾಸ್, ಗದಗ ರಸ್ತೆ ನೈಋತ್ಯ ರೈಲ್ವೆ ಜಿಎಂ ಕಚೇರಿ ಬಳಿ ಬೆಳಗಾವಿ, ಯಲ್ಲಾಪುರ, ಕಾರವಾರಕ್ಕೆ ತೆರಳುವ ಲಾರಿಗಳನ್ನು ಸಂಚಾರಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ತಡೆಹಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next