ರಬಕವಿ-ಬನಹಟ್ಟಿ: ಕೋವಿಡ್‌ನಿಂದಾಗಿ ಬಹಳಷ್ಟು ಜನ ಪ್ರಾಣ ಕಳೆದುಕೊಂಡಿದ್ದು, ಇದಲ್ಲಿ ಎಷ್ದಟೋ ಬಡ ಕುಟುಂಬಗಳು ದುಡಿಯುವ ಶಕ್ತಿಯನ್ನ ಕಳೆದುಕೊಂಡಿದ್ದಾರೆ ಅಂತವರ ಬದುಕಿಗೆ ಸ್ವಲ್ಪವಾದರೂ ನೆರವಾಗಲಿ ಎಂಬ ಉದ್ದೇಶದಿಂದ ಸರಕಾರ ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ 1 ಲಕ್ಷ ಪರಿಹಾರ ಕೊಡುತ್ತಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.
ಅವರು ಶನಿವಾರ ರಬಕವಿ-ಬನಹಟ್ಟಿ ತಹಶೀಲ್ದಾರ ಕಾರ್ಯಾಲಯದಲ್ಲಿ ಕೊವೀಡ್‌ನಿಂದ ಮೃತಪಟ್ಟ ಬಿಪಿಎಲ್ ಕಾರ್ಡದಾರಿಗೆ 1 ಲಕ್ಷ ಪರಿಹಾರಧನದ ಚೆಕ್ ವಿತರಿಸಿ ಮಾತನಾಡಿದರು. ಅತಂತ್ರವಾಗಿರುವ ಕುಟುಂಬಗಳಿಗೆ ಇದು ತಕ್ಕ ಮಟ್ಟಿಗೆ ಆಶ್ರಯವಾಗಲಿದೆ. ಅದರ ಜೊತೆ ಕೇಂದ್ರ ಸರಕಾರವೂ ಕೂಡಾ 50 ಸಾವಿರ ಕೊಡುತ್ತಿದೆ. ಅದು ಸದ್ಯದಲ್ಲಿಯೇ ಬರುತ್ತದೆ. ಕರ್ನಾಟಕ ಸರಕಾರ ಬಿಪಿಎಲ್ ಕುಟುಂಬಗಳಿಗೆ 1 ಲಕ್ಷ ಹಾಗೂ ಎಪಿಎಲ್ ಕುಟುಂಬಗಳಿಗೆ 50 ಸಾವಿರ ಕೊಡುತ್ತಿದೆ. ಒಟ್ಟು 34 ಕುಟುಂಬಗಳಲ್ಲಿ ಇಂದು ಬಿಪಿಎಲ್‌ನ 18 ಕುಟುಂಬಗಳಿಗೆ ವಿತರಿಸಲಾಗುತ್ತಿದ್ದು ಉಳಿದವುಗಳನ್ನು ಕೂಡಾ ಶೀಘ್ರದಲ್ಲೆ ವಿತರಿಸಲಾಗುವದು ಎಂದರು.
ಸದ್ಯ ಓಮಿಕ್ರಾನ್ ಎಂಬ ಹೊಸ ಪ್ರಬೇದ ಹುಟ್ಟಿದ್ದು, ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಸರಕಾರದ ನಿಯಮಾವಳಿಗಳನ್ನು ಪಾಲಿಸಬೇಕು. ಮಾಸ್ಕ್, ಸೆನಿಟೈಜರ್ ಬಳಕೆ, 2 ಡೋಸ್ ಲಸಿಕೆ ಪಡೆದುಕೊಳ್ಳುದನ್ನು ಮಾಡುವುದೊಂದಿಗೆ ಈ ಮಹಾಮಾರಿಯನ್ನು ಹಿಮ್ಮೆಟ್ಟಿಸುವ ಕಡ್ಡಾಯವಾಗಿ ಸಕಾರದ ಕಟ್ಟು ನಿಟ್ಟಿನ ಕ್ರಮಗಳನ್ನು ಪಾಲಿಸಿ ನಮ್ಮ ನಮ್ಮ ಕುಟುಂಬ ರಕ್ಷಣೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸುತ್ತೇನೆ ಎಂದರು.
ಈ ನಿಟ್ಟಿನಲ್ಲಿ ಉಡಾಫೆ ಬೇಡ ಜಾಗೃತಿ ಅವಶ್ಯವಾಗಿದೆ. ರೋಗ ನಿರ್ಮೂಲನೆಯಲ್ಲಿ ತಮ್ಮೆಲ್ಲರ ಸಹಕಾರ ಅವಶ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಸಂಜಯ ಇಂಗಳೆ, ಗ್ರೇಡ್-2 ತಹಶೀಲ್ದಾರ ಎಸ್. ಬಿ. ಕಾಂಬಳೆ, ಉಪತಹಶೀಲ್ದಾರ ಶ್ರೀಕಾಂತ ಮಾಯನ್ನವರ, ಬಸವರಾಜ ಬಿಜ್ಜರಗಿ, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ, ಮಲ್ಲು ಕವಟಕೊಪ್ಪ, ಬಸವರಾಜ ಗುಂಡಿ, ಚಂದ್ರಕಾಂತ ಹೊಸಮನಿ, ಎಸ್. ಎಸ್. ಸಜ್ಜನ, ಧರೆಪ್ಪ ಉಳ್ಳಾಗಡ್ಡಿ, ನಗರಸಭೆ ಅಧ್ಯಕ್ಷ ಶ್ರೀಶೈಲ ಬೀಳಗಿ, ಯಲ್ಲಪ್ಪ ಕಟಗಿ, ಅಶೋಕ ಹಳ್ಳೂರ, ಅರುಣ ಬುದ್ನಿ, ರವಿ ಕೊರ್ತಿ, ಸುಭಾಸ ಸಿದ್ದಪ್ಪಗೋಳ, ಅಶೋಕ ತಳವಾರ, ಪ್ರವೀಣ ಬಾರಾಟಕ್ಕೆ, ಲಾಲಸಾಬ ಸನದಿ, ಮೊಹಮ್ಮದ ಆರೀಫ, ಪ್ರಕಾಶ ಮಾಲಾಪೂರ ಸೇರಿದಂತೆ ಅನೇಕರು ಇದ್ದರು.