Advertisement

ಸರ್ಕಾರದ ಯೋಜನೆ ಸದುಪಯೋಗ ಪಡಿಸಿಕೊಳ್ಳಿ

11:59 AM Oct 17, 2017 | Team Udayavani |

ಕೆಂಗೇರಿ: ಉದ್ಯಮ ಸ್ಥಾಪಿಸುವ ಮೂಲಕ ಇತರರಿಗೂ ಉದ್ಯೋಗ ಅವಕಾಶ ಕಲ್ಪಿಸಿ ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೆಮ್ಮಿಗೆಪುರ ವಾರ್ಡ್‌ನ ಬಿಬಿಎಂಪಿ ಸದಸ್ಯ ಆರ್ಯಶ್ರೀನಿವಾಸ್‌ ಹೇಳಿದರು. 

Advertisement

ಬಿಬಿಎಂಪಿ ರಾಜರಾಜೇಶ್ವರಿ ವಲಯ ಕಲ್ಯಾಣ ಇಲಾಖೆಯ ವತಿಯಿಂದ ನಿರುದ್ಯೋಗ ಯುವಕ ಯುವತಿಯರಿಗೆ ಸ್ವ ಉದ್ಯೋಗ ತೊಡಗಿಸಿಕೊಳ್ಳಲು ರೂಪಿಸಿರುವ ಯೋಜನೆಯ ಅಂಗವಾಗಿ ಲಘು ಮೋಟಾರ್‌ ವಾಹನ ಮಂಜೂರಾದ ಫ‌ಲಾನುಭವಿಗಳಿಗೆ “ಕೀ’ ಹಸ್ತಾಂತರಿಸಿ ಮಾತನಾಡಿ, ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಜೀವನ ಕ್ರಮವನ್ನು ಉತ್ತಮ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಹೆಮ್ಮಿಗೆಪುರ ವಾರ್ಡ್‌ ಕಾಂಗ್ರೆಸ್‌ನ ಅಧ್ಯಕ್ಷ ಮೈಲಸಂದ್ರ ನಾಗರಾಜ್‌ ಮಾತನಾಡಿ, ನಿರುದ್ಯೋಗ ನಿವಾರಣೆಗಾಗಿ ಸರ್ಕಾರ ರೂಪಿಸಿರುವ ಯೋಜನೆಯ ಸದುಪಯೋಗ ಪಡಿಸಿಕೊಂಡು ಕಾಯಕದ ಮಹತ್ವ ಅರಿತು ವಿದ್ಯಾರ್ಥಿಗಳು ಕಾರ್ಯನಿರ್ವಹಿಸುವ ಮೂಲಕ ಉತ್ತಮ ಜೀವನ ರೂಪಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.

ಅಗರ ಜಿಪಂ ಕಾಂಗ್ರೆಸ್‌ ಮುಖಂಡ ಹನುಮಂತೇಗೌಡ, ಹೆಮ್ಮಿಗೆಪುರ ವಾರ್ಡ್‌ನ ತಾಂತ್ರಿಕ ವಿಭಾಗದ ಸಹಾಯಕ ಅಭಿಯಂತರ ದಯಾನಂದ್‌, ಹೆಮ್ಮಿಗೆಪುರ ವಾರ್ಡ್‌ ಕಾಂಗ್ರೆಸ್‌ ಉಪಾಧ್ಯಕ್ಷ ಪ್ರಕಾಶ್‌, ಮುಖಂಡರಾದ ಪ್ರತಾಪ್‌, ಗೋಪಾಲ್‌, ರಾಜೇಶ್‌, ಮಹದೇವ್‌, ನಾರಾಯಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next