ಸುಳ್ಯ: ರೈತರನ್ನು ಗಮನ ದಲ್ಲಿಟ್ಟು ಕಿಸಾನ್ ಕಾರ್ಡ್ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆ ಮಹತ್ವದ್ದಾಗಿದ್ದು, ರೈತರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಹಾಯಕ ತೋಟಗಾರಿಕ ನಿರ್ದೇಶಕ ಅರಬಣ್ಣ ಪುಜೇರಿ ಹೇಳಿದರು.
75ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಕನಕಮಜಲು ಗ್ರಾ. ಪಂ. ಸಭಾಭವನದಲ್ಲಿ ಆಯೋಜಿಸಿದ್ದ ಕಿಸಾನ್ ಕಾರ್ಡ್ ಅಭಿಯಾನದಲ್ಲಿ ಅವರು ಮಾತನಾಡಿದರು.
ಕಿಸಾನ್ ಕಾರ್ಡ್ ಮಾಡಿಕೊಳ್ಳುವ ರೈತರು ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ವಿವಿಧ ಪ್ರಯೋಜನಗಳನ್ನು ಪಡೆಯ ಬಹುದಾಗಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ಪಡೆಯುತ್ತಿರುವ ರೈತರು ಕಿಸಾನ್ ಕ್ರೆಡಿಟ್ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದರು.
ಗ್ರಾ. ಪಂ. ಉಪಾಧ್ಯಕ್ಷೆ ದೇವಕಿ, ಸದಸ್ಯರಾದ ಶಾರದಾ, ಇಬ್ರಾಹಿಂ ಕಾಸಿಂ, ಪಿಡಿಒ ಸರೋಜಿನಿ ಉಪಸ್ಥಿತರಿದ್ದರು. ಕನಿಷ್ಠ ದಾಖಲೆ ಮೂಲಕ ಸಾಲ ಪಡೆಯಲು ಸಹಕಾರಿ ಗ್ರಾ.ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ರೈತರಿಗೆ ಪೂರಕವಾದ ಯೋಜನೆ. ಅದನ್ನು ಮಾಡಿಸಲು ಗ್ರಾ.ಪಂ.ನಲ್ಲಿ ಅವಕಾಶ ನೀಡಿರುವುದರಿಂದ ಗ್ರಾಮಸ್ಥರಿಗೆ ಅನುಕೂಲವಾಗಿದ್ದು, ರೈತರು, ಹೈನುಗಾರರು ಪ್ರಯೋಜನ ಪಡೆಯಬಹುದಾಗಿದೆ. ಕನಿಷ್ಠ ದಾಖಲೆ ಮೂಲಕ ಸಾಲ ಪಡೆಯಲು ಇದು ಸಹಕಾರಿ ಎಂದರು.